ಜನಮನಸೊರೆಗೊಂಡ ಗಾಂಧೀ ಬೆಳಕು ಸಂಗೀತ ಕಾರ್ಯಕ್ರಮ

Get real time updates directly on you device, subscribe now.

ಕೊಪ್ಪಳ
ನಗರದ ಸಕಾರಿ ನೌಕರ ಭವನದಲ್ಲಿ ಜರುಗಿದ ಗಾಂಧೀ ಬೆಳಕು ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಶಿಕ್ಷಕರ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿತು.
ಉಪನ್ಯಾಸ ಕಾರ್ಯಕ್ರಮಕ್ಕೂ ಮುನ್ನ ಸಂಗೀತ ಕಾರ್ಯಕ್ರಮದಲ್ಲಿ ರಘುಪತಿ ರಾಘವ ಹಾಡನ್ನು ಬಾನ್ಸುರಿಯಲ್ಲಿ ಅಮರೇಶ ತಾವರಗೇರಾ ನುಡಿಸಿದರು. ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಮುಂದೆ ಶಹನಾಯಿ ನುಡಿಸಿದ, ಹಾಗೂ ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಅವರಿಂದ ಶಹನಾಯಿ ಪಡೆದ ಕರ್ನಾಟಕದ ಹೆಸರಾಂತ ಶಹನಾಯಿ ವಾದಕರಾದ ಪಂಡಿತ ಮಾರುತಿ ನಾವಲಗಿ ಅವರು ಕರೆದರೂ ಕೇಳದೆ ಹಾಡನ್ನು ಶಹನಾಯಿಯಲ್ಲಿ ನುಡಿಸಿ, ಕೊಪ್ಪಳದ ಪಂಡಿತ ಶಂಕರ ಬಿನ್ನಾಳ ಹಾರ್ಮೋನಿಯಂ, ತಬಲಾ ಕುಮಾರೇಶ ಬಿನ್ನಾಳ ಪ್ಯಾಡ್ ಪುಟ್ಟರಾಜ ಬಿನ್ನಾಳ ಅವರೊಂದಿಗೆ ನಡೆಸಿಕೊಟ್ಟ ಜುಗಲಬಂದಿ ಕಾರ್ಯಕ್ರಮ ಬಂದವರೆಲ್ಲರ ಮನಸೊರೆಗೊಂಡಿತು.
ಕೊಪ್ಪಳದಲ್ಲಿ ಸಾವಯವ ಕೃಷಿಕರಿಗೆ ಮಾರುಕಟ್ಟೆಯ ದೊರಕಿಸುವಲ್ಲಿ ಶ್ರಮಿಸಿದ, ತೋಟದಿಂದ ನೇರ ತಾಟಿಗೆ ಅಂತ ಕರೋನಾ ಕಾಲಘಟ್ಟದಲ್ಲಿ ಶುದ್ಧ ತರಕಾರಿಗಳನ್ನು ಮನೆನಮನೆಗೆ ತಲುಪಿಸಿದ್ದಾರೆ. ಸಾವಯವ ಕೃಷಿಯ ಕುರಿತು ಆಹಾ ಇಸ್ರೇಲಿ ಕೃಷಿ, ಥೈಲಾಂಡ ಕೃಷಿ, ಸಾವಯವ ಕೃಷಿ ಮತ್ತು ಹತ್ತು ಹೆಜ್ಜೆಗಳು ಪುಸ್ತಕ ಪ್ರಕಟಿಸಿದ ಪತ್ರಕರ್ತ, ಬರಹಗಾರರಾದ ಆನಂದತೀರ್ಥ ಪ್ಯಾಟಿ, ಕೊಪ್ಪಳದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನರೆಕಾಲಿಕ ನೌಕರರಾದ ರಂಗಪ್ಪ ಪ್ರತಿನಿತ್ಯವೂ ಅಳಿಲುಗಳಿಗೆ ಊಟ ಹಾಕುತ್ತಾರೆ. ರಜಾ ದಿನಗಳಲ್ಲೂ ಕೂಡ ರಂಗಪ್ಪ ತಪ್ಪದೇ ಬಂದು ಅಳಿಲುಗಳಿಗೆ ಊಟ ಹಾಖುತ್ತಾರೆ. ಅಳವಂಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾಗಿ ಬಡ್ತಿ ಹೊಂದಿ ಬಂದ ತಕ್ಷಣ ಶಾಲೆಯಲ್ಲಿ ಕುಡಿಯುವ ನೀರು ಇಲ್ಲದ್ದನ್ನು ಗಮನಿಸಿ, ತಮ್ಮ ತಂದೆಯವರ ಸ್ಮರಣಾರ್ಥ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿ ವಿದ್ಯಾರ್ಥಿನಿಯರಿಗೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಮಾಡಿದ ಯಲ್ಲಪ್ಪ ಬಂಡಿ, ಸುಮಾರು ಹತ್ತು ವರ್ಷಗಳ ಕಾಲ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿ, ಇದೀಗ ಕೃಷಿಯಲ್ಲಿ ಸಾವಯವ ಕೃಷಿ ಪದ್ಧತಿಯೊಂದಿಗೆ ಕರಷಿ ಮಾಡುತ್ತಿರುವ ದೇವರಾಜ ಮೇಟಿ ಸೇರಿದಂತೆ ನಾಲ್ಕು ಮಹನೀಯರಿಗೂ ಈ ವರ್ಷದ ಗಾಂಧೀ ಸಮ್ಮಾನ ಗೌರವ ಪುರಸ್ಕಾರಕ್ಕೆ ಭಾಜನರಾದರು.
ತದನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಗಾಂಧೀ ಮತ್ತು ಪ್ರಜಾಪ್ರಭುತ್ವ ಕುರಿತು ಡಾ.ಪ್ರಭುರಾಜ ನಾಯಕ ಉಪನ್ಯಾಸ ನೀಡಿದರು. ಆತ್ಮಸಾಕ್ಷಿ, ವ್ಯಕ್ತಿ, ಅಭಿವೃದ್ಧಿ, ಶಿಕ್ಷಣ, ಈ ಎಲ್ಲ ಅಂಶಗಳು ಗಾಂಧೀಜಿ ಸಿದ್ಧಾಂತದ ಪ್ರಜಾಪ್ರಭುತ್ವದಲ್ಲಿವೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹೊಳಿಬಸಯ್ಯ,ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಜುಮ್ಮನವರ, ಬೀರಪ್ಪ ಅಂಡಗಿ, ಪತ್ರಕರ್ತ ಪ್ರಮೋದ ಕುಲಕರ್ಣಿ, ಮುಸ್ತಫಾ ಕುದರಿಮೋತಿ, ಯೋಗಾ ನರಸಿಂಹ ಪಿ.ಕೆ, ಹಾಜರಿದ್ದರು ಗಾಂಧಿ ಸಮ್ಮಾನ ಗೌರವಕ್ಕೆ ಪಾತ್ರರಾದವರನ್ನು ನಾಗರಾಜನಾಯಕ ಡೊಳ್ಳಿನ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳದ ಗಾಂಧೀ ಬಳಗ, ಕಲರವ ಶಿಕ್ಷಕರ ಸೇವಾ ಬಳಗ, ಗಾಂಧೀ ವಿಚಾರ ವೇದಿಕೆ, ಕರ್ನಾಟಕ ಸರ್ವೋದಯ ಮಂಡಳ ಕೊಪ್ಪಳ ಘಟಕ, ಅಶೋಕ ಸರ್ಕಲ್ ನಾಟಕ ತಂಡ ಕೊಪ್ಪಳ ಹಾಗೂ ಮತ್ತಿತರ ಸಂಘಟನೆಗಳು ಹಾಜರಿದ್ದರು. ಅಧ್ಯಕ್ಷೀಯ ನುಡಿಗಳನ್ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಕಾರ್ಯಧ್ಯಕ್ಷರಾದ ಶಿವಪ್ಪ ಜೋಗಿ ಮಾಡಿದರು, ಪ್ರಾಸ್ತಾವಿಕವಾಗಿ ಬಸವರಾಜ ಸವಡಿ ಮಾತನಾಡಿದರೆ, ಮಲ್ಲಪ್ಪ ಗಯಡದಣ್ಣವರ ಸ್ವಾಗತಿಸಿದರು, ರಾಮಣ್ಣ ಶ್ಯಾವಿ ನಿರೂಪಿಸಿದರು, ಪ್ರಾಣೇಶ ಪೂಜಾರ ವಂದಿಸಿದರು.

 

Get real time updates directly on you device, subscribe now.

Comments are closed.

error: Content is protected !!