ನ 28ರಂದು ಶಿಶುಕ್ಷ ಮೇಳ, ಉದ್ಯೋಗ ನೇಮಕಾತಿಗೆ ಕ್ಯಾಂಪಸ್ ಸಂದರ್ಶನ

Get real time updates directly on you device, subscribe now.

  ಕೊಪ್ಪಳದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನವೆಂಬರ್ 28ರಂದು ಬೆಳಿಗ್ಗೆ 9 ಗಂಟೆಗೆ ಶಿಶುಕ್ಷ ಮೇಳ, ಉದ್ಯೋಗ ನೇಮಕಾತಿಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ ತೋರಣಗಲ್ ಜೆ.ಎಸ್.ಡಬ್ಲ್ಯೂ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕಾ ಕಂಪನಿಗಳು ಬಾಗವಹಿಸಲಿದ್ದು, ಎಲೆಕ್ಟ್ರಿಷಿಯನ್, ಪಿಟ್ಟರ್, ಟರ್ನರ್, ವೆಲ್ಡರ್ ಮತ್ತು ಅಡ್ವಾನ್ಸ್ಡ್ ಸಿ.ಎನ್.ಸಿ (ಮಷಿನಿಂಗ್ ಟೆಕ್ನಿಷಿಯನ್) ವೃತ್ತಿಯ ತರಬೇತಾರ್ಥಿಗಳು ಈ ಅವಕಾಶದ ಸದುಪಯೋಗಪಡಿಸಿಕೊಳ್ಳಬೇಕು.  ಈ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು 50 ಕೆ.ಜಿ ಸಾಮಾನ್ಯ ತೂಕ ಹಾಗೂ 165ಸೆ.ಮಿ ಸಾಮಾನ್ಯ ಎತ್ತರ ಹೊಂದಿರಬೇಕು.  ಮತ್ತು ಮೂಲ ದಾಖಲಾತಿಗಳಾದ ರೆಸ್ಯೂಮ್, ಪೋಟೋ, ಮಾರ್ಕ್ಸ್ ಕಾರ್ಡ್, ಎನ್.ಟಿ.ಸಿ ಮತ್ತು 2 ಝರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು, (ಟಣಕನಕಲ್, ಕುಷ್ಟಗಿ ರಸ್ತೆ, ಕೊಪ್ಪಳ) ಮೊಬೈಲ್ ಸಂಖ್ಯೆ: 9448813422, 9742532353, 9945577155, 9945672606, 9008536895 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯರಾದ ಗವಿಶಂಕರ್ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!