ಪಿಯು ಅನುತ್ತೀರ್ಣರಾದವರಿಗೆ ಆಗಸ್ಟ್ 21ರಿಂದ ವಿಶೇಷ ಪೂರಕ ಪರೀಕ್ಷೆ: ರಾಮಚಂದ್ರನ್ ಆರ್
ಕೊಪ್ಪಳ : ದ್ವಿತೀಯ ಪಿಯು ಹಂತದಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ನೆರವಾಗುವ ಸಲುವಾಗಿ ಘನ ಸರ್ಕಾರದ ಆದೇಶದಂತೆ 2023ರಲ್ಲಿ ವಿಶೇಷ ಪೂರಕ (2ನೇ) ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಪರೀಕ್ಷೆಯು ದಿನಾಂಕ 21-08-2023 ರಿಂದ ದಿನಾಂಕ 02-09-2023ರವರೆಗೆ ಜರುಗಲಿದ್ದು ಪರೀಕ್ಷೆಯನ್ನು ಕಾಲೇಜು ಲಾಗಿನ್ ಮೂಲಕ ನೋಂದಣಿ ಮಾಡಿಕೊಳ್ಳಲು ಜುಲೈ 28ರಿಂದ ದಿನಾಂಕ 10-08-2023ರವರೆಗೆ ಅವಕಾಶ ನೀಡಲಾಗಿದೆ. ತಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರುಗಳು ಪರೀಕ್ಷೆ ತೆಗೆದುಕೊಳ್ಳುವಂತೆ ಪ್ರೇರೇಪಿಸಲು ಹಾಗೂ ಈ ಮೂಲಕ ವಿದ್ಯಾರ್ಥಿಗಳು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕರಿಸುವಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರಾದ ರಾಮಚಂದ್ರನ್ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.