ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತ ಪರಿಷತ್ ಅಧಿಕಾರೇತರ ಸದಸ್ಯರಾಗಿ ಸಲೀಂ ಅಳವಂಡಿ ನೇಮಕ

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತ ಪರಿಷತ್ ಅಧಿಕಾರೇತರ ಸದಸ್ಯರಾಗಿ ಸಮಾಜ ಸೇವಕ ಹಾಗೂ ಆಸ್ಪತ್ರೆಯ ಚಿಕಿತ್ಸೆಗೆ ಸಂಬಂಧ ಪಟ್ಟಂತೆ ಸಾಕಷ್ಟು ಮಾಹಿತಿ ಇರುವ ಹಾಗೂ ಸೇವೆಗೆ ಸದಾ ಸಿದ್ಧವಾಗಿರುವ ಕಾಂಗ್ರೆಸ್ ಯುವ ಮುಖಂಡ ಸಲೀಂ ಅಳವಂಡಿ ಅವರನ್ನು ನಾಮ ನಿರ್ದೇಶನ  ಮಾಡಲಾಗಿದೆ .

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಪ್ಪಳ  ಸಂಸ್ಥೆಯ ಆಡಳಿತ ಪರಿಷತ್‌ ಸಂಸ್ಥೆಯ Memorandum of Association ನ ಕಂಡಿಕೆ(7)ರಲ್ಲಿ ಪ್ರದತ್ರವಾದ ಅಧಿಕಾರದನ್ವಯ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಪ್ಪಳ ಈ ಸಂಸ್ಥೆಯ ಆಡಳಿತ ಪರಿಷತ್‌ಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.

 

ಸದಸ್ಯರ ಹೆಸರು ಮತ್ತು ವಿಳಾಸ

1. ಡಾ.ಸಿದ್ರಾಮೇಶ, ಎಂಬಿಬಿಎಸ್, ಎಂಎಸ್(ಜನರಲ್ ಸರ್ಜರಿ), ಬೃಹನ್ಮಠ ಅರಳಹಳ್ಳಿ, ಸೂಳೇಕಲ್ ಅಂಚೆ, ಗಂಗಾವತಿ ತಾ. ಕೊಪ್ಪಳ ಜಿಲ್ಲೆ.

ಅಲೋಪಥಿ ವೈದ್ಯ ಸದಸ್ಯರು

ಸಲೀಂ ತಂದೆ ಮೌಲಾ ಹುಸೇನ್ ಅಳವಂಡಿ, ವಾರ್ಡ್ ನಂ.03, ನಿ, ತಾ.ಜಿ.ಕೊಪ್ಪಳ.ಪದವೀಧರ ಮತ್ತು ಸಮಾಜ ಸೇವೆ ಸದಸ್ಯರು

ಶ್ರೀಮತಿ ವಿಜಯಲಕ್ಷ್ಮೀ ಕೋಂ. ದೇವರಾಜ್, ನಂ.79/ಎ, ವಾರ್ಡ್ ನಂ.13, ಅಂಬೇಡ್ಕ‌ರ್ ಭವನ, ಭೋವಿ ಸ್ಟ್ರೀಟ್, ಕನಕಗಿರಿ, ಕೊಪ್ಪಳ ಜಿಲ್ಲೆ.ಪದವೀಧರ ಮಹಿಳಾ ಸದಸ್ಯರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಶಿವಲಿಂಗಪ್ರಭು ವಾಲಿಸ ರ್ಕಾರದ ಅಧೀನ ಕಾರ್ಯದರ್ಶಿ-2, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!