ನ.೨೪ರಂದು ನಗೆ ಬೃಂದಾವನ ಹಾಸ್ಯ ಕಾರ್ಯಕ್ರಮ

Get real time updates directly on you device, subscribe now.


ಗಂಗಾವತಿ: ಹಾಸ್ಯಲೋಕ ಸಂಘಟನೆಯಿಂದ ನ.೨೪ರಂದು ಕೋರ್ಟ್ ಎದುರುಗಡೆ, ಹೆಡ್‌ಪೋಸ್ಟ್ ಆಫೀಸ್ ಪಕ್ಕದಲ್ಲಿರುವ ಶ್ರೀ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ಸಂಜೆ ೫.೩೦ಕ್ಕೆ ನಗೆ ಬೃಂದಾವನ ಹಾಸ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಾಸಕ ಜಿ. ಜನಾರ್ಧನರೆಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಸುವರ್ಣಗಿರಿ ದಿನಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಜೂ. ಉಪೇಂದ್ರ ಆರ್.ಡಿ. ಬಾಬು, ನೀನಾಸಂ ಇಸ್ಮಾಯಿಲ್, ಶರಣಪ್ಪ ಅರಿಕೇರಿ, ರಾಚಯ್ಯಸ್ವಾಮಿ, ಹುಸೇನ್‌ಭಾಷ, ಮಂಜುನಾಥ ಜಿ. ಅವರು ಹಾಸ್ಯದ ರಸದೌತಣ ಉಣಬಡಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಮೌಲಾಸಾಬ್, ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಮಾಜಿ ಶಾಸಕ ಜಿ. ವೀರಪ್ಪ ಕೇಸರಹಟ್ಟಿ, ಮಾಜಿ ಸಂಸದ ಶಿವರಾಮಗೌಡ, ವಾಣಿಜ್ಯೋದ್ಯಮಿ ಕೆ. ಕಾಳಪ್ಪ, ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಕಳಕನಗೌಡ ಮಾಲಿಪಾಟೀಲ, ವಾಣಿಜ್ಯೋದ್ಯಮಿ ಸುರೇಶ ಸಿಂಗನಾಳ, ಜಿ.ಪಂ ಮಾಜಿ ಸದಸ್ಯ ಹೆಚ್.ಎಂ. ಸಿದ್ರಾಮಯ್ಯಸ್ವಾಮಿ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ನಯೋಪ್ರಾ ಮಾಜಿ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ, ನಗರಸಭೆ ಸದಸ್ಯರಾದ ನವೀನ್‌ಕುಮಾರ ಮಾಲಿಪಾಟೀಲ, ವಾಸುದೇವ ನವಲಿ, ಎಫ್. ರಾಘವೇಂದ್ರ, ಜಿ.ಪಂ ಮಾಜಿ ಸದಸ್ಯೆ ಶಾಂತಾ ರಮೇಶ ನಾಯಕ, ನಗರಸಭೆ ಸದಸ್ಯೆ ಸುನೀತಾ ಶ್ಯಾವಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ಮುಖಂಡರಾದ ಲಲಿತಾರಾಣಿ ರಾಯಲು ಅವರು, ಕಾಂಗ್ರೆಸ್ ಮುಖಂಡ ಹನುಮಂತಪ್ಪ ಅರಿಸಿನಕೇರಿ, ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ ಅವರು ನಗು ಡಿಜಿಟಲ್ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ.
ನಗೆ ಕಾರ್ಯಕ್ರಮಗಳ ಉದ್ಘಾಟನಾ ಪೋಟೊ ಡಿಜಿಟಲ್ ಕಾರ್ಡ್‌ನ್ನು ಬೆಂಗಳೂರಿನ ನಿವೃತ್ತ ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ಬಿ.ಎಸ್. ಶಾಂತಕುಮಾರ, ಕಾಂಗ್ರೆಸ್ ಮುಖಂಡ ಸರ್ವೇಶ ಎಂ. ನಾಗಪ್ಪ, ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಬಿಡುಗಡೆ ಮಾಡಲಿದ್ದಾರೆ.
ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಮಾಲಿಪಾಟೀಲ್, ಕನಕಗಿರಿ ತಹಶೀಲ್ದಾರ ವಿಶ್ವನಾಥ ಮುರುಡಿ ಅವರು ನಗು ಕಾಲೆಂಡರ್ ಬಿಡುಗಡೆ ಮಾಡಲಿದ್ದಾರೆ.
ಕಾಂಗ್ರೆಸ್ ಮುಖಂಡ ಮಾಜಿ ನಗರಸಭೆ ಅಧ್ಯಕ್ಷ ಶಾಮೀದ್ ಮನಿಯಾರ್, ಆರ್‌ಟಿಓ ನಿವೃತ್ತ ಅಧೀಕ್ಷರಾದ ಜೆ.ಬಿ. ಲಕ್ಷ್ಮಣಗೌಡ್ರು ನಗು ಮಾಹಿತಿ ಪತ್ರ ಬಿಡುಗಡೆ ಮಾಡಲಿದ್ದಾರೆ.
ನಗು ಬಯಾಗ್ರಫಿಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಕೊಟ್ಟೂರು ಬಸವೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾದ ಶಂಕರಗೌಡ ಹೊಸಳ್ಳಿ ಅವರು ಬಿಡುಗಡೆ ಮಾಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ, ನಗರಸಭೆ ನಾಮನಿರ್ದೇಶನ ಸದಸ್ಯ ಉಮರ್ ಹುಸೇನ್, ನಿವೃತ್ತ ಕೃಷಿ ಅಧಿಕಾರಿ ಐಲಿ ಜಂಬಣ್ಣ, ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ, ಚಲನಚಿತ್ರ ನಟ ವಿಷ್ಣುತೀರ್ಥ ಜೋಷಿ, ಬಿಜೆಪಿ ಮುಖಂಡ ಅಮರಜ್ಯೋತಿ ವೆಂಕಟೇಶ, ಸಿಬಿಎಸ್ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ಅಶೋಕಗೌಡ ಪಾಲ್ಗೊಳ್ಳಲಿದ್ದಾರೆ.
ಶಿಕ್ಷರಾದ ಶಾರದಮ್ಮ ಸುಂಕದ್, ಲಕ್ಷ್ಮೀದೇವಿ ಪತ್ತಾರ ಇವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಎಸ್.ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಎಂ. ಪರಶುರಾಮ ಪ್ರಿಯ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!