ಒಣಬಳ್ಳಾರಿಯಲ್ಲಿ ಬೇಟಿ ಬಚಾವ್ ಬೇಟಿ ಪಡವೋ ಕಾರ್ಯಕ್ರಮ

Get real time updates directly on you device, subscribe now.

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಶಿಶು ಅಭಿವೃದ್ಧಿ ಯೋಜನೆ, ಒಣಬಳ್ಳಾರಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಇವರ ಸಹಯೋಗದಲ್ಲಿ ಬೇಟಿ ಬಚಾವ್ ಬೇಟಿ ಪಡವೋ ಕಾರ್ಯಕ್ರಮ ಅಕ್ಟೋಬರ್ 07ರಂದು ಒಣಬಳ್ಳಾರಿ ಶಾಲೆಯಲ್ಲಿ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೋಹಿಣಿ ಕೋಟಗಾರ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿ, ಲಿಂಗ ಸಮಾನತೆ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪೋಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪೋಷಕರ ಜಬ್ದಾರಿಯಾಗಿದೆ ಎಂದು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶಿವಶರಣಪ್ಪ ಅವರು ಮಾತನಾಡಿ, ಹೆಣ್ಣು ಮಕ್ಕಳನ್ನು ಬಾಲ್ಯವಿವಾಹ ಮಾಡದಂತೆ ನೋಡಿಕೊಳ್ಳುವುದು, ಬ್ರೂಣಹತ್ಯೆ ತಡೆಗಟ್ಟುವುದು ಹಾಗೂ ಮಕ್ಕಳ ರಕ್ಷಣೆ ನಮ್ಮ ಪೋಷಕರ ಜವಬ್ದಾರಿಯಾಗಿದೆ ಎಂದ ಅವರು, ಇಲಾಖೆಯ ಯೋಜನೆಗಳ ಅನುಕೂಲ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಯೋಪಾಧ್ಯಾಯರು, ಆರೋಗ್ಯ ಇಲಾಖೆ ಎ.ಎನ್.ಎಂ ಹಾಗೂ ವಲಯ ಮೇಲ್ವಿಚಾರಕಿಯರು ಶಾಲಾ ಮಕ್ಕಳು ಕಿಶೋರಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!