267ನೇ ದಿನದ ಬಲ್ಡೋಟ ವಿರೋಧಿ ಧರಣಿ ಯಶಸ್ವಿ

Get real time updates directly on you device, subscribe now.

ಕಪ್ಪತ್ತಗುಡ್ಡ, ಫೋಸ್ಕೋ ಹೋರಾಟ ನಮಗೆ ಮಾದರಿ: ಹಳ್ಳಿಕೇರಿಮಠ
ಕೊಪ್ಪಳ: ಕೊರಿಯಾ ಮೂಲದ ಫೋಸ್ಕೋ ಸ್ಟೀಲ್ ಕಾರ್ಖಾನೆ ಗದಗ ಜಿಲ್ಲೆಗೆ ನೆಲೆಯೂರಲು ಬಂದಾಗ ತೋಂಟದ ಶ್ರೀಗಳು ನಮ್ಮ ಸ್ವಗ್ರಾಮ ಜಂತ್ಲಿ, ಶಿರೂರಿಗೆ ಖುದ್ದಾಗಿ ಬಂದು ಕುಳಿತರು. ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಿ ಸೂಕ್ಷ್ಮ ಪರಿಸರ ಹಾಳು ಮಾಡುವ ಕುರಿತು ಮನಕ್ಕೆ ತಟ್ಟುವಂತೆ ಜನರಿಗೆ ಹೇಳಿದರು ಎಂದು ರಾಜ್ಯ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ 267ನೇ ದಿನದ ಧರಣಿಗೆ ಬೆಂಬಲಿಸಿ ಮಾತನಾಡಿದರು.
ಅವರು ಬಸವಣ್ಣನವರ ವಚನ ಪ್ರಸ್ತಾಪ ಮಾಡಿ ‘ತಾಯಿ ಎದೆ ಹಾಲು ನಂಜಾದೊಡೆ, ನಾರಿ ಕಳುವಡೆ ಯಾರಿಗೆ ದೂರುವುದು’ ಎಂದು ಸರ್ಕಾರ ಪ್ರಜೆಗಳಿಗೆ ಹಾಲು ಉಣಿಸುವ ಕೆಲಸ ಮಾಡದೆ ಈ ಬಲ್ಡೋಟದಂತಹ ವಿಷಕಾರುವ ಕಾರ್ಖಾನೆ ತಂದು ಹಾಕುವುದು ಏನು ಮಾಡಿದಂತಾಗುತ್ತದೆ ಎಂದು ನಾವು ಯೋಚಿಸಬೇಕು. ಫೋಸ್ಕೋ ವಿರೋಧಿ ಹೋರಾಟದಲ್ಲಿ ತೋಂಟದ ಶ್ರೀಗಳ ಜೊತೆ ನಾನು ಹೋರಾಟದ ಎಲ್ಲಾ ದಿನಗಳನ್ನು ಕಂಡಿದ್ದೇನೆ. ಒಂದು ದಿನ ಎರಡು ಬಸ್ಸಿನಲ್ಲಿ ನಮ್ಮ ಗ್ರಾಮಗಳ ಮಹಿಳೆಯರನ್ನು ಕಾರ್ಖಾನೆ ಧೂಳಿನಿಂದ ಗಂಭೀರ ಸಮಸ್ಯೆ ಎದುರಿಸುತ್ತಿದ್ದ ಹಿರೇಬಗನಾಳ, ಈ ಭಾಗದ ಹಳ್ಳಿಗಳ ಭೇಟಿ ಮಾಡಿರಿ ಎಂದು ಆ ಜನರನ್ನು ಮಾತನಾಡಿಸಿಕೊಂಡು ಬನ್ನಿ. ಸರಿ ಎನಿಸಿದರೆ ಭೂಮಿ ಕೊಡಿ ಎಂದು ಬಸ್ ವ್ಯವಸ್ಥೆ ಮಾಡಿ ಹಿರೇಬಗನಾಳ ಗ್ರಾಮಕ್ಕೆ ಕಳಿಸಿದರು. ಆಗ ಈ ಗ್ರಾಮದ ಜನರನ್ನು ನಾವು ಮಾತನಾಡಿಸಿದಾಗ ತಮಗೆ ಎದುರಾದ ರೋಗ, ರುಜಿನಗಳ ಸತ್ಯದರ್ಶನ ಮಾಡಿಸಿದರು. ಮರುದಿನವೇ ದೊಡ್ಡ ಪ್ರಮಾಣದಲ್ಲಿ ಮಹಿಳಾ ಶಕ್ತಿ ಹೋರಾಟಕ್ಕೆ ಸೇರಿಕೊಂಡಿತು.
ತೋಂಟದ ಶ್ರೀಗಳು ಈಗಿದ್ದಿದ್ದರೆ  ಕೊಪ್ಪಳ ಜನರ ಈ ಹೋರಾಟ ಒಂದು ವಾರದಲ್ಲಿ ತಾರ್ಕಿಕ ಅಂತ್ಯ ಕಾಣುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ ಕಪ್ಪತ್ತಗುಡ್ಡ ಉಳಿಸಿಕೊಳ್ಳಲು ಮತ್ತು ಫೋಸ್ಕೋ ಕಂಪನಿ ನಾವು ಓಡಿಸಿದಂತೆ ಬಲ್ಡೋಟ ಓಡಿಸಲು ಇಲ್ಲಿನ ಸಾತ್ವಿಕ ಶಕ್ತಿಯಾದ ಗವಿಶ್ರೀಗಳು ಅತಿ ಶೀಘ್ರವಾಗಿ ಹೋರಾಟದ ರಂಗಕ್ಕಿಳಿಯಬೇಕು ಎನ್ನುವ ಲಕ್ಷಾಂತರ ಭಕ್ತರ ಅಭಿಪ್ರಾಯವಾಗಿದೆ ಎಂದರು.
ಧರಣಿಯಲ್ಲಿ ಪ್ರಕಾಶಕ ಡಿ. ಎಂ.ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ರಾಜಶೇಖರ ಏಳುಭಾವಿ, ಮೂಕಪ್ಪ ಮೇಸ್ತ್ರಿ ಬಸಾಪುರ, ವಿಜಯಮಹಾಂತೇಶ ಹಟ್ಟಿ, ಮಹಾದೇವಪ್ಪ ಮಾವಿನಮಡು,  ಮಲ್ಲಪ್ಪ ಮಾದಿನೂರು, ಶಿವಪ್ಪ ಜಲ್ಲಿ, ಶಿವಪ್ಪ ಹಲಗೇರಿ, ಅನ್ನಪೂರ್ಣ ಜೂಲಕಟ್ಟಿ, ಗ್ಯಾನಪ್ಪ ಹುಬ್ಬಳ್ಳಿ ಗೋತಗಿ, ಬಾಪುಗೌಡ ಷೋ.ಪಾ, ಗವಿಸಿದ್ದಯ್ಯ ಹಿರೆಮಠ ನೀರಲಗಿ ಮುಂತಾದವರು ಇದ್ದರು.
protest against baldota

Get real time updates directly on you device, subscribe now.

Comments are closed.

error: Content is protected !!