ಸಮ ಸಮಾಜದ ಕನಸು ಗ್ಯಾರಂಟಿ ಯೋಜನೆಗಳಿಂದ ನನಸಾಗುತ್ತಿದೆ. — ಶಾಸಕ ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

ಹಿರೇಸಿಂದೋಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಕಾರ್ಯಕ್ರಮ.

 

ಕೊಪ್ಪಳ : ಕೊಪ್ಪಳ ಮತಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಇಂದು ಹಿರೇಸಿಂದೋಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ದದೇಗಲ್, ಹಲಿಗೇರಿ, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಗುನ್ನಲ್ಲಿ, ವರತಟ್ನಾ ಳ ಹಾಗೂ ಮಂಗಳಾಪುರ ಗ್ರಾಮಗಳಲ್ಲಿ ಅಂದಾಜು ಮೊತ್ತ 4.5 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದರು.

 

ನಂತರ ಮಾತನಾದಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ.ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಎಲ್ಲಾ ವರ್ಗಗಳ ಜನರನ್ನು ಸಮಾನವಾಗಿ ತಲುಪುತ್ತಿವೆ.ಇದರಿಂದ ಸಮ ಸಮಾಜದ ಕನಸು ಗ್ಯಾರಂಟಿ ಯೋಜನೆಗಳಿಂದ ನನಸಾಗುತ್ತಿದೆ.

 

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಬದುಕು ಕಟ್ಟಿಕೊಂಡಿದ್ದಾರೆ.ಗ್ಯಾರಂಟಿ ಯೋಜನೆಗಳು ಕೆಲವರ ಬದುಕಿಗೆ ನೇರವಾಗಿದೆ.ಬಡ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆ ಆಗಿವೆ.ಹೀಗೆ ವಿವಿಧ ರೀತಿಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ಜನರ ಬದುಕನ್ನ ಸುಸ್ಥಿರಗೊಳಿಸುವಲ್ಲಿ, ಬಡತನದಿಂದ ಮುಕ್ತಿ ನೀಡುವಲ್ಲಿ, ಜನರ ಬದುಕನ್ನ ಉನ್ನತಿಕರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದರು.

 

ಬಾಕ್ಸ್ : ಕೊಪ್ಪಳ ತಾಲೂಕಿನ ಹಲಿಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಇಂದು ಭೇಟಿ ನೀಡಿ ನೂತನ ಅಕ್ಷರ ದಾಸೋಹದ ಕೊಠಡಿಯನ್ನು ಉದ್ಘಾಟಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ,ಬಾಳೆಹಣ್ಣು ವಿತರಿಸಿ,ವಿದ್ಯಾರ್ಥಿಗಳೊಂದಿಗೆ ಫೋಟೋ ತೆಗೆಸಿಕೊಂಡು ಸರಳತೆ ಮೆರೆದರು.

 

ಈ ಸಂಧರ್ಭದಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲ್ಬಿ, ಮಾಜಿ ಜಿ. ಪಂ ಸದಸ್ಯರಾದ ಪ್ರಸನ್ನ ಗಡಾದ್,ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ರಾದ ಗಾಳೆಪ್ಪ ಪೂಜಾರ್ ದದೇಗಲ್,ಗ್ಯಾರಂಟಿ ಸಮಿತಿ ತಾಲೂಕಧ್ಯಕ್ಷರಾದ ಬಾಲಚಂದ್ರನ ಮುನಿರಬಾದ್, ಮುಖಂಡರುಗಳಾದ ಹನುಮರೆಡ್ಡಿ ಹಂಗನಕಟ್ಟಿ, ವಿರುಪಣ್ಣ ನವೋದಯ,ನಿಂಗಪ್ಪ ಯತ್ನಟ್ಟಿ,ಹನಮಂತ ಹಳ್ಳಿಕೇರಿ, ದೇವಪ್ಪ ವದಗನಾಳ, ವಿರುಪಾಕ್ಷಿ ಚಿಕ್ಕಸಿಂದೋಗಿ, ಶಿವಪ್ಪ ಗುನ್ನಳ್ಳಿ, ವಸಂತ ವರತಟ್ನಾಳ, ಮಲ್ಲು ಪೂಜಾರ್,ತಹಶೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕ ಪಂಚಾಯತ್ ಇಓ ದುಂಡೇಶ್ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!