ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸಲು ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶ

Get real time updates directly on you device, subscribe now.

Koppal :  ಮಹಿಳೆಯ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ.! ಎಂಬ ಘೋಷವಾಕ್ಯದಡಿ ಎ ಐ ಡಿ ವೈ ಓ ಸಂಘಟನೆ ಸಂಘಟಿಸುತ್ತಿರುವ ಕೊಪ್ಪಳ ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶವನ್ನು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ದಿ 21.  ಇಂದು ಹಮ್ಮಿಕೊಳ್ಳಲಾಗಿದೆ.

ಉದ್ಘಾಟಕನೆಯನ್ನು ಖ್ಯಾತ ಹೋರಾಟಗಾರರು   ಅಲ್ಲಮಪ್ರಭು ಬೆಟ್ಟದೂರು ರವರು ಮಾಡಲಿದ್ದಾರೆ. “ಇಂದಿನ ಯುವ ಮನಸ್ಸಿನ ತಲ್ಲಣಗಳು” ಎಂಬ ವಿಷಯದ ಕುರಿತು  ಖ್ಯಾತ ಮನಶಾಸ್ತ್ರಜ್ಞರಾದ     ಬಿ ವಿ ನಾಗರಾಳ್ ರವರು ನಡೆಸಿಕೊಡಲಿದ್ದಾರೆ.
“ಲೈಂಗಿಕ ಅಪರಾಧಗಳು ಕಾರಣ ಮತ್ತು ಪರಿಹಾರದ ಕುರಿತು ಧಾರವಾಡ ಜನ ಜಾಗೃತಿ ಅಭಿಯಾನದ ಸಲಹೆಗಾರರಾದ   ರಾಮಾಂಜನಪ್ಪ ಅಲ್ದಳ್ಳಿ ಅವರು ಮಾತನಾಡಲಿದ್ದಾರೆ. ಆಶಯ ನುಡಿಯನ್ನು   ಸಿದ್ಧಲಿಂಗ ಬಾಗೇವಾಡಿ ಎ ಐ ಡಿ ವೈ ಓ ರಾಜ್ಯ ಕಾರ್ಯದರ್ಶಿಗಳು, ಅಧ್ಯಕ್ಷತೆ ಯನ್ನು  ಶರಣು ಗಡ್ಡಿ ರಾಜ್ಯ ಕಾರ್ಯದರ್ಶಿ ಮಂಡಳಿ  ಸದಸ್ಯರು, ಪ್ರಾಸ್ತಾವಿಕ ನುಡಿಯನ್ನು  ಶರಣು ಪಾಟೀಲ್ ಜಿಲ್ಲಾ ಕಾರ್ಯದರ್ಶಿಗಳು ನೆರವೇರಿಸಲಿದ್ದಾರೆ  ಎಂದು  ದೇವರಾಜ್ ಹೊಸಮನಿ  ಎ ಐ ಡಿ ವೈ ಓ ಸಂಘಟನೆ ಜಿಲ್ಲಾ ಸಮಿತಿ ಸದಸ್ಯರು ಕೊಪ್ಪಳ   ಪತ್ರಿಕಾ ಪ್ರಕತಣೆಯಲಲಿ ತಿಳಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!