ನೇಕಾರ ಸನ್ಮಾನ ಯೋಜನೆಯಡಿಯಲ್ಲಿ ನೋಂದಣಿಯಲ್ಲಿ ಕೈ ಬಿಟ್ಟಿರುವ ನೇಕಾರರನ್ನು ಸೇರಿಸಿಕೊಳ್ಳಲು ಮನವಿ

Get real time updates directly on you device, subscribe now.


ಕೊಪ್ಪಳ : 2020-21 ನೇ ಸಾಲಿನಲ್ಲಿ ವಿದ್ಯುತ್ ಮಗ್ಗ ನೇಕಾರರ ಜನಗಣತಿ ಕಾರ್ಯ ಕೈಗೊಂಡಿದ್ದರು. ಜನಗಣತಿ ಸಂದರ್ಭದಲ್ಲಿ ಹೆಸರುಗಳನ್ನು ಸೇರಿಸಿಲ್ಲ ಈ ಕೂಡಲೇ ಹೆಸರುಗಳನ್ನು ಸೇರಿಸಬೇಕು ಎಂದು ಅಶೋಕ್ ಗೋರಂಟ್ಲಿ ನೇತೃತ್ವದಲ್ಲಿ ಭಾಗ್ಯನಗರ ನೇಕಾರರು ಆಗ್ರಹಿಸಿದ್ದಾರೆ.

ಜವಳಿ ಮತ್ತು ಸಕ್ಕರೆ ಸಚಿವರು ಶಿವಾನಂದ ಪಾಟೀಲರಿ ಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿರುವ ನೇಕಾರರು
ಆ ಸಮಯದಲ್ಲಿ ಹೆಸರುಗಳು ಯಾವ ಕಾರಣಕ್ಕಾಗಿ ಬಿಡಲಾಗಿದೆ ಎಂದು ತಿಳಿದಿರುವದಿಲ್ಲ. ಈಗಲು ನೇಕಾರಿಕೆಯನ್ನು ಬಿಟ್ಟು ಬೇರೆ ಯಾವುದೇ ಉದ್ಯೋಗ, ಮಾಡುತ್ತಿಲ್ಲ. ನೇಕಾರಿಕೆಯೇ ನಮ್ಮ ಮೂಲ ಕಸುಬು ಮತ್ತು ಜೀವನವಾಗಿದೆ. ಕಾರಣ ಈಗ ಮರು ಪರೀಶಿಲನೆ ಮತ್ತು ಅರ್ಜಿ ಹಾಕುತ್ತಿರುವ ಕಾರಣ ನಮ್ಮ ಅರ್ಜಿಗಳನ್ನು ಪಡೆಯುತ್ತಿಲ್ಲ. ನೇಕಾರ ಕಾರ್ಡ ಪಡೆದವರಿಗೆ ಮಾತ್ರ ಅರ್ಜಿ ಹಾಕಲು ಅವಕಾಶ ಎಂದು ನಮ್ಮನ್ನು ಕೈ ಬಿಡಲಾಗುತ್ತಿದೆ. ಆದ್ದರಿಂದ ನಮ್ಮ ಅರ್ಜಿಗಳನ್ನು ಪಡೆದು. ಈ ನೇಕಾರ ಸಮ್ಮನ ಈ ಯೋಜನೆಯಲ್ಲಿ ನೇಕಾರರಿಗೆ ಒದಗಿಸುವಲ್ಲಿ ತಾವುಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ
ಮಹಾದೇವಪ್ಪ ಹೆಮ್ಚಂದ್ರಸಾ ಬಸವರಾಜ್, ಹುಲಿಗೆಮ್ಮ ಬಣ್ಣದ ಬಾವಿ ಸರಸ್ವತಿ ಕವಿತಾ ಸಾವಿತ್ರಿ, ಶಕುಂತಲಾ, ಶಶಿಕಲಾ ನಾಗರಾಜ್ ಕೆ ಲಕ್ಷ್ಮಣ ತಮ್ಮಣ್ಣ ಸಂಬೋಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!