ಬಿಜೆಪಿ -ಜೆಡಿಎಸ್ ನಾಯಕರು ಸುಖಾ ಸುಮ್ಮನೆ ರಾಜಕೀಯವಾಗಿ ಆರೋಪ ಮಾಡುತ್ತಿದ್ದಾರೆ- ಕೆ. ರಾಘವೇಂದ್ರ ಹಿಟ್ನಾಳ
ಕವಲೂರು ಭಾಗದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುಧಾನ ಮಿಸಲಿಟ್ಟಿದ್ದೇವೆ ಮುಂದಿನ 3-4 ತಿಂಗಳ ಒಳಗಡೆ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಕಳೆದ ಮೂರ್ನಾಲ್ಕು ದಿನದ ಹಿಂದೆ ರಸ್ತೆ ಅಭಿವೃದ್ಧಿಗಾಗಿ ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ನಡೆದ ಪ್ರತಿಭಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈ ಪ್ರತಿಭಟನೆಯನ್ನು ಕೊಪ್ಪಳದ ಬಿಜೆಪಿ -ಜೆಡಿಎಸ್ ನಾಯಕರು ರಾಜಕೀಯಕ್ಕೆ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ.ಅವರು ರಾಜಕೀಯ ಮಾಡಲಿ, ನಾವು ರಸ್ತೆ ಮಾಡಿ ತೋರಿಸುತ್ತೇವೆ. ಹೀಗಾಗಲೇ ಈ ಭಾಗದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುಧಾನ ಮೀಸಲಿಡುವ ಕೆಲಸ ಮಾಡಿದ್ದೇವೆ ಕೆಲವೊಂದು ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು ಎಲ್ಲಾ ಕ್ರಿಯೆ ಮುಗಿಸಿ ಶೀಘ್ರದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭ ಮಾಡಿ ಮುಂದಿನ 4-5 ತಿಂಗಳ ಒಳಗಡೆ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳಿದ್ದಾರೆ.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಪತ್ರಿಕಾ ಪ್ರಕಟಣೆ
ಅಳವಂಡಿ ವ್ಯಾಪ್ತಿಯಲ್ಲಿ ಅಂದಾಜು 68.48 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರ.
1. ಕವಲೂರಿನಿಂದ ಮುರ್ಲಾಪುರ ವರೆಗೆ ರಸ್ತೆ ಅಭಿವೃದ್ಧಿ 3.5 ಕೋಟಿ ಅನುಧಾನ ಕಿ.ಮೀ 3.00 ರಿಂದ 4.00 ಕಿ. ಮೀ ಮತ್ತು 4.50 ಕಿ ಮೀ ನಿಂದ 6.00 ಕಿ ಮೀ ರಸ್ತೆ ಅಭಿವೃದ್ಧಿ.
2.ಕವಲೂರು ಬನ್ನಿಕೊಪ್ಪ ವಾಯ ಗುಡುಗೇರಿ ರಸ್ತೆ 2.25 ಕೋಟಿ ಅನುಧಾನ. 0.00 ಕಿ. ಮೀ ಯಿಂದ 2.25 ಕಿ ಮೀ ರಸ್ತೆ ಅಭಿವೃದ್ಧಿ.
3. ಕವಲೂರು -ಬನ್ನಿಕೊಪ್ಪ ರಸ್ತೆ ಅಭಿವೃದ್ಧಿ 7.5 ಕೋಟಿ.
2.3 ಕಿ. ಮೀ ಯಿಂದ 6.8 ಕಿ. ಮೀ ವರೆಗೆ ರಸ್ತೆ ಅಭಿವೃದ್ಧಿ.
4. ಕವಲೂರು -ಮುರ್ಲಾಪುರ ರಸ್ತೆ ಅಭಿವೃದ್ಧಿ 2.19 ಕೋಟಿ ಅನುಧಾನ. 0 ಕಿ. ಮೀ ಯಿಂದ 3.00 ಕಿ. ಮೀ ವರೆಗೆ ರಸ್ತೆ ಅಭಿವೃದ್ಧಿ.
5. ಗುಡುಗೇರಿ ಯಿಂದ ಹಳ್ಳಿಕೇರಿಯ 5.16 ಕಿ. ಮೀ ರಸ್ತೆ ಅಭಿವೃದ್ಧಿಗೆ 7.26 ಕೋಟಿ.
6. ಗುಡುಗೇರಿ ಯಿಂದ ಏಕ್ಸಲಾಪುರ 3.29 ಕಿ. ಮೀ ರಸ್ತೆ ಅಭಿವೃದ್ಧಿಗೆ 4.47 ಕೋಟಿ
7.ಅಳವಂಡಿ ಯಿಂದ ನಿಲೋಗಿಪುರದ 3.15 ರಸ್ತೆ ಅಭಿವೃದ್ಧಿಗೆ 1.7 ಕೋಟಿ
8.ಅಳವಂಡಿ ಯಿಂದ ಘಟ್ಟರಡ್ಡಿಹಾಳ 2.8 ಕಿ. ಮೀ ರಸ್ತೆ ಅಭಿವೃದ್ಧಿಗೆ 3.66 ಕೋಟಿ
9.ಬೈರಾಪುರ ಯಿಂದ ಬೆಟಗೇರಿಯ 6.71 ಕಿ. ಮೀ ರಸ್ತೆ ಅಭಿವೃದ್ಧಿಗೆ 7.64 ಕೋಟಿ ಅನುಧಾನ
10. ಮೋರನಾಳ ಯಿಂದ ಬೋಚನಹಳ್ಳಿ 4.30 ಕಿ. ಮೀ ರಸ್ತೆ ಅಭಿವೃದ್ದಿಗೆ 1.52 ಕೋಟಿ ಅನುಧಾನ.
11.ಹೈದರ್ ನಗರ ಯಿಂದ ಹಟ್ಟಿ ವರೆಗೆಗಿನ ರಸ್ತೆ ಅಭಿವೃದ್ಧಿಗೆ 5 ಕೋಟಿ.
12. ಕೇಸಲಾಪುರ ಯಿಂದ ರಾಜ್ಯ ಹೆದ್ದಾರಿ SH -129 ರಸ್ತೆ ಅಭಿವೃದ್ಧಿಗೆ 1.77 ಕೋಟಿ
13.ಅಳವಂಡಿ ಯಿಂದ ಬೆಳಗಟ್ಟಿ ವರೆಗೆ ರಸೆ ಅಭಿವೃದ್ಧಿಗೆ 20 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶಾಸಕ ರಾಘವೇಂದ್ರ ಹಿಟ್ನಾಳ ಕೈಗೊಂಡ ಕಾಮಗಾರಿಗಳ ಪಟ್ಟಿ ನೀಡಿದ್ದಾರೆ
Comments are closed.