ಯುವ ಸಂಘಗಳ ನೊಂದಣಿ, ನವೀಕರಣಕ್ಕೆ ಅರ್ಜಿ ಆಹ್ವಾನ

Get real time updates directly on you device, subscribe now.

  ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಣಿಯಾದ ಯುವಕ-ಯುವತಿ ಸಂಘಗಳನ್ನು ನವೀಕರಣ ಮತ್ತು ಹೊಸದಾಗಿ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಇಲಾಖೆಯಲ್ಲಿ ನೋಂದಣಿಯಾದ ಸಂಘಗಳಲ್ಲಿ ಹಲವಾರು ಸಂಘಗಳು ನವೀಕರಣ ಆಗಿರುವುದಿಲ್ಲ. ಇಲಾಖೆಯಲ್ಲಿ ನೋಂದಣಿಯಾದ ಯುವಕ ಯುವತಿ ಸಂಘಗಳನ್ನು ಸಂಬಂಧಪಟ್ಟ ಅಧ್ಯಕ್ಷರು, ಕಾರ್ಯದರ್ಶಿಗಳು ಬೈಲಾ ಕಾಫಿ ಝರಾಕ್ಸ್ ಪ್ರತಿ ಹಾಗೂ ಇಲಾಖೆಯ ನೋಂದಣಿ ಪತ್ರ ಝರಾಕ್ಸ್ ಪ್ರತಿಯೊಂದಿಗೆ ನವೆಂಬರ್ 30 ರೊಳಗಾಗಿ ನವೀಕರಣ ಮಾಡಿಸಬೇಕೆಂದು ಎಂದು ತಿಳಿಸಿದ್ದಾರೆ.
ನೂತನ ಸಂಘಗಳ  ನೊಂದಣಿ: ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಯುವಕ ಯುವತಿ ಸಂಘಗಳು ಇಲಾಖೆಯಲ್ಲಿ ನೋಂದಣಿಗಾಗಿ ಅಗತ್ಯ ದಾಖಲೆಗಳಾದ ಬೈಲಾ ಪ್ರತಿ, ಸಹಕಾರ ಸಂಘ ನೊಂದಣಿ ಪ್ರತಿ, ಸಂಘದ ಸದಸ್ಯರ ಝರಾಕ್ಷ ಪ್ರತಿಯೊಂದಿಗೆ ಸೇವಾಸಿಂಧೂ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಾರ್ಯಾಲಯ,  ದೂರವಾಣಿ ಸಂ. 08539-230121 ಗೆ  ಸಂಪರ್ಕಿಸಬಹುದಾಗಿದೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!