ಗಿಣಿಗೇರಾ ಅಮೃತ ಸರೋವರ ದಡದಲ್ಲಿ ಸಂವಿಧಾನ ದಿನಾಚರಣೆ

Get real time updates directly on you device, subscribe now.

  ಸಂವಿಧಾನ ದಿನ ನವೆಂಬರ್ 26ರ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯತಿ ಹಾಗೂ ಕೆರೆ ಅಭಿವೃದ್ದಿ ಸಮಿತಿ ವತಿಯಿಂದ ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.  
ಕಾರ್ಯಕ್ರಮದ ಕುರಿತು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಗೂಳಪ್ಪ ಹಲಗೇರಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರು ಸಮಾಜದಲ್ಲಿರುವ ಮೌಡ್ಯತೆಗಳನ್ನು ಹೊಡೆದೊಡಿಸಲು ಅವಿರತವಾಗಿ ಶ್ರಮಿಸಿದರು. ಭಾರತ ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಮಾಜದಲ್ಲಿ ಅಸಮಾನತೆ, ಮೂಡನಂಭಿಕೆ ಇತ್ಯಾದಿಗಳನ್ನು ಶಾಶ್ವತವಾಗಿ ತೊಲಗಿಸಲು ಬರವಣಿಗೆಯ ರೂಪದಲ್ಲಿ ಭಾರತ ದೇಶದ ಸಂವಿಧಾನಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಮಹಾನ್ ನಾಯಕರಾಗಿದ್ದಾರೆ.
ಕೆರೆ ಸಮಿತಿ ಅಧ್ಯಕ್ಷರಾದ ಸುಬ್ಬಣ್ಣಾಚಾರ್ ಮಾತನಾಡಿ, ದೇಶದ ಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಪ್ರತಿ ವರ್ಷ ಸಂವಿಧಾನ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಸಂವಿಧಾನ ಪೀಠಿಕೆಯನ್ನು ಕಾರ್ಯಕ್ರಮದಲ್ಲಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಗಿಣಿಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಂಜಿತಾ ಚವ್ಹಾಣ್, ಉಪಾಧ್ಯಕ್ಷರಾದ ಮಂಜುನಾಥ ಪಾಟೀಲ್, ಸದಸ್ಯರಾದ ಶಶಿಕಲಾ ಗೊಡಕಾರ್, ಯಮನಪ್ಪ ಕಟಗಿ ಹಾಗೂ ಲಕ್ಷ್ಮಣ  ಡೊಳ್ಳಿನ, ಪಂಚಾಯತ ಅಭಿವದ್ಧಿ ಅಧಿಕಾರಿ ಮಂಜುಳಾದೇವಿ ಹೂಗಾರ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಮದ ಮುಖಂಡರಾದ ನೀಲಪ್ಪ ಮೂರಮನಿ, ಗುರಪ್ಪ ಗುಡೇಕಾರ, ಯಮನೂರಪ್ಪ ಚವ್ಹಾಣ್, ಶ್ರೀನಿವಾಸ ಪೂಜಾರ, ಸುಭಾಸ ಹಲಗೇರಿ, ಚಂದ್ರಶೇಕರ ದೊಡ್ಡಮನಿ, ಮಲ್ಲಿಕಾರ್ಜುನ ಹಲಗೇರಿ, ಆನಂದ ಮೂರಮನಿ, ರವಿಕುಮಾರ ಹಲಗೇರಿ, ಹನಮೇಶ್ ನಾಯಕ, ಶಾಲಾ ಮುಖ್ಯೋಪಾಧ್ಯಾಯರಾದ ಸದಾನಂದ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಂಜುನಾಥ ಗ್ರಾಮ ಪಂಚಾಯತಿ ಸಿಬ್ಬಂದಿ ಈಶ್ವರಯ್ಯ ಪೋಲಿಸ್ ಪಾಟೀಲ್, ರಾಜಾಭಕ್ಷಿ, ತಾಂತ್ರಿಕ ಸಹಾಯಕಿ ಅಕ್ಷತಾ, ಬಿ.ಎಫ್.ಟಿ ದಾವಲಸಾಬ, ಆಶಾ ಕಾರ್ಯಕರ್ತರು, ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!