ಮರಕುಂಬಿ ದಲಿತರ ಮೇಲಿನ ದೌರ್ಜನ್ಯದ ವಿರುದ್ದ, ಜಿಲ್ಲಾ ನ್ಯಾಯಾಲಯದ ತೀರ್ಪು ಚರಿತ್ರಾರ್ಹ – ಸಿಪಿಐಎಂ
ಕಳೆದ ಒಂದು ದಶಕದ ಹಿಂದೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಾ ಮರಕುಂಬಿ ಗ್ರಾಮದಲ್ಲಿ ಜಾತಿ ವೈಷಮ್ಯ ಉಲ್ಬಣಗೊಂಡು ದಲಿತರು ಹಾಗು ದಲಿತ ಕೇರಿಯ ಮೇಲೆ ಹಲವು ಪುಂಡರು ಸಾಮೂಹಿಕ ಹಲ್ಲೆ ಹಾಗು ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂದಿಸಿ, ಸುದೀರ್ಘ 10 ವರ್ಷಗಳ ಕಾಲ ವಿಚಾರಣೆಯನ್ನು ನಡೆಸಿದ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ನೆನ್ನೆ ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯು ಚರಿತ್ರಾರ್ಹವಾದುದು ಎಂದು ಸಿಪಿಐಎಂ ರಾಜ್ಯ ಸಮಿತಿ ಶ್ಲಾಘಿಸುತ್ತದೆ ನ್ನೆ ಈ ಪ್ರಕರಣದ 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ಹಾಗು ಮುವ್ವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದುದನ್ನು ಪಕ್ಷ ಸ್ವಾಗತಿಸುತ್ತದೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ರಾಜ್ಯ ಕಾರ್ಯದರ್ಶಿ ಯು ಬಸವರಾಜ್ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು
ಇದು ರಾಜ್ಯದ ಎಲ್ಲ ದಲಿತರಿಗೂ, ಸಾಮಾಜಿಕ ತಾರತಮ್ಯದ ವಿರುದ್ದ ಧ್ವನಿ ಎತ್ತುತ್ತಿರುವ ಎಲ್ಲ ಎಡ ಮತ್ತು ಪ್ರಗತಿಪರ ಶಕ್ತಿಗಳಿಗೆ ದೊರೆತ ಜಯವಾಗಿದೆ. ಅಲ್ಲದೆ ಇದು ಈ ಶಕ್ತಿಗಳಿಗೆ ಮತ್ತಷ್ಠು ಬಲವನ್ನು ತಂದು ಕೊಟ್ಟಿದೆಯೆಂದು ಹಾಗು ಇದು, ಜಾತಿ ದೌರ್ಜನ್ಯದಲ್ಲಿ ತೊಡಗಿರುವ ಪುಂಡರಿಗೆ ಎಚ್ಚರಿಕೆಯ ಘಂಟೆಯಾಗಿದೆ ಎಂದು ಸಿಪಿಐಎಂ ವಿಶ್ಲೇಷಿಸಿದೆ.
ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಅದರಲ್ಲೂ ಮುಖ್ಯವಾಗಿ, ಸಿಪಿಐಎಂ ಕೊಪ್ಪಳ ಜಿಲ್ಲೆಯಲ್ಲಿ ದಲಿತರು, ಮಹಿಳೆಯರು, ಕೂಲಿಕಾರರು, ರೈತರು ಹಾಗು ಕಾರ್ಮಿಕರ ನಡುವೆ ಅವರ ಶೋಷಣೆಯ ವಿರುದ್ದ ಚಳುವಳಿ ಹಾಗು ಜಾಗೃತಿ ಮೂಡಿಸುತ್ತಿದ್ದದರ ಭಾಗವಾಗಿ ಈ ಪ್ರದೇಶದ ಭೂಮಾಲಕ ಪಟ್ಟಭದ್ರ ಹಿತಾಸಕ್ತಿಗಳು ಅದರ ವಿರುದ್ದ ಕೆಂಗಣ್ಣು ಬೀರಿದ್ದರು.
