ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಗೆ ಆಹ್ವಾನ: ಗುಡಿಕೋಟಿ

Get real time updates directly on you device, subscribe now.

 

ಗಂಗಾವತಿ: ಆದಿ ಅನಾದಿ ಕಾಲದಿಂದ ಸಾಹಿತ್ಯದಲ್ಲಿ ಚುಟುಕಿಗೆ ಪ್ರಾಧಾನ್ಯತೆ ಸಿಕ್ಕಿದೆ. ರಾಜ್ಯಮಟ್ಟದಲ್ಲಿ ಚುಟುಕು ಸಾಹಿತ್ಯ ಪರಿ?ತ್ತು ಗುರುತಿಸಿಕೊಂಡಂತೆ ಕೊಪ್ಪಳ ಜಿಲ್ಲೆಯು ಹಿಂದೆ ಬಿದ್ದಿಲ್ಲ. ದಿ|| ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ನಿರಂತರ ೧೨ ವ? ಕೊಪ್ಪಳದ ಚುಟುಕು ಸಾಹಿತ್ಯ ಪರಿ?ತ್ತಿನ ಪೋ?ಕರಾಗಿ ಮುನ್ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕೊಪ್ಪಳ ಚುಟುಕು ಸಾಹಿತ್ಯ ಪರಿ?ತ್ತಿಗೆ ಜೀವ ತುಂಬುವ ಹಾದಿಯಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಗೆ ಕವಿಗಳಿಗೆ ಆಹ್ವಾನ ನೀಡಲಾಗಿದೆ. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿ?ತ್ತನ್ನು ಡಾ. ಎಂ.ಜಿ.ಆರ್ ಅರಸ್ ಉದ್ಘಾಟಿಸಲಿದ್ದು, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿಸೆಂಬರ್-೧ ರಂದು ಸಂಜೆ ೪ ರಿಂದ ೯ ರವರೆಗೆ ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ಶಾಂತಿನಿಕೇತನ ಕಟ್ಟಡ ಆವರಣದ ಸೇಂಟ್ ಫಾಲ್ಸ್ ಪದವಿ ಕಾಲೇಜ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದ್ದು, ಭಾಗವಹಿಸುವ ಕವಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ಭಾಗವಹಿಸುವ ಆಸಕ್ತ ಕವಿಗಳು, ಕವಿಯಿತ್ರಿಯರು ತಮ್ಮ ಹೆಸರನ್ನು ಶಿವಪ್ರಸಾದ್ ಹಾದಿಮನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಚುಟುಕು ಸಾಹಿತ್ಯ ಪರಿ?ತ್ ಕೊಪ್ಪಳ ಮೊ: ೭೯೯೬೭೯೦೧೮೯ ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಹೆಸರು ನೋಂದಾಯಿಸಲು ನವಂಬರ್ ೨೫ ಕೊನೆ ದಿನವಾಗಿದೆ. ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!