ದಸರಾ ರಾಜ್ಯಮಟ್ಟದ ಸಿಎಂ ಕಪ್ ನೆಟ್‌ಬಾಲ್ ನಲ್ಲಿ ಕಲಬುರಗಿಗೆ ಕಂಚು
ಕೊಪ್ಪಳ: ನಗರದ ಶ್ರೀ ಚೈತನ್ಯ ಸಂಸ್ಥೆಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಐದು ಜನ ಬಾಲಕಿಯರನ್ನು ಒಳಗೊಂಡ ಕಲಬುರಗಿ ಮಹಿಳಾ ನೆಟ್ ಬಾಲ್ ತಂಡ ರಾಜ್ಯಮಟ್ಟದ ಸಿಎಂ ಕಪ್ ನೆಟ್‌ಬಾಲ್ ಪಂದ್ಯಾಟದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ (ಕಂಚಿನ ಪದಕ) ಸಂಪಾದಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಮೊದಲ ಬಾರಿಗೆ ಇಂತಹ ಸಾಧನೆ ಮಾಡಿದ ತಂಡದ ಸಾರಥ್ಯವನ್ನು ಸಾಹಿತ್ಯ ಎಂ. ಗೊಂಡಬಾಳ ವಹಿಸಿದ್ದರು, ಅಮರೇಶ ಕೋಚ್ ಆಗಿದ್ದರೆ ನೆಟ್‌ಬಾಲ್ ಸಂಸ್ಥೆ ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮ್ಯಾನೇಜರ್ ಆಗಿ ತಂಡ ಮುನ್ನಡೆಸಿದರು.
ಕಲಬುರಗಿ ವಿಭಾಗದ ಕೊಪ್ಪಳದ ಸಾಹಿತ್ಯ ಎಂ. ಗೊಂಡಬಾಳ, ಗ್ರೀಷ್ಮಾ ಜಿ. ಎಂ., ಅಕ್ಷಯಾ ಜಿ., ಬಿಬಿ ಬತುರ್ ಅಫ್ಶೀನ್, ಶ್ರೀಯಾ ಎಸ್. ಕರ್ಣಂ, ಹೊಸಪೇಟೆ ಜಿಲ್ಲೆಯ ಸೃಷ್ಟಿ ಬಿ. ಜಿ., ಫ್ಲೇವಿ ಜಿ., ಮನ್ವಿತಾ ಮಸ್ತಿ, ಅನಘ ಎಂ., ಬಿ. ಲಕ್ಷ್ಮೀ, ತಾನ್ವಿ ವಿ. ಹೆಚ್., ಕಾಮಿನೇನಿ ಕಾರುಣ್ಯ ತಂಡದಲ್ಲಿ ಇದ್ದರು.
ಸದರಿಯವರ ಸಾಧನೆಗೆ ಕ್ರೀಡಾಪಟುಗಳೂ ಆದ ಸಂಸದ ಕೆ. ರಾಜಶೇಖರ್ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷ ಎಂ. ಅಮ್ಜದ್ ಪಟೇಲ್, ಪೌರಾಯುಕ್ತ ಗಣೇಶ ಪಾಟೀಲ್, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್, ನೆಟ್ ಬಾಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಟೇಲರ್ ಅಭಿನಂದಿಸಿದ್ದಾರೆ.
Comments are closed.