ಸಮಾಜದ ಸಂಘಟನೆಗೆ ಕೈಜೋಡಿಸಿ- ಗುರುಮೂರ್ತಿ ಬಡಿಗೇರ್
ಯಲಬುರ್ಗಾದಲ್ಲಿ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳ ಆಯ್ಕೆ
ಯಲಬುರ್ಗಾ, ಅಕ್ಟೋಬರ್ 21: ವಿಶ್ವಕರ್ಮ ಸಮಾಜದ ಬಾಂಧವರು ಎಲ್ಲರೂ ಒಗ್ಗಟ್ಟಾಗಿ ಸಮಾಜ ಸಂಘಟಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಗುರುಮೂರ್ತಿ ಬಡಿಗೇರ್ ಹೇಳಿದರು.
ಶನಿವಾರ ಯಲಬುರ್ಗಾ ಪಟ್ಟಣದ ದ್ಯಾಮಮ್ಮ ದೇವಿ ದೇವಸ್ಥಾನದಲ್ಲಿ ನಡೆದ ಯಲಬುರ್ಗಾ ತಾಲೂಕ ಮಟ್ಟದ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ತಾಲೂಕ ಗೌರವಾಧ್ಯಕ್ಷರಾದ ಗುರುಮೂರ್ತಿ ಬಡಿಗೇರ್ ಸಾಕಿನ್ ದಮ್ಮೂರ್ ರವರು ಮಾತನಾಡಿ, ವಿಶ್ವಕರ್ಮ ಸಮಾಜದಲ್ಲಿ ಒಗ್ಗಟ್ಟು ಬಹಳ ಮುಖ್ಯ. ಸಮಾಜವನ್ನು ಮುನ್ನಡೆಸಿಕೊಂಡು ಹೋಗುವವರೆಗೆ ಎಲ್ಲರೂ ಸಹಕಾರ ನೀಡಬೇಕಾಗಿದೆ. ಸಮಾಜ ಸಂಘಟಿಸುವವರಲ್ಲಿ ಸ್ವಾರ್ಥ ಭಾವನೆ ಇರಬಾರದು, ಹಾಗೂ ಪ್ರತಿಯೊಬ್ಬರು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು. ನಂತರ ನೂತನ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ಶಂಕ್ರಪ್ಪ ಬಡಿಗೇರ್, ಸಾಕೀನ್ ತಿಮ್ಮರಗುದ್ದಿ ರವರು ಮಾತನಾಡಿ ಸರ್ಕಾರದ ಸೌಲಭ್ಯಗಳನ್ನ ಸಮಾಜದ ಜನರಿಗೆ ತಿಳಿಸುವ ಕೆಲಸವನ್ನ ಹಾಗೂ ಸೌಲಭ್ಯ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ಇರುವ ಸಮಾಜದ ಎಲ್ಲಾ ಜನರ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಕಟ್ಟುವ ಪ್ರಯತ್ನವನ್ನ ಪ್ರಾಮಾಣಿಕವಾಗಿ ಮಾಡುತ್ತೇವೆ. ಯಲಬುರ್ಗಾ ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಸಮುದಾಯ ಭವನ ಹಾಗೂ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಕೊಡಿಸುವ ಕೆಲಸವನ್ನು ಮಾಡುತ್ತೇನೆ. ನಾವು ವಿಶ್ವಕರ್ಮ ಸಮಾಜದಲ್ಲಿ ಜನಿಸಿ ನಮಗೆ ನಾವು ಏನು ಮಾಡಿಕೊಂಡಿದ್ದೇವೆ ಎಂಬುದು ಮುಖ್ಯವಲ್ಲ, ನಮ್ಮ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೇವೆ ಎಂಬುದು ಬಹು ಮುಖ್ಯವಾಗಿದೆ. ನಮ್ಮ ಸಮಾಜದಲ್ಲಿ ಅನೇಕ ಮಹನೀಯರು ಜನಿಸಿದ್ದಾರೆ. ಈ ನಾಡಿಗೆ ಅವರ ಕೊಡುಗೆ ಈಗಲು ಸ್ಮರಣೀಯವಾಗಿವೆ. ಅಮರಶಿಲ್ಪಿ ಜಕಣಾಚಾರ್ಯ ರವರ ಕೊಡುಗೆ ಇಂದಿಗೂ ಅಜರಾಮರ. ಯಲಬುರ್ಗಾ ತಾಲೂಕಿನಲ್ಲಿ ವಿಶ್ವಕರ್ಮ ಸಮಾಜವನ್ನ ಒಗ್ಗೂಡಿಸಿಕೊಂಡು ಸಮಾಜ ಕಟ್ಟುವ ಪ್ರಯತ್ನವನ್ನ ನಾವು ಮಾಡುತ್ತೇವೆ ಎಂದರು. ನಂತರ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ವಿಶ್ವಕರ್ಮ ತಾಲೂಕ ಅಧ್ಯಕ್ಷನಾಗಿ ಸಮಾಜ ಕಟ್ಟುವ ಕೆಲಸವನ್ನ ತಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಮಾಡಿದ್ದೇನೆ. ನಾನು ಹಾಗೂ ತಾಲೂಕು ಘಟಕ ಮಾಡಿದ ಎಲ್ಲಾ ಕೆಲಸಗಳಿಗೂ ಪ್ರೋತ್ಸಾಹವನ್ನ ತಾಲೂಕಿನ ವಿಶ್ವಕರ್ಮ ಜನರು ಮಾಡಿದ್ದಾರೆ. ಇನ್ನು ಹೆಚ್ಚು ಕೆಲಸ ಮಾಡಬೇಕಾಗಿತ್ತು, ನೂತನ ತಾಲೂಕ ಗೌರವಾಧ್ಯಕ್ಷರು ಹಾಗೂ ಅಧ್ಯಕ್ಷರು ಸಮಾಜಕ್ಕೆ ಸರ್ಕಾರದ ಸೌಲಭ್ಯ ಹಾಗೂ ಸಮಾಜವನ್ನ ಬಲಿಷ್ಠ ಗೊಳಿಸುವ ಕೆಲಸವನ್ನು ಮಾಡಲಿ ಎಂದು ಶುಭ ಕೋರುತ್ತೇನೆ ಎಂದರು. ನಂತರ ನೂತನವಾಗಿ ಆಯ್ಕೆಯಾದ ತಾಲೂಕ ಗೌರವಾಧ್ಯಕ್ಷರಾದ ಗುರುಮೂರ್ತಿ ಬಡಿಗೇರ್ ರವರಿಗೆ ಹಾಗೂ ಶಂಕ್ರಪ್ಪ ಬಡಿಗೇರ್ ರವರಿಗೆ ಗ್ರಾಮದ ಶ್ರೀ ದ್ಯಾಮಮ್ಮ ದೇವಿಯ ದೇವಸ್ಥಾನದಲ್ಲಿ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಗೌರವಾಧ್ಯಕ್ಷರಾದ ಈಶಪ್ಪ ನರಸಾಪುರ, ಜಿಲ್ಲಾ ಸಮಿತಿ ಸದಸ್ಯರಾದ ಮಹದೇವಪ್ಪ ಕಮ್ಮಾರ್, ಯಲಬುರ್ಗಾ ತಾಲೂಕ ಸಮಾಜದ ಹಿರಿಯರಾದ ಬಸಪ್ಪ ಕಮ್ಮಾರ್, ಅಚ್ಚಪ್ಪ ಬಡಿಗೇರ್,ಮಾಜಿ ಜಿಲ್ಲಾ ಖಜಾಂಚಿ ಈಶಪ್ಪ ಬಡಿಗೇರ್ ಮುರಡಿ,ಡಾ ಶೇಷಗಿರಿ ಪತ್ತಾರ, ಜಗದೇವಪ್ಪ ಬಡಿಗೇರ್ ಹಿರೇವಂಕಲಕುಂಟಾ, ಲೋಹಿತ್ ಪತ್ತಾರ, ಶಾಂತೇಶ ಬಡಿಗೇರ್ ವಜ್ರಬಂಡಿ, ಅಶೋಕ್ ಬಡಿಗೇರ್, ಉಮೇಶ್ ಬಡಿಗೇರ್, ಶರಣಪ್ಪ ಬಡಿಗೇರ್, ಪ್ರಹ್ಲಾದ್ ಬಡಿಗೇರ್, ಸುನಿಲ್ ಬಡಿಗೇರ್, ವಿಶ್ವನಾಥ್ ಬಡಿಗೇರ್ ಲಿಂಗನಬಂಡಿ, ಮಳಿಯಪ್ಪ ಬಡಿಗೇರ್ ಲಿಂಗನಬಂಡಿ, ಶರಣು ಕುಮಾರ್ ಬಡಿಗೇರ ನರಸಾಪುರ, ಶಿವಾನಂದ್ ಬಡಿಗೇರ್, ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Comments are closed.