ಈ ದೌರ್ಜನ್ಯದ ಪ್ರಕರಣದಲ್ಲಿ ದಲಿತರ ರಕ್ಷಣೆಗೆ ನಿಂತ ಸಿಪಿಐಎಂ ಪಕ್ಷದ ಅಂದಿನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಗಂಗಾಧರ ಸ್ವಾಮಿ ಹಾಗು ಅವರ ಶ್ರೀಮತಿಯು ಸೇರಿದಂತೆ ಇತರೆ ನಮ್ಮ ಪಕ್ಷದ ಮುಖಂಡರು, ಸದಸ್ಯರ ಮೇಲೂ ಹಲ್ಲೆ ನಡೆಸಲಾಗಿತ್ತು. ಪಕ್ಷದ ಬೆಂಬಲಿಗ ಹಾಗು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರಾಗಿದ್ದ ವೀರೇಶಪ್ಪ ಪ್ರಮುಖ ಸಾಕ್ಷಿಯಾಗಿದ್ದು ಕೊಲ್ಲಲ್ಪಟ್ಟರು.
ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ದಲಿತ ಹಕ್ಕುಗಳ ಸಮಿತಿ – ಕರ್ನಾಟಕ, ಭಾರತ ವಿದ್ಯಾರ್ಥಿ ಫೆಡರೇಷನ್ ಗಳು ಜಂಟಿಯಾಗಿ ದಲಿತರ ರಕ್ಷಣೆಗೆ ಹಾಗು ನ್ಯಾಯಕ್ಕಾಗಿ ವ್ಯಾಪಕ ಚಳುವಳಿಯಲ್ಲಿ ತೊಡಗಿದ್ದವು.
ಸಿಪಿಐಎಂ ಪಕ್ಷದ ಪಾಲಿಟ್ ಬ್ಯುರೋ ಸದಸ್ಯರು ಹಾಗು ಮಾಜಿ ಶಿಕ್ಷಣ ಸಚಿವರಾಗಿದ್ದ ಕಾಂ.ಎಂ.ಎ.ಬೇಬಿ ಮತ್ತು ದಲಿತ ಶೋಷಣ ಮುಕ್ತಿ ಮಂಚನ ಅಖಿಲ ಭಾರತ ಅಧ್ಯಕ್ಷರು ಮತ್ತು ಕೇರಳದ ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಂ.ರಾಧಾ ಕೃಷ್ಣನ್, ಅಂದಿನ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕಾಂ.ಜಿ.ವಿ.ಶ್ರೀರಾಮರೆಡ್ಡಿ ಮುಂತಾದ ನಾಯಕರು ಗ್ರಾಮಕ್ಕೆ ಬೇಟಿ ನೀಡಿ ಭಯ ಭೀತ ದಲಿತ ಕುಟುಂಬಗಳಿಗೆ ಧೈರ್ಯ ತುಂಬಿದರಲ್ಲದೆ, ಗ್ರಾಮದಲ್ಲಿ ಶಾಂತಿ ಹಾಗು ದಲಿತರ ರಕ್ಷಣೆಗಾಗಿ ಮತ್ತು ದೌರ್ಜನ್ಯಕೋರರನ್ನು ಬಂದಿಸಿ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿ ಗಂಗಾವತಿ ಠಾಣೆಯ ಮುಂದೆ ಸುರಿಯುವ ಮಳೆಯ ನಡುವೆಯು ನಡೆಸಲಾದ ಸಾವಿರಾರು ಜನರ ಪ್ರತಿಭಟನೆಯ ನೇತೃತ್ವ ವಹಿಸಿ, ಬೀದಿಯಲ್ಲಿ ಕುಳಿತು ಸಾಮೂಹಿಕ ಧರಣಿ ನಡೆಸಿದ್ದರು. ಈ ಕಾರಣಕ್ಕಾಗಿ ನಂತರ ಇವರು ಸೇರಿದಂತೆ ಹತ್ತಾರು ಮುಖಂಡರ ಮೇಲೆ ಪೋಲಿಸರು ಮೊಕದ್ದಮೆಯನ್ನು ದಾಖಲಿಸಿದ್ದರು.
ಮಾತ್ರವಲ್ಲಾ, ಈ ಎಲ್ಲ ಸಂಘಟನೆಗಳ ನೇತೃತ್ವದಲ್ಲಿ ಮರಕುಂಬಿಯಿಂದ ಬೆಂಗಳೂರಿಗೆ ನ್ಯಾಯ ಕೋರಿ ನೂರಾರು ಜನ ಮಹಿಳೆಯರು ಸೇರಿದ ಬೃಹತ್ ಪಾದಯಾತ್ರೆಯನ್ನು ನಡೆಸಲಾಗಿತ್ತು ಎಂದು ಸಿಪಿಐಎಂ ನೆನಪಿಸಿದೆ.
ದಲಿತರ ಜೊತೆ ಧೈರ್ಯವಾಗಿ ನಿಂತು ನ್ಯಾಯ ಕೊಡಿಸಲು ಮುಂದಾದ ಸಿಪಿಐಎಂ ಕೊಪ್ಪಳ ಜಿಲ್ಲಾ ಸಮಿತಿ ಮತ್ತಿತರೆ ಸಂಘಗಳ ನಾಯಕತ್ವವನ್ನು ರಾಜ್ಯ ಸಮಿತಿ ಅಭಿನಂದಿಸುತ್ತದೆ.
ಅಪರಾಧಿಗಳ ಕುಟುಂಬ ಸದಸ್ಯರ ನೋವಿಗೆ ಸಿಪಿಐಎಂ ಮರುಕ :
ಸಿಪಿಐಎಂ ಎಲ್ಲ ದಮನಿತ ಹಾಗು ಶೋಷಿತ ಸಮುದಾಯಗಳ ಜಾಗೃತಿಗಾಗಿ ಮತ್ತು ಮಾನವ ಘನತೆಗಾಗಿ ಶೋಷಕ ಸಾಮಾಜಿಕ ವ್ಯವಸ್ಥೆಯ ವಿರುದ್ದ ಹೋರಾಟ ನಡೆಸುತ್ತದೆಯೇ ಹೊರತು ವ್ಯಕ್ತಿಗಳ ವಿರುದ್ದವಲ್ಲವೆಂಬುದನ್ನು ಈ ಮೂಲಕ ಸ್ಪಷ್ಠ ಪಡಿಸುತ್ತದೆ.
ಅಪರಾದಿಗಳು, ಶಿಕ್ಷೆಗೆ ಅರ್ಹರಿದ್ದು ಶಿಕ್ಷಿಸುವುದು ನ್ಯಾಯವಿದೆ. ಆದರೆ ಅಪರಾದಿಗಳನ್ನು ನೆಚ್ಚಿಕೊಂಡು ಬಾಳುವ ಅವರ ನಿರಪರಾದಿ ಕುಟುಂಬದ ಸದಸ್ಯರು ಜಾತಿ ಪದ್ಧತಿ ಹಾಗು ಸಾಮಾಜಿಕ ತಾರತಮ್ಯದ ಕಾರಣಕ್ಕೆ ತೊಂದರೆ ಅನುಭವಿಸಲಿದ್ದಾರೆ ಮತ್ತು ಬದುಕಿನ ಅನಿಶ್ಚಿತತೆ ಮತ್ತು ಭಯದಿಂದ ಗೋಳಾಡುವ ಸಂಕಟಕ್ಕು ಸಿಲುಕಲಿದ್ದಾರೆ. ಇಂತಹ ಎಲ್ಲರ ಸಂಕಟಕ್ಕೆ ಸಿಪಿಐಎಂ ತನ್ನ ಮರುಕವನ್ನು ಮತ್ತು ದುಃಖವನ್ನು ವ್ಯಕ್ತ ಪಡಿಸುತ್ತದೆ. ಜಾತಿ ವೈಷಮ್ಯ ಮತ್ತು ಸಾಮಾಜಿಕ ತಾರತಮ್ಯ ಹೇಗೆ ಎಲ್ಲರನ್ನು ಬಾಧಿಸುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಈ ಕುಟುಂಬಗಳ ಸದಸ್ಯರು, ದಲಿತರ ಮೇಲೆ ಜಾತಿ ದ್ವೇಷದಿಂದ ಸಾಮೂಹಿಕ ಹಲ್ಲೆ ನಡೆಸಿದಾಗ ದಲಿತ ಕುಟುಂಬಗಳು ಅನುಭವಿಸಿದ ಜೀವ ಭಯವನ್ನು ಅರ್ಥೈಸಿಕೊಳ್ಳಬೇಕು ಮತ್ತು ಎಲ್ಲರು ಜಾತಿ ವೈಷಮ್ಯ ಬಿಟ್ಟು ಸಾಮರಸ್ಯದಿಂದ ಬಾಳಬೇಕು ಎಂದು ಸಿಪಿಐಎಂ ಮನವಿ ಮಾಡುತ್ತದೆ. ಅದೇ ರೀತಿ, ಖಂಡಿತಾ ಸಂಕಷ್ಟದಲ್ಲಿರುವ ಎಲ್ಲ ಕುಟುಂಬಗಳ ನೆರವಿಗೂ ಸಿಪಿಐಎಂ ಧಾವಿಸಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಯು.ಬಸವರಾಜ
ಕಾರ್ಯದರ್ಶಿ
ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ರಾಜ್ಯ ಕಾರ್ಯದರ್ಶಿ ಯು ಬಸವರಾಜ್ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರ
https://www.facebook.com/share/p/N2fV7Y4Gatse7GCD/
Comments are closed.