ಹನುಮಸಾಗರ : ಜಂಪ್‌ರೋಪ್ ಒಳಾಂಗಣ ಲೋಕಾರ್ಪಣೆ

ಹನುಮಸಾಗರ (ಕುಷ್ಟಗಿ): ಇಲ್ಲಿನ ಕನ್ನೂರ ಬಡವಾಣೆಯಲ್ಲಿ ನಿರ್ಮಾಣಗೊಂಡ ಕರ್ನಾಟಕ ರಾಜ್ಯ ಜಂಪ್ ರೋಪ್ ಅಸೊಸಿಯೇಷನ್ ನ ಜಂಪ್ ರೋಪ್ ಒಳಾಂಗಣ ಕ್ರೀಡಾಂಗಣವನ್ನು ಕುಷ್ಟಗಿ ಶಾಸಕರು ಹಾಗು ವಿರೋಧ ಪಕ್ಷದ ಸಚೇತಕರಾದ ದೊಡ್ಡನಗೌಡ ಪಾಟೀಲ ಮತ್ತು ಕಾಡಾ ಅಧ್ಯಕ್ಷ, ಮಾಜಿ ಶಾಸಕ ಹಸನ್‌ಸಾಬ್ ದೋಟಿಹಾಳ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ರುದ್ರಗೌಡ ಗೌಡಪ್ಪನವರ್, ಉಪಾಧ್ಯಕ್ಷೆ ಹನುಮವ್ವ ಕಂದಗಲ, ಪಿಡಿಒ ದೇವೇಂದ್ರ ಕಮತರ, ವೀರನಗೌಡ ಪಾಟೀಲ, ಮಾಜಿ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಮಾಜಿ ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಮಾಜಿ ಅಧ್ಯಕ್ಷ ಶಿವಪ್ಪ ಕಂಪ್ಲಿ, ಮುಖಂಡರಾದ ಬಸವರಾಜ ಹಳ್ಳೂರ, ಮಲ್ಲಣ್ಣ ಪಲ್ಲೆದ, ಬಸವರಾಜ್ ಬಾಚಲಾಪೂರ, ಶ್ರೀಶೈಲ ಮೋಟಗಿ, ಮಹಮ್ಮದ ರಿಯಾಜ ಖಾಜಿ, ಬಸವರಾಜ ಬಿಲ್ಕಾರ, ಚಂದ್ರು ಬೆಳಗಲ್ಲ, ಮಂಜುನಾಥ ಗುಳೇದಗುಡ್ಡ, ವಿಶ್ವನಾಥ ನಾಗೂರ, ಮಲ್ಲಣ್ಣ ಪಲ್ಲೆದ, ಹನುಮಂತ ಬಿಂಗಿ, ಸಕ್ರಪ್ಪ ಬಿಂಗಿ, ಮಾರೇಗೌಡ ಬೊದೂರ, ಜಂಪರೊಪ್ ರಾಷ್ಟ್ರೀಯ ಖಜಾಂಚಿ ರೇಣುಕಾಪುರ ಅಬ್ದುಲ, ಜಂಪರೊಪ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ ರಜಾಕ್ ಟೈಲರ, ಜಂಪರೊಪ್ ಸಂಸ್ಥೆಯ ರಾಜ್ಯ ಮಾಧ್ಯಮ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಕಿರಿಯ ಅಭಿಯಂತರ ಇರ್ಫಾನ್ ಉಪಸ್ಥಿತರಿದ್ದರು.
ಇದೇ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು. ಕುಷ್ಟಗಿ, ಹನುಮಸಾಗರದ ಶ್ರೀ ಅನ್ನದಾನೇಶ್ವರ ಪ್ರಾತಮಿಕ ಶಾಲೆ ಮತ್ತು ಇಂದಿರಾ ಗಾಂಧಿ ವಸತಿ ಶಾಲೆ, ಕೆ. ಬೂದೂರ ಮಕ್ಕಳು ಜಂಪ್ ರೋಪ್ ಪ್ರದರ್ಶನ ನೆರದವರಿಗೆ ಮುದನೀಡಿತು. ಜಂಪ್ ರೋಪ್ ಸಂಸ್ಥೆಗೆ ಗ್ರಾಮ ಪಂಚಾಯತಿ ನೀಡಿದ ಸಿಎ ಸೈಟಿನಲ್ಲಿ ಆಂದಿನ ಶಾಸಕ ಅಮರೇಗೌಡ ಬಯ್ಯಾಪೂರ ಅವರು ೨೦೨೧-೨೨ ರಲ್ಲಿನ ಕೆಕೆಆರ್‌ಡಿಬಿಯ ಮೈಕ್ರೋ ಯೋಜನೆಯಲ್ಲಿ ಎರಡು ಹಂತದ ಕಾಮಗಾರಿಗೆ ಒಟ್ಟು ೧ ಕೋಟಿ ೫೪ ಲಕ್ಷಗಳಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿದ್ದು, ಅಪ್ಪರ್ ಸಿಟ್ಟಿಂಗ್ ಗ್ಯಾಲರಿ, ಮಹಿಳಾ ಮತ್ತು ಪುರುಷ ಶೌಚಾಲಯ, ವಿಶ್ರಾಂತಿ ಕೊಠಡಿ, ಕಛೇರಿ ಮತ್ತು ಫೆಡ್ ಲೈಟ್ ವ್ಯವಸ್ಥೆ ಕಲ್ಪಿಸಲಾಗಿದೆ, ಇದರಲ್ಲಿ ಶಟಲ್ ಬ್ಯಾಡ್ಮಿಂಟನ್, ಶಟಲ್‌ಕಾಕ್, ಜಂಪ್ ರೋಪ್ ಮತ್ತು ಪೆಂಕಾಕ್ ಸಿಲಾತ್ ಅಟೋಟಗಳನ್ನು ನಡೆಸಲು ಅನುಕೂಲಕರವಾಗಿದೆ.
ಸದರಿ ಕ್ರೀಡಾಂಗಣಕ್ಕೆ ಬಾಕಿ ಇರುವ ಕಂಪೌಂಡ್ ವಾಲ್, ರಾಜ್ಯ ಮತ್ತು ರಾಷ್ಟ್ರ ಮಟ್ಟದ ತರಬೇತಿ, ಕ್ರೀಡಾಕೂಟ ನಡೆಸಲು ಅನುಕೂಲವಾಗುವಂತೆ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮಕ್ಕಳ ಕ್ರೀಡಾ ಪ್ರಗತಿ ಮತ್ತು ಕ್ರೀಡಾಂಗಣ ನೋಡಿ ಸಂತೋಷಗೊಂಡ ಶಾಸಕರು ಇನ್ನಷ್ಟು ಸೌಲಭ್ಯಕ್ಕೆ ಸಹಕಾರ ನಿಡುವ ಭರವಸೆ ಕೊಟ್ಟರು.
Comments are closed.