22.18 ಕೋಟಿ ವೆಚ್ಚದಲ್ಲಿ 16 ಕೆರೆ ತುಂಬಿಸುವ ಯೋಜನೆ ಅಡಿಗಲ್ಲು-ಕೆ. ರಾಘವೇಂದ್ರ ಹಿಟ್ನಾಳ

0

Get real time updates directly on you device, subscribe now.

2.18 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು.

  ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇನೆ

ಕೊಪ್ಪಳ : 15 ಈ ಬಾರಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಅನೇಕ ಕಡೆ ರಸ್ತೆಗಳು ಹಾಳಾಗಿವೆ,ಕ್ಷೇತ್ರದಲ್ಲಿ ಹದಗೆಟ್ಟಿರುವ ಎಲ್ಲಾ ರಸ್ತೆಗಳಿಗೆ ಅನುಧಾನ ಮಿಸಲಿಟ್ಟು ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ, ಬಹುದಿನಗಳ ಬೇಡಿಕೆ ಆಗಿದ್ದ ಕವಲೂರು -ಬನ್ನಿಕೊಪ್ಪ ರಸ್ತೆಗೆ ಅಭಿವೃದ್ಧಿಗೆ 7.50 ಕೋಟಿ ಅನುಧಾನ,ಕವಲೂರು -ಘಟ್ಟರೆಡ್ಡಿಹಾಳ ರಸ್ತೆಗೆ 3.50 ಕೋಟಿ, ಕವಲೂರು -ಮುರ್ಲಾಪುರ ರಸ್ತೆ ಅಭಿವೃದ್ಧಿಗೆ 2.19 ಕೋಟಿ, ಹೈದರ್ ನಗರ -ಹಟ್ಟಿ -ಕೇಸ್ಲಾಪುರ ರಸ್ತೆ ಅಭಿವೃದ್ಧಿಗೆ 5 ಕೋಟಿ, ಕವಲೂರು ಬನ್ನಿಕೊಪ್ಪ ವ್ಹಾಯಾ ಗುಡುಗೇರಿ ರಸ್ತೆ ಅಭಿವೃದ್ಧಿಗೆ 2.25 ಕೋಟಿ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿ, ಉತ್ತಮ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ ಮತಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಅಳವಂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗುಡುಗೇರಿ, ಕವಲೂರು, ಮುರ್ಲಾಪುರ, ಘಟ್ಟರಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಕೇಸ್ಲಾಪುರ, ರಘುನಾಥನಹಳ್ಳಿ, ಅಳವಂಡಿ ಹಾಗೂ ಕಂಪ್ಲಿ ಗ್ರಾಮಗಳಲ್ಲಿ ಅಂದಾಜು ಮೊತ್ತ 48.18 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದರು.

 

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು

 

ಕೆರೆ ತುಂಬಿಸುವ ಯೋಜನೆಗೆ ಅಡಿಗಲ್ಲು : ಸಿಂಗಟಾಲೂರು ಏತಾ ನೀರಾವರಿ ಯೋಜನೆಡಿಯಲ್ಲಿ 22.18 ಕೋಟಿ ವೆಚ್ಚದಲ್ಲಿ 16 ಕೆರೆ ತುಂಬಿಸುವ ಯೋಜನೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಅಡಿಗಲ್ಲು ನೆರವೇರಿಸಿದರು. ತುಂಗಭದ್ರಾ ಜಲಾಶಯದ ಹಿನ್ನೀರನ್ನು ಉಪಯೋಗಿಸಿಕೊಂಡು ಕವಲೂರಿನ 3 ಕೆರೆ, ಮುರ್ಲಾಪುರದ 1 ಕೆರೆ, ಘಟ್ಟರಡ್ಡಿಹಾಳದ 1 ಕೆರೆ, ಬೆಳಗಟ್ಟಿಯ 1 ಕೆರೆ, ಹಟ್ಟಿಯ 1 ಕೆರೆ, ಅಳವಂಡಿಯ 2 ಕೆರೆ, ಬೆಟಗೇರಿಯ 1 ಕೆರೆ, ಹಿರೇಸಿಂದೋಗಿಯ 1 ಕೆರೆ ಕೋಳೂರು ಹಾಗೂ ಹಂದ್ರಾಳ ಕೆರೆಗಳನ್ನು ಈ ಯೋಜನೆಡಿಯಲ್ಲಿ ತುಂಬಿಸಲಾಗುವುದು ಎಂದರು.

 

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕುರಿತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆ ಮಾತನಾಡಿದ್ದೇನೆ ಅನುಧಾನ ಮಂಜೂರು ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ, ಈ ಯೋಜನೆ ಜಾರಿ ಆದರೆ 16,523 ಹೆಕ್ಟರ್ ಪ್ರದೇಶ ನೀರಾವರಿ ಆಗಲಿದೆ ಈ ಯೋಜನೆಯನ್ನು ಜಾರಿ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸಿದ್ದರಾಮಯ್ಯ ಈ ರಾಜ್ಯಕಂಡ ಧೀಮಂತ ನಾಯಕ 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಭ್ರಷ್ಟಚಾರ ಮಾಡದೆ ಆಡಳಿತ ನಡೆಸಿದ ನಾಯಕ, ಮುಡಾ ಹಗರಣದಲ್ಲಿ ಅವರದ್ದು ಯಾವುದೇ ರೀತಿಯ ಪಾತ್ರ ಇಲ್ಲ, ಇನ್ನುಳಿದ ಅವಧಿಗೂ ಅವರೇ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಲಿದ್ದಾರೆ ಎಂದರು.

 

ಈ ವೇಳೆ ಮಾಜಿ ಸಂಸದರಾದ ಕರಡಿ ಸಂಗಣ್ಣ, ಮಾಜಿ ಜಿ. ಪಂ ಅಧ್ಯಕ್ಷರಾದ ಎಸ್ ಬಿ ನಾಗರಳ್ಳಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ರೆಡ್ಡಿ ಗಲ್ಬಿ, ಭರಮಪ್ಪ ಹಟ್ಟಿ, ಗ್ಯಾರಂಟಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್,ವೆಂಕನಗೌಡ ಹಿರೇಗೌಡ್ರು, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಸಿಂಟ್ರ, ಮುತ್ತಣ್ಣ ಕವಲೂರು, ಗುರು ಬಸಸವರಾಜ ಹಳ್ಳಿಕೇರಿ, ಅನ್ವರ್ ಗಡಾದ್,ರಾಜಶೇಖರ್ ಅಡೂರ್,ಶಿವಕುಮಾರ್ ಶೆಟ್ಟರ್, ಹಣಮೇಶ್ ಹೊಸಳ್ಳಿ, ತೋಟಪ್ಪ ಹಟ್ಟಿ,ಡಿವೈಎಸ್ಪಿ ಮುತ್ತಣ್ಣ, ಸಿಪಿಐ ಸುರೇಶ ದೊಡ್ಡಮನಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕ ಪಂಚಾಯತ್ ಇಓ ದುಂದೇಶ್ ತುರಾದಿ, ಮಲ್ಲು ಪೂಜಾರ್, ಮಹಾಂತೇಶ್ ಕವಲೂರು, ದೇವಪ್ಪ ಹಳ್ಳಿ, ನಜೀರ್ ಅಳವಂಡಿ, ಸುರೇಶ ದಾಸರೆಡ್ಡಿ,ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಕ್ಬರ್ ಪಲ್ಟನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. k raghavendra hitnal

Get real time updates directly on you device, subscribe now.

Leave A Reply

Your email address will not be published.

error: Content is protected !!