ಬಹುಜನ ಸಮಾಜ ಪಾರ್ಟಿಯ ಕೊಪ್ಪಳ ಜಿಲ್ಲೆಯ ವಿವಿಧ ಪದಾಧಿಕಾರಿಗಳ ಆಯ್ಕೆ.

Get real time updates directly on you device, subscribe now.


ಗಂಗಾವತಿ: ನವೆಂಬರ್-೨೫ ಸೋಮವಾರ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿಗಳಾದ ಮಹಾದೇವ ಧಿನ್ನಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕಲ್ಲಪ್ಪ ತೊರವಿ, ಯಶವಂತ ಪೂಜಾರಿ ಇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾಗಿ ಗೋಪಾಲಕೃಷ್ಣ ಎಸ್.ವಿ. ಮತ್ತು ಸಿ.ಡಿ., ದೊಡ್ಡಮಾರೆಪ್ಪ, ಜಿಲ್ಲಾ ಸಂಯೋಜಕರಾಗಿ ಮಹೆಬೂಬಖಾನ್ ಮತ್ತು ದುರಗಪ್ಪ ತಾಳಕೇರಿ, ಜಿಲ್ಲಾಧ್ಯಕ್ಷರಾಗಿ ಹುಲಿಗೇಶ ದೇವರಮನಿ, ಜಿಲ್ಲಾ ಉಪಾಧ್ಯಕ್ಷರಾಗಿ ನಿಂಗಪ್ಪ ನಾಯಕ, ಜಿಲ್ಲಾ ಖಜಾಂಚಿಯಾಗಿ ಶಾಂತಕುಮಾರ ಭೋವಿ, ಜಿಲ್ಲಾ ಕಛೇರಿ ಕಾರ್ಯದರ್ಶಿಯಾಗಿ ಎಂ. ಸಂತೋಷಕುಮಾರ ನೇಮಕಗೊಂಡರು.
ನೇಮಕಗೊಂಡ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ, ಪಕ್ಷವನ್ನು ಜಿಲ್ಲೆಯಾಧ್ಯಂತ ಬಲವರ್ಧನೆಗೊಳಿಸಲು ತಿಳಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!