ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು- ಶಾಸಕ ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ವಿಧಾನಸಭ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಅಳವಂಡಿ ಜಿ. ಪಂ ಕ್ಷೇತ್ರ ವ್ಯಾಪ್ತಿಯ ಮತ್ತೂರು, ಹನಕುಂಟಿ, ತಿಗರಿ, ಬೆಟಗೇರಿ, ಮೋರನಾಳ, ಬೈರಾಪುರ, ಬೋಚನಹಳ್ಳಿ, ಹಲವಾಗಲಿ ಹಾಗೂ ನಿಲೋಗಿಪುರ ಗ್ರಾಮಗಳಲ್ಲಿ ಅಂದಾಜು ಮೊತ್ತ 9.50 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದರು.

 

ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ.ಹೀಗಾಗಲೇ ಅಳವಂಡಿ ಹೋಬಳಿಯಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ, ಇನ್ನುಳಿದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುಧಾನ ಮಂಜೂರು ಮಾಡಿ ರಸ್ತೆ ಅಭಿವೃದ್ಧಿ ಪಡಿಸುತ್ತೇವೆ ಎಂದರು.

ಬಸ್ಟ್ಯಾಂಡ್ ನಿರ್ಮಾಣಕ್ಕೆ ಅಡಿಗಲ್ಲು : ಕೊಪ್ಪಳ ತಾಲೂಕಿನ ಮೋರನಾಳ ಹಾಗೂ ಬೈರಾಪುರ ಗ್ರಾಮದಲ್ಲಿ ತಲಾ ಗ್ರಾಮಕ್ಕೆ 20 ಲಕ್ಷ ವೆಚ್ಚದಲ್ಲಿ ಬಸ್ಟ್ಯಾಂಡ್ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು : ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದಿಂದ ಹನಕುಂಟಿ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಯ 2.5 ಕಿ. ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2.50 ಕೋಟಿ ಹಾಗೂ ಬಿಸರಲ್ಲಿ ಯಿಂದ ಬೆಟಗೇರಿ ರಸ್ತೆ ಅಭಿವೃದ್ಧಿಗೆ 2 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.

ಈ ಸಂಧರ್ಭದಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲ್ಬಿ, ಭರಮಪ್ಪ ಹಟ್ಟಿ, ವಿರುಪಣ್ಣ ನವೋದಯ, ವೆಂಕನಗೌಡ್ರು ಹಿರೇಗೌಡ್ರು, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಸಿಂಟ್ರ, ಗುರುಬಸವರಾಜ ಹಳ್ಳಿಕೇರಿ,ಶಿವಣ್ಣ ಮೋರನಾಳ,ಪರಶುರಾಮ್ ಮೆಕ್ಕಿ, ನಿಂಗಪ್ಪ ಮೇಟಿ, ನಿಂಗಪ್ಪ ಅವೊಜಿ, ಭರಮಪ್ಪ ಕಂಬಳಿ,ತಹಶೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕ ಪಂಚಾಯತ್ ಇಓ ದುಂಡೇಶ್ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!