ನ.24ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
: ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110/33/11ಕೆವಿ ಎಂ.ಎಂ.ಯು.ಎಸ್ ಕೊಪ್ಪಳ ಸ್ಟೇಷನ್‌ಗೆ ಒಳಪಡುವ ಎಫ್ 09 ಬನ್ನಿಕಟ್ಟಿ ಫೀಡರನ್ ತುರ್ತು ನಿರ್ವಹಣೆ ಕೆಲಸ ನಡೆಸುತ್ತಿರುವ ಪ್ರಯುಕ್ತ ಈ ಸ್ಟೇಷನಗೆ ಒಳಪಡುವ ಎಲ್ಲ ಮಾರ್ಗಗಳಲ್ಲಿ ನವೆಂಬರ್ 24ರಂದು ಬೆಳಿಗ್ಗೆ 10.30 ಗಂಟೆಯಿಂದ ಸಾಯಂಕಾಲ 04.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ಎಫ್-09 ಬನ್ನಿಕಟ್ಟಿ ಫೀಡರ್‌ಗೆ ಒಳಪಡುವ ಐ.ಬಿ ಎದುರುಗಡೆ, ನೌಕರ ಭವನ, ಸತ್ಯದಾನಪೂರ, ಫಿರ್ ದೋಸ್ ನಗರ, ವಿದ್ಯಾನಗರ, ಎಸ್ ಬಿ ಐ ಬ್ಯಾಂಕ್, ಬಸ್ ಸ್ಟ್ಯಾಂಡ್ ಏರಿಯಾ, ಬನ್ನಿಕಟ್ಟಿ, ಗದಗ ರೋಡ್, ಲೇಬರ್ ಸರ್ಕಲ್, ರೇಲ್ವೆ ಸ್ಟೇಷನ್ ಏರಿಯಾ ಈ ಎಲ್ಲಾ ಮಾರ್ಗಗಳು 11 ಕೆವಿ ಲೈನಗಳು ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.