ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ
Koppal ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಇವರ ಸಂಯುಕ್ತ ಆಶ್ರಯದಲ್ಲಿ
“ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ ಕಾರ್ಯಕ್ರಮ ಮತ್ತು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ”ಬೇಟಿ ಬಚಾವ್ ಬೇಟಿ ಪಡಾವೋ ಅಭಿಯಾನ 2024 ಈ ಕಾರ್ಯಕ್ರಮವನ್ನು ಮಾಂತೇಶ್ ಎಸ್ ದರ್ಗದ್ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ, ಉದ್ಘಾಟಿಸಿದರು.
ನಂತರ 25 ನವಂಬರ್ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ ಎಂದು ಆಚರಿಸುತ್ತೇವೆ ಮಹಿಳಾ ದೌರ್ಜನ್ಯ ನಿರ್ಮೂಲನೆ ತಡೆಯಲು ಇಂತಹ ಕಾರ್ಯಕ್ರಮಗಳಲ್ಲಿ ಮುಂದೆ ಕ್ರಮ ಕೈಗೊಳ್ಳುವಳ್ಳಿ ಮುಖ್ಯ ಪಾತ್ರ ವಹಿಸುತ್ತೇವೆ. ಸಾಮಾಜಿಕವಾಗಿ ಆರ್ಥಿಕವಾಗಿ ಸಬಲರಾಗಬೇಕು ಪುರುಷ ಪ್ರಧಾನ ಸಮಾಜ ಆಗಿದ್ದು ಮಹಿಳಾ ಪ್ರಧಾನ ಸಮಾಜ ನಿರ್ಮಾಣ ಮಾಡಬೇಕು. ಪುರುಷರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದೆ ಸಮಾಜದಲ್ಲಿ ಕೃತ್ಯ ಎಸೆಗಿದ್ದಾಗ ಪ್ರಶ್ನಿಸುವ ಹಕ್ಕು ಸ್ತ್ರೀಗೆ ಇದೆ ಎಂದು ತಿಳಿಸಿದರು ಎಲ್ಲರೂ ಸಮಾನರು ಎಂದರು ಸಹ ಮಹಿಳಾ ಸ್ಥಾನ ಹಿಂದೆ ಇದೆ. ಮಹಿಳಾ ಸುಧಾರಣೆ, ಇನ್ನು ಆಗಬೇಕು ಮಹಿಳೆಯರು ಹಿಂದಿ ಉಳಿಯುವುದಕ್ಕೆ ಸಮಾಜನೆ ಕಾರಣ. ಎಂದು ನ್ಯಾಯಾಧೀಶರು ಹೇಳಿದರು.ಮುಖ್ಯ ಅತಿಥಿಗಳಾಗಿ ಎ .ವಿ. ಕಣವಿ ಮಾನ್ಯ ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ ,ಕೊಪ್ಪಳ. ಪಿ. ವೈ. ಶೆಟ್ಟಪ್ಪನವರ್ ಮಾನ್ಯ ಉಪನಿಷಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಶ್ರೀಮತಿ ರೂಪ ಗಂಧದ್ ಶಿಶು ಅಭಿವೃದ್ಧಿ ಇಲಾಖೆ ಕೊಪ್ಪಳ ಶ್ರೀಮತಿ ರೋಹಿಣಿ ಕೊಟಗಾರ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕೊಪ್ಪಳ ಶ್ರೀಮತಿ ಶಿವಲೀಲಾ ಹೊನ್ನೂರು, ಎಲ್. ಪಿ .ಓ ಡಿ.ಸಿ.ಪಿ.ಯು.ಕೊಪ್ಪಳ ಹನುಮಂತ್ ರಾವ್, ವಕೀಲರು ಕೊಪ್ಪಳ. ಹಾಗೂ ಆಶಾ ಕಾರ್ಯಕರ್ತರು ಮತ್ತು ಇನ್ನು ಅನೇಕ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments are closed.