ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಮಂಜುಳಾ ನಾಯಕ್
ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಮಂಜುಳಾ ನಾಯಕ್
ಗಂಗಾವತಿ,ಜು,24
ವಡ್ಡರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಾರ್ಡಗಳ ಸರ್ವಾಂಗೀಣ ಅಭಿವೃದ್ದಿಗೆ ಅತ್ಯಂತ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಡ್ಡರ ಹಟ್ಟಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಮಂಜುಳಾ ಶಿವಪ್ಪ ನಾಯಕ್ ಹೇಳಿದ್ದಾರೆ.
ಸಾಯಿಬಾಬ ಬಡಾವಣೆಯಲ್ಲಿ ( ಶಂಬಣ್ಣ ಲೇಔಟ್) ಸಾಯಿಬಾಬ ಟ್ರಸ್ಟವತಿಯಿಂದ ಆಯೋಜಿಸಲಾಗಿದ್ದ ನೂತನ ಗ್ರಾಮ ಪಂಚಾಯತ ಅಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರೀಸಿ ಮಂಜುಳಾ ಮಾತನಾಡಿದರು.
ಪಂಚಾಯತಿ ವ್ಯಾಪ್ತಿಯ ಪ್ರದೇಶದಲ್ಲಿ ಸಿಸಿ ರಸ್ತೆ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ದಿ ಕೆಲಸಗಳನ್ನ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಮಂಜುಳಾ ಭರವಸೆ ನೀಡಿದರು.
ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರವು ಅಷ್ಟೆ ಅಗತ್ಯವೆಂದು ಹೇಳಿದರು.
ಸಾಯಿ ಬಾಬಾ ಟ್ರಸ್ಟ್ ಅಧ್ಯಕ್ಷ ದೊಡ್ಡಣಗೌಡ ಮಾಲಿ ಪಾಟೀಲ್, ಸದಸ್ಯರಾದ ಸಿದ್ದು ಬಿರಾದಾರ್, ಚಂದ್ರಶೇಖರ, ಸುನೀಲಕುಮಾರ, ಸಚ್ಚಿದಾನಂದ, ಪರಸಪ್ಪ ಕುರಗೋಡ, ಮಲ್ಲೇಶಪ್ಪ, ಸಂಗಮೇಶ, ದೊಡ್ಡಪ್ಪ ಸೇರಿದಂತೆ ಬಡಾವಣೆಯ ಎಲ್ಲ ಮಹಿಳೆಯರು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು.
Comments are closed.