ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೇಳಬೇಕು ಅನ್ಯಾಯದ ವಿರುದ್ಧ ಹೋರಾಡಬೇಕು- ಇಕ್ಬಾಲ್ ಅನ್ಸಾರಿ

0

Get real time updates directly on you device, subscribe now.

ಕುರಾನ್ ಮತ್ತು ಸಂವಿಧಾನ ಅಡಿಯಲ್ಲಿ ಮುಸ್ಲಿಮರು ಬದುಕು ಕಟ್ಟಿಕೊಳ್ಳಿ-ಅನ್ಸಾರಿ
ಕೊಪ್ಪಳ :   ಭಾರತೀಯ ಮುಸಲ್ಮಾನರಿಗೆ ಕುರಾನ್ ಮತ್ತು ನಮ್ಮ ದೇಶದ ಸಂವಿಧಾನ ಎರಡು ಬಹಳ ಮುಖ್ಯ ಅದರ ಅಡಿಯಲ್ಲಿ ಬದುಕು ಕಟ್ಟಿಕೊಳ್ಳಬೇಕಾಗಿದೆ, ಏನೇ ಸಮಸ್ಯೆಗಳಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೇಳಬೇಕು, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು,
ಅವರು ಶನಿವಾರ  ಸಾಹಿತ್ಯ ಭಾವನದಲ್ಲಿ ಕೊಪ್ಪಳ ಮುಸ್ಲಿಂ ಯುವ ಸಮಿತಿ ಏರ್ಪಡಿಸಿದ ಭಾರತ ಕಂಡ ವಿವಿಧ ಸ್ವಾತಂತ್ರ್ಯ ಹೋರಾಟ ಗಾರರ ಜಯಂತೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು,
ಸೃಷ್ಟಿಕರ್ತನ ಕಾನೂನು ಕುರಾನನಲ್ಲಿದೆ, ಅದು ಕೂಡ ನಾವು ಪಾಲಿಸಬೇಕು ಅದೇ ರೀತಿ ನಾವು ಭಾರತೀಯ ಪ್ರಜೆಗಳಾಗಿದ್ದು ಸಂವಿಧಾನ ಶಿಲ್ಪಿ, ಡಾ. ಬಿಆರ್ ಅಂಬೇಡ್ಕರ್ ಬರೆದ ಸಂವಿಧಾನ ದಂತೆ ನಾವು ನಮ್ಮ ನಮ್ಮ ಬದುಕು ಕಟ್ಟಿ ಕೊಂಡು ರಾಷ್ಟ್ರೀಯ ಭಾವೈಕ್ಯತೆ ಬಳಸಿಕೊಂಡು ಜೀವನ ಸಾಗಿಸಬೇಕು ಯಾವುದೇ ಕಾರಣಕ್ಕೂ ಇತರರಿಗೆ ನಮ್ಮಿಂದ ನಮ್ಮ ಆಚರಣೆಗಳಿಂದ ಯಾವುದೇ ತೊಂದರೆ ಉಂಟಾಗಬಾರದು ನಮ್ಮ ಧರ್ಮ ವನ್ನುಪ್ರೀತಿಸುವುದರ ಜೊತೆಗೆ ಇತರ ಧರ್ಮವನ್ನು ಗೌರವಿಸುವಂಥ ಕೆಲಸ ಆಗಬೇಕು ಯುವಕರಿಗೆ ಉತ್ತಮ ದಾರಿದೀಪವಾಗಬೇಕು ನಮ್ಮ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನ್ ನಾಯಕರ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಮ್ಮ ನಾಡಿನಲ್ಲಿ ಮತ್ತು ದೇಶದಲ್ಲಿ ಕೋಮುವಾದಿ ದುಷ್ಟ ಶಕ್ತಿಗಳು ಅಮಾಯಕ ಯುವಕರಲ್ಲಿ ಜಾತಿ ವಿಷಬೀಜ ಬಿತ್ತಿ ಒಬ್ಬರ ವಿರುದ್ಧ ಒಬ್ಬರಿಗೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಸಮಾಜದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ ಇಂತಹರಿಂದ ಎಚ್ಚರದಿಂದಿರಿ ಎಂದು ಯುವಕರಿಗೆ ಸಲಹೆ ನೀಡಿದರು , ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದ ಕೆಲವರು ಕಾರಣರಾಗಿದ್ದಾರೆ ಅವರಿಗೆ ಅನ್ಸಾರಿ ಬಗ್ಗೆ ಭಯ ಜಾಸ್ತಿ ಇರುವುದರಿಂದ ಅವರು ಹೀಗೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತ ಬಂದಿದ್ದಾರೆ ಎಂದು ಅವರು ಟೀಕಿಸಿದರು, ಆದರೆ ಕೊಪ್ಪಳದಲ್ಲಿ 40,000 ಜನ ಮುಸ್ಲಿಂ ಮತದಾರರು ಇದ್ದಾರೆ ,ಕೆ ರಾಘವೇಂದ್ರ ಹಿಟ್ನಾಳ್ರವರು ಗೆಲ್ಲಲು ಮುಸ್ಲಿಂ ಮತದಾರರು ನಿರ್ಣಾಯಕ ರಾಗಿದ್ದು ಅವರನ್ನು ಶಾಸಕರು