ವಿಪತ್ತು ನಿರ್ವಹಣೆಯಲ್ಲಿ ಮುಂಜಾಗೃತೆ, ಪೂರ್ವಸಿದ್ಧತೆ ಅತ್ಯಗತ್ಯ: ಕ್ಯಾ ಮಹೇಶ್ ಮಾಲಗಿತ್ತಿ

Get real time updates directly on you device, subscribe now.

: ಎಲ್ಲಾ ಅಧಿಕಾರಿಗಳು ವಿಪತ್ತು ನಿರ್ವಹಣೆಯಲ್ಲಿ ಮುಂಜಾಗೃತೆ ಮತ್ತು ಪೂರ್ವಸಿದ್ಧತೆ ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹೇಳಿದರು.

 ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಿಲ್ಲಾ ತರಬೇತಿ ಸಂಸ್ಥೆ ಹಾಗೂ ಜಿಲ್ಲಾಡಳಿತ ಕೊಪ್ಪಳ ರವರ ಸಹಬಾಗಿತ್ವದಲ್ಲಿ ಜಿಲ್ಲಾ ಕೇಂದ್ರಿತ ವಿಕೋಪ ನಿರ್ವಹಣಾ ಯೋಜನೆಯ ಕುರಿತು ಜಿಲ್ಲೆಯ ವಿವಿಧ ಇಲಾಖೆಯ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ನಗರದ ತಹಶೀಲ್ದಾರ ಕಾರ್ಯಾಲಯದ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ವಿಕೋಮ ನಿರ್ವಹಣೆ ಕಾಯ್ದೆಗಳ ಬಗ್ಗೆ ತಿಳಿದುಕೊಂಡು ಸರಿಯಾಗಿ ಕಾರ್ಯನಿರ್ವಹಿಸಬೇಕು. ವಿಪತ್ತು ಸಂದರ್ಭದಲ್ಲಿ 24*7ರಂತೆ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಇಲಾಖೆಗಳ ಪ್ರತಿ ಇಲಾಖೆಯಲ್ಲು ವಿಕೋಪ ನಿರ್ವಹಣೆಯ ಜಾಗೃತಿ ಪೂರ್ವಸಿದ್ದತೆ ಸ್ಪಂದನೆ ಮತ್ತು ಪುನರ್ ವಸತಿ ವಿಷಯಗಳ ಬಗ್ಗೆ ಯೋಜನೆಯನ್ನು ಸಿದ್ದಪಡಿಸಿಕೊಳ್ಳಬೇಕು. ಜಿಲ್ಲಾ ಕೇಂದ್ರಿತ ವಿಕೋಪ ನಿರ್ವಹಣಾ ಯೋಜನೆಯ ಪರಿಷ್ಕರಣೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಜಿಲ್ಲಾ ಕೇಂದ್ರಿತ ವಿಕೋಪ ನಿರ್ವಹಣಾ ಯೋಜನೆ–ಕೊಪ್ಪಳ ಜಿಲ್ಲೆ ವಿಷಯದ ಕುರಿತು ಜಿಲ್ಲೆಯ ವಿವಿಧ ಇಲಾಖೆಯ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ನ.26 ಮತ್ತು 27ರಂದು ಎರಡು ದಿನಗಳ ಕಾಲ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಕೋಪ ನಿರ್ವಹಣಾ ಕೇಂದ್ರ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಬೋಧಕರಾದ ಡಾ.ಪರಮೇಶ ಜೆ.ಆರ್., ಕೊಪ್ಪಳ ತಹಶೀಲ್ದಾರ ವಿಠಲ್ ಚೌಗಲ ಸೇರಿದಂತೆ ಮತ್ತಿತರರಿದ್ದರು.
ವಿಶೇಷ ತರಬೇತಿ: ವಿಕೋಪ ನಿರ್ವಹಣಾ ಕೇಂದ್ರ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಬೋಧಕರಾದ ಡಾ.ಪರಮೇಶ್ ಜೆ.ಆರ್ ಅವರು ಕಾರ್ಯಕ್ರಮವನ್ನು ಸಂಯೋಜನೆ ಮಾಡಿ, ವಿಕೋಪ ನಿರ್ವಹಣಾ ಯೋಜನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತರಬೇತಿಯಲ್ಲಿ ವಿವಿಧ ಇಲಾಖೆಗಳ ಎ ಮತ್ತು ಬಿ ವೃಂದದ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ತರಬೇತಿ ಸಂಸ್ಥೆಯ ಭೋದಕಿ ನರ್ಮದಾ ಅವರು ಸ್ವಾಗತ ಕಾರ್ಯಕ್ರಮ ನಡೆಸಿದರು ಮತ್ತು ಜಿಲ್ಲಾ ತರಬೇತಿ ಸಂಸ್ಥೆಯ ಭೋದಕ   ಎಂ ಶ್ರೀಧರ್ ಅವರು ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!