ಬೈ ಎಲೆಕ್ಷನ್ ಗೆಲುವು : ಗ್ಯಾರಂಟಿ ಸರಕಾರವನ್ನು ಟೀಕಿಸಿದ್ದಕ್ಕೆ ದೇವರು ಕೊಟ್ಟ ಉತ್ತರ : ಜ್ಯೋತಿ

Get real time updates directly on you device, subscribe now.

ಕೊಪ್ಪಳ: ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಸಾಧಿಸಿದ್ದು, ಗ್ಯಾರಂಟಿ ಸರಕಾರಕ್ಕೆ ದೇವರು ( ಮತದಾರರು ) ನೀಡಿದ ತೀರ್ಪು ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಸಂತಸ ವ್ಯಕ್ತಪಡಿಸಿದರು.
ಅವರು ಉಪಚುನಾವಣೆ ಗೆಲುವಿನಲ್ಲಿ ಪ್ರತಿ ನಾಯಕ ಕಾರ್ಯಕರ್ತರ ಶ್ರಮವಿದೆ, ತಾವೂ ಎರಡು ಮೂರು ದಿನ ಪ್ರಚಾರದಲ್ಲಿ ಭಾಗವಹಿಸಿದಾಗಲೇ ಗೆಲುವಿನ ಲಕ್ಷಣ ಗೋಚರಿಸಿತ್ತು ಎಂದರು.
ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ, ಜನ ಸಾಮಾನ್ಯರು, ಬಡವರು ತಮ್ಮ ಬದುಕನ್ನು ಸುಂದರವಾಗಿ ನಡೆಸುತ್ತಿದ್ದಾರೆ, ಅದಕ್ಕೆ ಬಿಜೆಪಿಯವರ ಸುಖಾಸುಮ್ಮನೆ ಮಾಡುತ್ತಿದ್ದ ಟೀಕೆಗಳನ್ನು ಲೆಕ್ಕಿಸದೇ ನಿಜವಾದ ಉತ್ತರ ಕೊಟ್ಟಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೂ ಜನ ಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಜನಪರವಾಗಿ ಕೆಲಸ ಮಾಡುತ್ತಿದೆ ನಿಶ್ಚಿತವಾಗಿ ಮುಂದೆಯೂ ನಮ್ಮ ಸರಕಾರವೇ ಅಧಿಕಾರಕ್ಕೆ ಬರುತ್ತದೆ, ಜನರು ಭಯಪಡದೇ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು, ಧರ್ಮಗಳನ್ನು ಮುಂದಿಟ್ಟು, ಸುಳ್ಳುಗಳನ್ನು ಮುಂದಿಟ್ಟು ಮಾಡುವ ರಾಜಕಾರಣ ಅಂತ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!