ಯಾವತ್ತು ಕೈ ಬಿಡಬೇಡಿ ಅವರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಸದಾ ಶ್ರಮಿಸುತ್ತ ಇರಬೇಕು ಸರ್ಕಾರದಿಂದ ಹೆಚ್ಚೆಚ್ಚು ಅನುದಾನ ಸಮಾಜಕ್ಕೆ ಒದಗಿಸಿ ಕೊಡುವಂತ ಕೆಲಸ  ಶಾಸಕರು ಮತ್ತು ಸಂಸದರು ಮಾಡಬೇಕೆಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ ರಾಘವೇಂದ್ರ ಹಿಟ್ನಾಳ ವಯಸ್ಸಿ ಮಾತನಾಡಿ ಈ ಸಮಾಜದ ಋಣ ನಮ್ಮ ಕುಟುಂಬದ ಮೇಲಿದೆ ಸಮಾಜದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ನೇರ ಸ್ಪಂದನೆ ನೀಡಿ ಅದರ ಇತ್ಯರ್ಥಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಸರ್ಕಾರದ ವಿಶೇಷ ಅನುದಾನ ಒದಗಿಸಿ ಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ಸಂಸದ ಕೆ ರಾಜಶೇಖರ್ ಹಿಟಾಳ್ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ ಇಂದು ಮುಸ್ಲಿಂ ಸಮಾಜ ಪ್ರದರ್ಶಿಸಿದ ಸಮಾಜದ ಸಂಘಟನೆಯ ಒಗ್ಗಟ್ಟು ಮಾದರಿಯಾಗಿದೆ. ಇದೇ ಒಗ್ಗಟ್ಟು ಮುಂದುವರಿಸಿಕೊಂಡು ಹೋಗಿ ಮತ್ತು ಸಮಾಜದ ಕೆಲಸ ಕಾರ್ಯಗಳನ್ನು ಮಾಡಿಸುವಲ್ಲಿ ಯುವಕರು ಶ್ರಮಿಸಬೇಕು ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಕಾಡಾ ಅಧ್ಯಕ್ಷ ಹಸನ್ ಸಾಬ್  ಡೋಟಿ ಹಾಳ್,  ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಸಮಾಜದ ಮುಖಂಡ ರಾದ ಕೆಎಂ ಸಯ್ಯದ್ ಎಂ ಪಾಷಾ ಕಾಟನ್ ಮಾತನಾಡಿದರು ಮುಸ್ಲಿಂ ಧರ್ಮ ಗುರು  ಮೌಲಾನ ಮುಫ್ತಿ ಮೊಹಮ್ಮದ್ ನ ಜೀರ್ ಅಹಮದ್ ಖಾದ್ರಿ ತಸ್ಕಿನಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು, ಚಿಂತಕ ಹೋರಾಟಗಾರ ಪ್ರೊಫೆಸರ್ ಎಸ್ ಬಿ ಚಂದ್ರಶೇಖರ್ ವಿಶೇಷ ಉಪನ್ಯಾಸ ನೀಡಿದರು, ರಾಜಶೇಖರ್ ಅಡೂರ್ ಸೋಮಶೇಖರ್ ಹಿಟ್ನಾಳ ಯಮನೂರಪ್ಪ ನಾಯಕ್ ಲಾಯಕಲಿ ಬಾಶು ಸಾಬ್ ಖತೀಬ್ ಆಶಿಫ್  ಕರ್ಕಿಹಳ್ಳಿ, ಹುಸೇನ್ ಪಿರಾ ಮುಜಾವರ್ ಸೇರಿದಂತೆ ಕೊಪ್ಪಳ ಗಂಗಾವತಿ ಕುಷ್ಟಗಿ ಯಲಬುರ್ಗಾ ಕುಕನೂರು ಕಾರಟಗಿ ಕನಕಗಿರಿ ಸಿರುಗುಪ್ಪ ಸಿಂಧನೂರ್ ಮಸ್ಕಿ ಮುಂಡರಗಿ ಭಾಗದಿಂದ ಮುಸ್ಲಿಂ ಸಮಾಜ ಬಾಂಧವರು ಪಂಚ್ ಕಮಿಟಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಆರಂಭದಲ್ಲಿ ಅನ್ವರ್ ಹುಸೇನ್ ರವರು ಪ್ರಾರ್ಥನೆ ಗೀತೆ ಹಾಡಿದರು ಕಾರ್ಯಕ್ರಮ ಸಂಘಟಕ ಸಲೀಂ ಮಂಡಲಗಿರಿ ಸ್ವಾಗತಿಸಿದರು ಯುವ ನಾಯಕ ಸೈಯದ್ ಮಹೆಮೂದ್ ಹುಸೇನಿ ಬಲ್ಲೆ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು,

Get real time updates directly on you device, subscribe now.

Leave A Reply

Your email address will not be published.

error: Content is protected !!