ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಸಂಘಟಿತರಾಗುವುದು ಅವಶ್ಯ: – ಸುಧಾ ಚಿ. ಗರಗ
ಗಂಗಾವತಿ: ಒಂದು ವರ್ಷದಲ್ಲಿ ಕನಿಷ್ಟ ೯೦ ದಿನಗಳ ಕಾಲ ಕಟ್ಟಡ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಗುರುತಿಸಲಾಗುವುದು, ಬಹುತೇಕ ಕಟ್ಟಡ ಕಾರ್ಮಿಕರು ಅನಕ್ಷರಸ್ಥರಾಗಿರುವುದರಿಂದ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಚಿ ಗರಗ ಅವರು ತಿಳಿಸಿದರು.
ಅವರು ಅಕ್ಟೋಬರ್-೧೫ ಮಂಗಳವಾರ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಮೊದಲನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪರಿಹಾರಧನದ ಮಂಜೂರಾತಿ ಆದೇಶ ಹಾಗೂ ಹೆರಿಗೆ ಧನಸಹಾಯದ ಬಾಂಡ್‌ಗಳು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಗಂಗಾವತಿ ತಾಲೂಕಿನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಕಟ್ಟಡ ಕಾರ್ಮಿಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿಯವರ ಅನುಪಸ್ಥಿತಿಯಲ್ಲಿ ಮನೋಹರಗೌಡ ಹೇರೂರು, ನಗರಸಭೆ ಸ್ಥಾಯಿ ಸಮಿತಿಯ ಮಾಜಿ ಸದಸ್ಯರಾದ ರಾಮಾನಾಯ್ಕ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷರಾದ ಪಿ. ಲಕ್ಷ್ಮಣ್ ನಾಯ್ಕ್, ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಪಾಂಡುನಾಯ್ಕ್ ಮೇಸ್ತ್ರಿ, ಸೇರಿದಂತೆ ಎಪಿಎಂಸಿ ಮಾಜಿ ಸದಸ್ಯರಾದ ತಿಪ್ಪಣ್ಣ, ಕೆ.ಆರ್ ಪಕೀರಪ್ಪ, ದೇವಪ್ಪ, ವೀರೇಶ್ ಸುಳೇಕಲ್. ಮನೋಹರ ಮೇಸ್ತ್ರಿ, ವೆಂಕಟೇಶ್ ಜಾದವ್, ಮಂಜುನಾಥ್. ಅಂಬರೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಪಾಂಡುನಾಯ್ಕ ಮೇಸ್ತ್ರಿ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿ, ಗಂಗಾವತಿ ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿಯೂ ವಿರುಪಾಪುರ, ಹಿರೇಜಂತಕಲ್ ಹಾಗೂ ವಿರುಪಾಪುರ ತಾಂಡಗಳಲ್ಲಿ ಅತಿ ಹೆಚ್ಚು ಕಟ್ಟಡ ಕಾರ್ಮಿಕರಿದ್ದು, ಇವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಈ ಕಾರ್ಮಿಕರ ಕಲ್ಯಾಣಕ್ಕಾಗಿಯೇ ನಮ್ಮ ಶ್ರೀ ಸೇವಾಲಾಲ್ ಕಟ್ಟಡ ಕಾರ್ಮಿಕ ಸಂಘ ಸ್ಥಾಪನೆಗೊಂಡು ಒಂದು ವ?ದ ಅವಧಿಯಲ್ಲಿ ತಾಲೂಕಿನ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಂಘದ ಸರ್ವ ಸದಸ್ಯರು ಶ್ರಮಿಸುತ್ತಾ, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿಯುವುದೇ ನಮ್ಮ ಸಂಘದ ಮೂಲ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ನಮ್ಮ ವಿರುಪಾಪುರ ಭಾಗದಲ್ಲಿ ಕಾರ್ಮಿಕ ಭವನಕ್ಕಾಗಿ ಮುಂದಾಗಬೇಕು, ಜೊತೆಗೆ ಕಟ್ಟಡ ಕಾರ್ಮಿಕರ ಕುಂದುಕೊರತೆಗಳನ್ನು ಶೀಘ್ರದಲ್ಲಿ ಪರಿಹರಿಸಿ, ಸರ್ಕಾರದ ಎಲ್ಲಾ ಯೋಜನೆಗಳನ್ನು ಸರಳವಾಗಿ ದೊರಕುವಂತೆ ಕ್ರಮವಹಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ವೆಂಕಟೇಶ ಮೇಸ್ತ್ರಿ, ಉಪಾಧ್ಯಕ್ಷರಾದ ಬಾಲಾಜಿ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಜಾಗೋಗೊರ್, ಸಹಕಾರ್ಯದರ್ಶಿ ಶಿವಪ್ಪ ರಾಠೋಡ್ ಮೇಸ್ತ್ರಿ, ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಮೇಸ್ತ್ರಿ, ಖಜಾಂಚಿ ರವಿಚಂದ್ರ ಮೇಸ್ತ್ರಿ, ಸದಸ್ಯರುಗಳಾದ ಯಂಕಪ್ಪ ಮೇಸ್ತ್ರಿ, ಶೇಟು ನಾಯ್ಕ ಮೇಸ್ತ್ರಿ, ಕೃಷ್ಣನಾಯ್ಕ ಮೇಸ್ತ್ರಿ, ಮೌನೇಶ ಚವ್ಹಾಣ ಮೇಸ್ತ್ರಿ, ದಾವಲಸಾಬ್ ಮೇಸ್ತ್ರಿ, ಲೋಕೇಶ ಮೇಸ್ತ್ರಿ, ಸುನೀಲ್ ಮೇಸ್ತ್ರಿ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Comments are closed.