ಭಾಗ್ಯನಗರ : ಸಂಭ್ರಮದ ಶರನ್ನವರಾತ್ರಿ ಉತ್ಸವ
ಕೊಪ್ಪಳ : ಭಾಗ್ಯನಗರದ ಅಂಬಾಭವಾನಿ ದೇವಸ್ಥಾನದಲ್ಲಿ ಸಂಭ್ರಮದ ಶರನ್ನವರಾತ್ರಿ ಉತ್ಸವ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿರುತ್ತದೆ .
ನಿತ್ಯ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ,ಭಜನೆ,ಗೊಂದಳಿಗರ ಕೀರ್ತನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ.
ಗುರುವಾರದಂದು ಕೊಪ್ಪಳ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಜವಾಹರಲಾಲ್ ಸಾ ಅಂಟಾಳ ಮರದ, ಉಪಾಧ್ಯಕ್ಷ ನಾಗುಸಾ ಮೇಘರಾಜ್ ,ಮುಖಂಡರಾದ ಲಕ್ಷ್ಮಣಸಾ ನಿರಂಜನ,ಸತೀಶ್ ಮೇಘರಾಜ್,ಸಾಯಿನಾಥ್ ಮೇಘರಾಜ್,ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು .
Comments are closed.