ಕೊಪ್ಪಳದಲ್ಲಿ ಶಿವಧೂತ ಪಂಜುರ್ಲಿ ಯಕ್ಷಗಾನ ಪ್ರದರ್ಶನ
, ಕರಾವಳಿ ಬಳಗ ಕೊಪ್ಪಳ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಹಾಗೂ ಕಲರವ ಶಿಕ್ಷಕರ ಸೇವಾ ಬಳಗ ಕೊಪ್ಪಳ ಇವರುಗಳ ಸಹಯೋಗದಲ್ಲಿ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ದಿನಾಂಕ ೨೯.೦೭.೨೦೨೩ ಶನಿವಾರ ಸಂಜೆ ೬.೩೦ ರಿಂದ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಮೇಳದವರಿಂದ ಶಿವಧೂತ ಪಂಜುರ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಇತ್ತೀಚೆಗೆ ಜನಪ್ರಸಿದ್ದಿ ಪಡೆದ ಕಾಂತಾರ ಚಲನಚಿತ್ರವನ್ನು ನೆನಪಿಸುವ ಹಲವು ವಿಶೇಷ ದೃಶ್ಯಗಳು, ವಿಶೇಷ ರೀತಿಯಲ್ಲಿ ಶ್ರೀ ಪಂಜುರ್ಲಿಯ ಪ್ರವೇಶ, ಹಾಸ್ಯ ಯಕ್ಷಗಾನ ಕಲಾವಿದ ಸತೀಶ ಹಾಲಾಡಿಯವರ ಹಾಸ್ಯ ರಸಾಯನ ಮತ್ತು ಯುವ ಭಾಗವತ ಗಣೇಶ ಬಿಲ್ಲಾಡಿಯವರಿಂದ ಭಾಗವತಿಕೆ ಪ್ರದರ್ಶನದ ವಿಶೇಷತೆಯಾಗಿದೆ. ಕರಾವಳಿ ಭಾಗದ ದೈವಾರದನೆಯ ಕುರಿತು ಯಕ್ಷಗಾನ ಬೆಳಕು ಚೆಲ್ಲಲಿದೆ.
ಯಕ್ಷಗಾನ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಉಧ್ಘಾಟಕರಾಗಿ ಸಂಸದರಾದ ಸಂಗಣ್ಣ ಕರಡಿಯವರು ಭಾಗವಹಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ರಾಘವೇಂದ್ರ ಹಿಟ್ನಾಳರವರು ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಡಿ.ವೈ.ಎಸ್.ಪಿ ಯವರಾದ ಶರಣಪ್ಪ ಸುಬೇದಾರ, ಕರ್ನಾಟಕ ರಾಜ್ಯ ಹೋಟೆಲ್ ಸಂಘ ಬೆಂಗಳೂರು ಇದರ ಗೌರವ ಕಾರ್ಯದರ್ಶಿಗಳಾದ ಜೆ.ಕೆ ಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇದರ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಇದರ ಸಹಾಯಕ ನಿರ್ದೇಶಕರಾದ ಕೊಟ್ರೇಶ, ಕೊಪ್ಪಳ ನಗರಸಭಾ ಸದಸ್ಯರಾದ ಅರುಣಶೆಟ್ಟಿ, ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ, ಉದ್ಯಮಿಗಳಾದ ಜೀವನ ಶೆಟ್ಟಿ, ಕೊಪ್ಪಳ ಹೋಟೆಲ್ ಮಾಲಿಕರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಶೆಟ್ಟಿ ಮತ್ತು ವಾಸು, ಶಿಕ್ಷಕರ ಕಲಾ ಸಂಘ, ಕೊಪ್ಪಳ ಇದರ ಪ್ರಧಾನ ಕಾರ್ಯದರ್ಶಿಗಳಾದ ಪ್ರಾಣೇಶ್ ಪೂಜಾರ ಹಾಗೂ ಮಂದರ್ತಿ ಮೇಳದ ಭಾಗವತರಾದ ಸದಾಶಿವ ಅಮೀನ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೊಪ್ಪಳ ಜನತೆಗೆ ಯಕ್ಷಗಾನದ ಸವಿರುಚಿಯನ್ನು ಪಡೆಯಲು ಇದೊಂದು ಸದಾವಕಾಶವಾಗಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಜನತೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರಾವಳಿ ಬಳಗ ವಿನಂತಿಸಿಕೊಂಡಿದೆ.
Comments are closed.