ಕೊನೆಗೂ ಕಮಿಷನರ್ ಭಜಕ್ಕನವರ ಮೂಲ ಹುದ್ದೆಗೆ ವರ್ಗ
ಕೊಪ್ಪಳ : ಸಾಕಷ್ಟು ಆರೋಪಗಳಿಗೆ ಹಾಗೂ ವಿವಾದಗಳಿಗೆ ಕಾರಣರಾಗಿದ್ದ ಕೊಪ್ಪಳ ನಗರಸಭೆ ಕಮೀಷನರ ಭಜಕ್ಕನವರ್ ವರ್ಗಾವಣೆ ಯಾಗಿದೆ.
ಮೂಲ ಹುದ್ದೆ ಮ್ಯಾನೇಜರ್ ಹುದ್ದೆಗೆ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ. ನಗರಸಭೆಯಲ್ಲಿ ೨ ಕೋಟಿಗೂ ಹೆಚ್ಚಿನ ಕಾಮಗಾರಿಗೆ ಅನುಮತಿ ನೀಡಿದ್ದು ಇದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಅವರ ವಿರುದ್ದ ಇಲಾಖೆಯ ಆಂತರಿಕ ತನಿಖೆ ನಡೆದು ವರದಿ ನೀಡಲಾಗಿತ್ತು. ಮೂಲ ಮ್ಯಾನೇಜರ್ ಹುದ್ದೆಯ ಎಚ್.ಎನ್.ಭಜಕ್ಕನವರ್ ಕೊಪ್ಪಳ ಸೇರಿದಂತೆ ಇತರೆಡೆ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದರು. ದೂರುಗಳ ಹಿನ್ನೆಲೆಯಲ್ಲಿ ಕ್ರಮಕ್ಕೆ ಒತ್ತಡ ಹೆಚ್ಚಾಗಿತ್ತು. ಈಗ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ಪುರಸಭೆಗೆ ಮ್ಯಾನೇಜರ್ ಹುದ್ದೆಗೆ ವರ್ಗಾಯಿಸಲಾಗಿದೆ.
Comments are closed.