೧೦೦ ವಿದ್ಯಾರ್ಥಿಗಳಿಗೆ ಉನ್ನತಶಿಕ್ಷಣಕ್ಕೆ ಪ್ರೋತ್ಸಾಹಧನ ವಿತರಣೆ ಹಾಗೂ ಅರಿವಿನ ಪಯಣ ಎಂಬ ಜಾಗೃತಿಕಾರ್ಯಕ್ರಮ

Get real time updates directly on you device, subscribe now.


ಕೊಪ್ಪಳ
ಕೊಪ್ಪಳ ಜಿಲ್ಲೆಯಲ್ಲಿಯುವಜನರ ಸಂಖ್ಯೆ ಹೆಚ್ಚಿದೆ. ಹಾಗೆಯೇ ಕೊಪ್ಪಳದಲ್ಲಿ ಯುಜನರ ಓದುಸಂಖ್ಯೆಯೂ ಅಷ್ಟೇ ಕಡಿಮೆಇದೆ. ಕಾರಣಆರ್ಥಿಕ ಸ್ಥಿತಿ ಇರಬಹುದುಅಥವಾ ಮಾಹಿತಿಯಕೊರತೆಇರಬಹುದು, ಹಾಗೆಯೇ ಉನ್ನತ ಶಿಕ್ಷಣದ ವ್ಯವಸ್ಥೆಯಕೊರತೆಯೂಇರಬಹುದುಒಟ್ಟಿನಲ್ಲಿಉತ್ತರಕರ್ನಾಟಕ ಭಾಗದಲ್ಲಿ ಯುವಜನರ ಓದಿನ ಸಂಖ್ಯೆಕಡಿಮೆಯಾಗುತ್ತಿದ್ದು, ಇದರ ಬಗ್ಗೆ ಹೆಚ್ಚಿನಆದ್ಯತೆ ನೀಡುವುದು ಇಂತಿನ ಪ್ರಸ್ತುಕ್ಕೆ ಹೆಚ್ಚು ಸೂಕ್ತ ಎಂದು ಅಂಗಳಟ್ರಸ್ಟ್ ನಿದೇರ್ಶಕರಾದಜ್ಯೋತಿ ಹಿಟ್ನಾಳ್ ರವರುತಮ್ಮ ಪ್ರಸ್ತಾವಿಕ ಮಾತುಗಳಲ್ಲಿ ಹಂಚಿಕೊಂಡರು.
ಅವರು ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಗ್ರಾಮ ಪಂಚಾಯಿತಿಯಲ್ಲಿಅಂಗಳ ಟ್ರಸ್ಟ್ ಮತ್ತು ಫೀವ್‌ಗುಡ್‌ಡೀಡ್ಸ್ ರವರು೧೦೦ ವಿದ್ಯಾರ್ಥಿಗಳಿಗೆ ಉನ್ನತಶಿಕ್ಷಣಕ್ಕೆ ಪ್ರೋತ್ಸಾಹಧನ ವಿತರಣೆ ಹಾಗೂ ಅರಿವಿನ ಪಯಣ ಎಂಬ ಜಾಗೃತಿಕಾರ್ಯಕ್ರಮವನ್ನು ದಿನಾಂಕ . ೨೯.೯.೨೦೨೪ ರಂದು ಹಿಟ್ನಾಳ್ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹಯುವಜನರಜೊತೆಗೆಜಿಲ್ಲೆಯ ೪ ತಾಲ್ಲೂಕು, ಕುಕುನೂರು, ಕೊಪ್ಪಳ, ಗಂಗಾವತಿ ಹಾಗೂ ಕಾರಟಗಿತಾಲ್ಲೂಕಿನಯುವಜನರಿಗೆ ಈ ರೀತಿಯ ಪ್ರೋತ್ಸಾಹ ನೀಡುವುದು ಬಹಳ ಅವಶ್ಯಕತೆಇತ್ತು. ಈ ರೀತಿಯ ವ್ಯವಸ್ಥೆಗಳು ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಂದರೆ ಬಹಳ ಉತ್ತಮಯುವಜನರ ಮುಂದಿನ ಭವಿಷ್ಯ ಬಹಳ ಚೆನ್ನಾಗಿಇರುತ್ತದೆಎಂಬುವುದನ್ನು ಹಿಟ್ನಾಳ್ ಗ್ರಾಮ ಪಂಚಾಯಿತಿಯಉಪಾದ್ಯಕ್ಷರಾದರಾಜಣ್ಣ ನಿಂಗಪ್ಪಬಂಡಿಹಾಳರವರು ಮುಖ್ಯಅಥಿತಿಯ ಭಾಷಣದಲ್ಲಿ ವ್ಯಕ್ತಪಡಿಸಿದರು.
ಭಾರತದ ಸಂವಿಧಾನದ ಮಹತ್ವ ತಿಳಿಯುವುದೇ ಶಿಕ್ಷಣದಿಂದ. ಆದರೆದುರಂತಎಂದರೆ ಈಗಿನ ಕಾಲದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವುದೇ ಹೆಚ್ಚು ಯುವಜನರು, ಅದರಲ್ಲೂ ನಮ್ಮ ಕೊಪ್ಪಳ ಜಿಲ್ಲೆಯಯುವಜನರು. ಯಾಕೆಂದರೆ ೧೦ ನೇ ತರಗತಿಓದಿದ ನಂತರಅವರಿಗೆ ಕೆಲಸದಅವಶ್ಯಕತೆ ಹೆಚ್ಚಿರುತ್ತದೆ. ಮನೆಯಲ್ಲಿ ಪರಿಸ್ಥಿತಿ ಚೆನ್ನಾಗಿಇರುವುದಿಲ್ಲ. ಆದ್ದರಿಂದಅವರಆಯ್ಕೆ ಕೆಲಸವೇ ಹೊರೆತು ಶಿಕ್ಷಣವಲ್ಲ. ಆದ್ದರಿಂದಇಂತಹ ಸಂಸ್ಥೆಗಳು ಮುಂದೆ ಬಂದಾಗ ಈ ರೀತಿಯ ಸಂಖ್ಯೆಕಡಿಮೆಯಾಗುತ್ತಾ ಹೋಗುತ್ತದೆ. ಎಂದುಧರ್ಮರಾಜ್ ವಿಸ್ತಾರ ಸಂಸ್ಥೆಯಕೊರ್ಡೀನೇಟರ್ ತಿಳಿಸಿದರು.

