ಶ್ರೀನಿವಾಸ್ ಗುಪ್ತಾ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ
ಕೊಪ್ಪಳ : ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕವಾಗಿರುವ ಶ್ರೀನಿವಾಸ ಗುಪ್ತಾ ದಿ. ೨೧ರಂದು ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಕರ್ನಾಟಕದ ಘನ ಸರ್ಕಾರವು ನನ್ನನ್ನು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷನನ್ನಾಗಿ ನೇಮಕ ಮಾಡಿರುತ್ತದೆ, ಅದರ ನಿಮಿತ್ಯ ನಾಳೆ ದಿನಾಂಕ ೨೧-೧೦-೨೦೨೪ ಸೋಮವಾರದಂದು ಬೆಳಗ್ಗೆ ೧೧:೩೦ ಕ್ಕೆ ಶ್ರೀ ಗಣೇಶ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಪೂಜೆಯೊಂದಿಗೆ ಪದಗ್ರಹಣ ಕಾರ್ಯಕ್ರಮ ವನ್ನು ಹೊಸಪೇಟೆ ರಸ್ತೆಯಲ್ಲಿರುವ ಕೊಪ್ಪಳ ನಗರಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ (ಗೋವನಕೊಪ್ಪ ಆಸ್ಪತ್ರೆಯ ಹತ್ತಿರ) ಆಯೋಜಿಸಲಾಗಿದೆ, ಆದ್ದರಿಂದ ಈ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಿ ಶುಭ ಕೋರಬೇಕಾಗಿ ಶ್ರೀನಿವಾಸ ಗುಪ್ತಾ ವಿನಂತಿಸಿಕೊಂಡಿದ್ಧಾರೆ.
ಭಾಗ್ಯನಗರ ಹಾಗೂ ಕೊಪ್ಪಳದ ಮುಖ್ಯ ರಸ್ತೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಶುಭಕೋರುವ ಬ್ಯಾನರ್ ಅಳವಡಿಸಿದ್ದಾರೆ.
Comments are closed.