ಕಾಂಗ್ರೆಸ್ ಮಾತ್ರ ಶೋಷಿತರ ರಕ್ಷಣೆ ಮಾಡುತ್ತದೆ : ಜ್ಯೋತಿ ಗೊಂಡಬಾಳ

Get real time updates directly on you device, subscribe now.

ಕೊಪ್ಪಳ: ಐದು ಪ್ರಮುಖ ಸಮಾಜಮುಖಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಎಂಬ ಗ್ಯಾರಂಟಿಗಳ ಮೂಲಕ ಹಿಂದುಳಿದ, ಬಡವರ ಕಲ್ಯಾಣ ಮತ್ತು ಬದುಕಿಗೆ ಶಕ್ತಿ ನೀಡಿದ ಸಿದ್ದರಾಮಯ್ಯ ಸರಕಾರಕ್ಕೆ ಮತ್ತಷ್ಟು ಶಕ್ತಿ ನೀಡಲು ಅನ್ನಪೂರ್ಣ ತುಕಾರಾಂ ಅವರನ್ನು ಗೆಲ್ಲಿಸಬೇಕು ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದರು.
ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಅಂತಾಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿಯಲ್ಲಿ ಸಿದ್ದರಾಮಯ್ಯ ಅವರು ಪ್ರಮುಖರು, ಇಲ್ಲಿಯ ನಾಯಕರಾದ ಸಂತೋಷ ಲಾಡ್, ತುಕಾರಾಂ ಅವರಂತಹ ಸಮಾಜ ಸೇವಾ ಮುಖಂಡರುಗಳಿಗೆ ಕಾಂಗ್ರೆಸ್ ಬೆಂಬಲಿಸುವ ಮೂಲಕ ಸಹಕಾರ ನೀಡಬೇಕು ಎಂದ ಅವರು, ಇಂದು ಮಹಿಳೆಯರು ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುವಂತಾಗಿದೆ, ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಹೇಳಿದರು.
ಮುಖಂಡರಾದ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಧರ್ಮಗಳ ನಡುವೆ ವೈಷಮ್ಯ ಬೆಳೆಸಿ ರಾಜಕೀಯ ಮಾಡುವ ಬಿಜೆಪಿಗರನ್ನು ರಾಜಕೀಯ ಅಧಿಕಾರದಿಂದ ದೂರ ಇಡದ ಹೊರತು ಸಮಾಜದಲ್ಲಿ ಶಾಂತಿ ಸಿಗದು, ಅಧಿಕಾರ ಮತ್ತು ಆಸ್ತಿ ಮಾಡಲು ಸುಖಾಸುಮ್ಮನೆ ಜನರನ್ನು ಕೆಣಕುವದು, ಮೋಸ ಮಾಡುವದು ಬಿಟ್ಟರೆ ದೇವರ ಹೆಸರಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ಕಾಂಗ್ರೆಸ್ ಮಾತ್ರ ಪರಿಹಾರ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸಂತೋಷ ಲಾಡ್, ಸಂಸದ ಇ. ತುಕಾರಾಂ, ಶಾಸಕರಾದ ಕಂಪ್ಲಿ ಗಣೇಶ, ಎಂ.ಪಿ. ಲತಾ ಹರಪನಹಳ್ಳಿ, ಗ್ಯಾರಂಟಿ ರಾಜ್ಯ ಉಪಾಧ್ಯಕ್ಷ ಮೆಹರೋಜ್ ಖಾನ್, ಅಭ್ಯರ್ಥಿ ಅನ್ನಪೂರ್ಣ ತುಕಾರಾಂ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಾನಂದ, ಕೊಪ್ಪಳ ಜಿಲ್ಲಾ ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!