ಮಹಿಳೆಯರು ಶಿಕ್ಷಣ ಪಡೆಯುವುದು ಬಹಳ ಮುಖ್ಯ. ಇದರಿಂದಅವರದೈಹಿಕ ಮತ್ತ ಮಾನಸಿಕ ಬೆಳಗವಣಿಗೆಗಳು ಬಲವಾಗಿ ಅವರ ಮುಂದಿನ ಬದುಕನ್ನ ನಿಭಾಯಿಸಲು ಸುಲಭವಾಗುತ್ತದೆ. ಇಲ್ಲಂದರೆ ಬಾಲ್ಯವಿವಾಹಕ್ಕೆ ಬಲಿಯಾಗಿಅವರಜೀವವನ್ನೇ ಕಳೆದುಕೊಳ್ಳಯವ ಪರಿಸ್ಥಿತಿಗಳು ನಮ್ಮಕಣ್ಣೇದರಿಗೆ ಸಾಕಷ್ಟು ಇವೆ. ಹಾಗಾಗಿ ಈ ರೀತಿಯ ಸಹಾಯ ಬಹಳ ಮುಖ್ಯಎಂದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ದೇವದಾಸಿ ಮತ್ತು ಪುನರ್ವಸತಿಯೋಜನಾಧಿಕದಾರಿಯಾದ ಪೂರ್ಣಿಮಾ ಏಳುಬಾವಿ ರವರು ತಿಳಿಸಿದರು.
ಯುವಜನರು ಬರೀ ಶೀಕ್ಷಣ ಪಡೆದುಕೊಂಡರೆ ಸಾಲದುಅವರುಜೀವದ ಕೆಲವು ಮೈಲಿಗಲ್ಲುಗಳಲ್ಲಿ ಜವಬ್ಧಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದುಅವರಕರ್ತವ್ಯಕೂಡಎಂದುಹೆಚ್. ಐ.ಡಿ ಫೋರಂ ಸಂಸ್ಥೆಯಯೋಜನಾಧಿಕಾರಿಯಾದಅಸ್ಮಾ ಬೇಗಂರವರು ತಿಳಿಸಿದರು.
ಲಿಂಗ ಸೂಕ್ಷ್ಮತೆ ಮತ್ತುದೌಜ್ಯನ್ಯತಡೆ ಕಾಯಿದೆಗಳನ್ನು ತಿಳಿದುಕೊಳ್ಳುವುದು ಬಹಳ ಅವರ್ಶಯಕಎಂದು ವಿಜಯನಗರಜಿಲ್ಲೆಯಿಂದ ಬಂದಅರಿವಿನ ಪಯಣದತಂಡದವರು, ಹಾಡು, ಕಥೆ, ನಾಟಕ ಮತ್ತು ಸಂವಾದದ ಮೂಲಕ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿಉಪಸ್ಥಿತಿ ಹಿಟ್ನಾಳ್ ಗ್ರಾಮ ಪಂಚಾಯಿತಿಯಅಧ್ಯಕ್ಷರು, ಉಪಾಧ್ಯಕ್ಷರು, ವಿಜಯನಗರಜಿಲ್ಲೆಯಅರಿವಿನ ಪಯಣದತಂಡದವರುಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!