ಟಾಪ್ ಸ್ಕೂಲ್ ಸ್ಕಾಲರ್‌ಶಿಪ್ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ

Get real time updates directly on you device, subscribe now.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯವರು ನ್ಯಾಷ್ನಲ್ ಸ್ಕಾಲರ್‌ಶಿಪ್ ಪೋರ್ಟಲ್ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ 2023-24ನೇ ಸಾಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕೃತ ಟಾಪ್ ಸ್ಕೂಲ್ ಸ್ಕಾಲರ್‌ಶಿಪ್ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಇತರೆ ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಹಾಗೂ ಅಧಿಸೂಚಿತ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ವರ್ಗಗಕ್ಕೆ ಸೇರಿರಬೇಕು. ಪೋಷಕರ ವಾರ್ಷಿಕ ಆದಾಯ ರೂ 2.50 ಲಕ್ಷಗಳ ಒಳಗೆ ಇರಬೇಕು. 9 ರಿಂದ 12ನೇ ತರಗತಿಯಲ್ಲಿ  ಉನ್ನತ ದರ್ಜೆಯ ಶಾಲೆಯಲ್ಲಿ ಓದುತ್ತಿರಬೇಕು. 9 ಅಥವಾ 10ನೇ ತರಗತಿಗೆ ರೂ. 75 ಸಾವಿರ ಹಾಗೂ 11 ಅಥವಾ 12ನೇ ತರಗತಿಗೆ ರೂ. 1,25,000 ಗಳ ಶಾಲಾ ಬೋಧನಾ ಶುಲ್ಕ, ಹಾಸ್ಟೇಲ್ ಶುಲ್ಕವನ್ನು ವಾರ್ಷಿಕವಾಗಿ ಒಳಗೊಂಡಿರುತ್ತದೆ.
*ಆಯ್ಕೆ ಪ್ರಕ್ರಿಯೆ:* ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ಮೂಲಕ ಯಶಸ್ವಿ ಪ್ರವೇಶ ಪರೀಕ್ಷೆ ವೈಇಟಿ-2023 ನಡೆಸಿ ಮೆರಿಟ್ ಮೂಲಕ ಆಯ್ಕೆ ಮಾಡಲಾಗುವುದು. ವಿವರಗಳು ವೆಬ್‌ಸೈಟ್ ನಲ್ಲಿ ಲಭ್ಯ ಇವೆ.
ಅರ್ಜಿ ಸಲ್ಲಿಸಲು ಆಗಸ್ಟ್ 10ರ ರಾತ್ರಿ 11.50 ರವರೆಗೆ ಅವಕಾಶವಿದ್ದು, ತಿದ್ದುಪಡಿಗೆ ಆಗಸ್ಟ್ 12ರಿಂದ ಆ.16ರ ವರೆಗೆ ಅವಕಾಶವಿರುತ್ತದೆ. ಸಪ್ಟೆಂಬರ್ 29ಕ್ಕೆ ಪೇಪರ್ ಪೆನ್ (ಓಎಂಆರ್) ವಿಧಾನದಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರವೇಶ ಪತ್ರಗಳನ್ನು ಎನ್.ಟಿ.ಎ. ವೆಬ್‌ಸೈಟ್ ಮೂಲಕ ಪ್ರಟಿಸಲಾಗುವುದು.
ಅರ್ಜಿ ಸಲ್ಲಿಸಲಿಚ್ಛೀಸುವ ಅರ್ಹ ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ, ಆಧಾರ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ವೆಬ್‌ಸೈಟ್  https://yet.nta.ac.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಆಗಸ್ಟ್ 10ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!