ಮೂಲಸೌಕರ್ಯಕ್ಕೆ ಒತ್ತು ನೀಡಿ ಅಧಿಕಾರಿಗಳಿಗೆ ಸಚಿವ ತಂಗಡಗಿ ಸೂಚನೆ*
ಕನಕಗಿರಿ: ಜು. 24
ಕನಕಗಿರಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವಂತೆ ಸ್ಥಳೀಯ ಶಾಸಕರೂ ಆದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಗಳಿ ಸಚಿವರು ಖುದ್ದು ಭೇಟಿ ನೀಡಿ, ಸಾರ್ವಜನಿಕರ ಕೊಂದು ಕೊರತೆ ಆಲಿಸಿದರು.
ಪಟ್ಟಣದಲ್ಲಿ ಅಗತ್ಯವಿರುವ ಕಡೆ ಬೀದಿದೀಪ, ಗಟಾರು, ಕಾಂಕ್ರೀಟ್, ಶುದ್ಧ ಕುಡಿಯುವ ನೀರೋದಗಿಸುವ ಜತೆಗೆ ಶುಚಿತ್ವ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಜನತೆ ಜತೆ ಸ್ಥಳೀಯ ಅಧಿಕಾರಿಗಳು ನಿರಂತರವಾಗಿ ಸಂಪರ್ಕದಲ್ಲಿದ್ದು, ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಆರು ಮತ್ತು ಏಳನೇ ವಾರ್ಡ್ ನಲ್ಲಿ ಬಹಳ ಬದಲಾವಣೆ ತರಬೇಕಿದೆ. ಎಲ್ಲೆಂದರಲ್ಲಿ ಜನ ಕಸ ಹಾಕುವುದನ್ನು ತಡೆಗಟ್ಟಬೇಕು. ವಾರ್ಡ್ ನಲ್ಲಿ ಅಲ್ಲಲ್ಲಿ ಹಾಕಿರುವ ಕಸ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಐಬಿಗೆ ತೆರಳುವ ಮಾರ್ಗ ಮಧ್ಯೆ ಬರುವ ಮೇಲ್ಸೇತುವೆ ಪಕ್ಕ
ಕಾಂಕ್ರೀಟ್ ತಡೆಗೋಡೆ ನಿರ್ಮಾಣಗೊಳ್ಳಬೇಕು. ಕೊಳ್ಳದಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ಶುಚಿತ್ವ ಕೈಗೊಳ್ಳಬೇಕು. ಕೂಡಲೇ ಇದಕ್ಕೆ ಬೇಕಾದ ಯೋಜನೆ ರೂಪಿಸುವಂತೆ ತಿಳಿಸಿದರು.
ವಾಲ್ಮೀಕಿ ವೃತ್ತದಿಂದ ಹಿಡಿದು ಪ್ರವಾಸ ಮಂದಿರದವರೆಗೆ ರಸ್ತೆ ಕಾಮಗಾರಿ ಕೈಗೊಳ್ಳಬೇಕು.
ಕಾಮಗಾರಿಯಲ್ಲಿ ಯಾವುದೇ ಲೋಪದೋಷ ಉಂಟಾಗಬಾರದು. ನಾನು ಕ್ಷೇತ್ರದ ಅಭಿವೃದ್ಧಿಗೆ ಕಟ್ಟಿಬದ್ಧನಾಗಿದ್ದು, ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
*ನಿವಾಸಿಗಳಿಗೆ ತಿಳಿ ಹೇಳಿದ ಸಚಿವರು:* ವಾರ್ಡ್ ಪರಿಶೀಲನೆ ವೇಳೆ ರಸ್ತೆಗೆ ಚರಂಡಿ ನೀರು ಹರಿಸುವುದನ್ನು ಕಂಡು ಸಚಿವರು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಚರಂಡಿ ನಿರ್ಮಾಣದ ಬಗ್ಗೆ ಕೂಡಲೇ ರೂಪುರೇಷೆ ಸಿದ್ಧಪಡಿಸುವಂತೆ ತಿಳಿಸಿದರು.
ಇನ್ನು ಮನೆಯ ಹೊರಗೆ ಮಹಿಳೆಯರು ಬಟ್ಟೆ ಶುಚಿತ್ವಗೊಳಿಸಿ ನೀರು ರಸ್ತೆಗೆ ಬಿಡುತ್ತಿದ್ದನ್ನು ಕಂಡು ಸಚಿವರು, ಈ ರೀತಿ ಮನೆ ಮುಂದೆ ನೀರು ನಿಲ್ಲುವಂತೆ ಮಾಡಿದರೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಶುಚಿತ್ವ ಕಾಪಾಡಿಕೊಳ್ಳುಬೇಕು ಎಂದು ಮಹಿಳೆಯರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂಜಯ್ ಕಾಂಬ್ಳೆ, ತಾಲೂಕು ಪಂಚಾಯಿತಿ ಇಓ ಚಂದ್ರಶೇಖರ್ ಕಂದಕೂರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗ್ಡೆ ಇನ್ನಿತರ ಅಧಿಕಾರಿಗಳು ಈ ವೇಳೆ ಹಾಜರಿದ್ದರು.
ಬಾಕ್ಸ್
*ಪೊಲೀಸ್, ಡಿಡಿಪಿಐಗೆ ತರಾಟೆ:*
ಕನಕಗಿರಿಯಲ್ಲಿ ಶಾಲೆಯ ಕಾಂಪೌಂಡ್ ಗೋಡೆ ಮೇಲೆ ದುಷ್ಕರ್ಮಿಗಳು ಅಶ್ಲೀಲ ಪದ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಬಗ್ಗೆ ಸಚಿವರು ಕನಕಗಿರಿ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಡಿಡಿಪಿಐ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಶಾಲೆಯ ಬಳಿ ಸಿಸಿಟಿವಿ ಅಳವಡಿಸಿ, ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಆರೋಪಿಗಳನ್ನು ಬಂಧಿಸಬೇಕು.
ಒಂದು ವಾರದೊಳಗೆ ಆರೋಪಿಗಳ ಬಂಧನವಾಗದಿದ್ದರೆ ನಿಮ್ಮ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Comments are closed.