ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯ ರಚನೆ ಅಪ್ರಜಾತಾಂತ್ರಿಕ!
ಸತತವಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಆರು ಜನ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದೆ.
ಶೈಕ್ಷಣಿಕ ಗುಣಮಟ್ಟವನ್ನು ಸುಧಾರಣೆ ಮಾಡಬೇಕೆಂದರೆ ಆ ಭಾಗದ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಆದರೆ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಸರ್ಕಾರ ರಚಿಸಿರುವ ಸಮಿತಿಯಲ್ಲಿ ಈ ಭಾಗದ ಶಿಕ್ಷಣ ತಜ್ಞರು, ಶಿಕ್ಷಕರಿಲ್ಲ ಬದಲಾಗಿ ದೊಡ್ಡ ದೊಡ್ಡ ಖಾಸಗಿ ಸಂಸ್ಥೆಗಳ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳನ್ನು ಸಮಿತಿಯಲ್ಲಿರಿಸಲಾಗಿದೆ. ಇದು ಅತ್ಯಂತ ಅವೈಜ್ಞಾನಿಕ ಮತ್ತು ಪ್ರಶ್ನೆ ಹುಟ್ಟಿಸುವ ನಡೆಯಾಗಿದೆ. ಶಿಕ್ಷಣ ತಜ್ಞರು, ಶಿಕ್ಷಕರಿಲ್ಲದೆ ಈ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಲು ಸಾಧ್ಯವಿಲ್ಲ. ಇದನ್ನು ವಿದ್ಯಾರ್ಥಿಗಳು ಶಿಕ್ಷಣ ಪ್ರೇಮಿಗಳು ಪೋಷಕರು ಒಪ್ಪುವುದಿಲ್ಲ.
ಆದ್ದರಿಂದ ಈ ಭಾಗದ ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ ಕೂಡಲೇ ಈ ಸಮಿತಿಯನ್ನು ಪ್ರಜಾತಾಂತ್ರಿಕವಾಗಿ, ವೈಜ್ಞಾನಿಕ ದೃಷ್ಟಿಕೋನದಿಂದ ಈ ಭಾಗದ ಶಿಕ್ಷಣ ತಜ್ಞರು ಶಿಕ್ಷಕರು ನಿವೃತ್ತ ಪ್ರಾಧ್ಯಾಪಕರನ್ನು ಒಳಗೊಂಡ ಸಮಿತಿಯನ್ನು ಪುನರಚಿಸಬೇಕೆಂದು ಜಿಲ್ಲಾ ಸಂಚಾಲಕರು ಗಂಗರಾಜ ಅಳ್ಳಳ್ಳಿ ಎ.ಐ.ಡಿ.ಎಸ್.ಓ ಕೊಪ್ಪಳ ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆಯು ಆಗ್ರಹ
Comments are closed.