ಅ.5ರಂದು ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ
ಕೊಪ್ಪಳ : ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ ಅಕ್ಟೋಬರ್ 5 ರಂದು ಬೆಳಿಗ್ಗೆ 10ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಜರುಗಲಿದೆ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ಡಿ.ಎಚ್. ಪೂಜಾರ ಹೇಳಿದರು.
ಅವರು ಬುಧವಾರದಂದು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಗೌರವದಿಂದ ಬಾಳುವಷ್ಟು ಭೂಮಿ ಮತ್ತು ಘನತೆಯಿಂದ ಬದುಕುವಂತ ವಸತಿ ಪ್ರತಿಯೊಬ್ಬರ ಹಕ್ಕು 2018 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ , ದೊರೆಸ್ವಾಮಿ ನೇತೃತ್ವದಲ್ಲಿ ಬಡಜನರಿಗೆ ಭೂಮಿ ಮತ್ತು ವಸತಿ ಹಕ್ಕುನ್ನು ಖಾತ್ರಿ ಗೊಳಿಸಲು ಸಮಗ್ರ ಯೋಜನೆ ರೂಪಗೊಂಡಿತ್ತು,ಅದರ ಜಾರಿಗೆ ಉನ್ನತ ಮಟ್ಟದ ಸಮಿತಿಯು ಸಹ ರಚಿಸಲಾಗಿತ್ತು,ನಂತರ ವಿಧಾನಸಭೆ ಚುನಾವಣೆಗಳು ನಡೆದು ರಾಜ್ಯದ ರಾಜಕಾರಣ ಬದಲಾಯಿತು,ಬಡವರ ವಿರೋಧಿ ನಿಲುವು ತಾಳಿದ ಬಿಜೆಪಿ ಹಣವಂತರ ಪರವಾದ ತಿದ್ದುಪಡಿಗಳನ್ನು ಭೂ ಕಾಯ್ದೆ ತಂದಿತು ಹೊರತು ಬಡವರ ಹಕ್ಕನ್ನು ಮಾನ್ಯಗೊಳಿಸುವ ಯಾವ ಕೆಲಸವನ್ನು ಮಾಡಲಿಲ್ಲ ಎಂದರು.
ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ಕರಿಯಪ್ಪ ಗುಡಿಮನಿ ಮಾತನಾಡಿ ಬಿತ್ತಲು ಭೂಮಿಯ ಮಾತು ಆಗಿರಲಿ ಒಂದು ಗೂಡು ಕಟ್ಟಿಕೊಳ್ಳಲು ತುಂಡು ಜಾಗವು ಲಭ್ಯವಿಲ್ಲ,ದೇಶದ ಆರ್ಥಿಕತೆಯನ್ನು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಕೈಗೆ ಒಪ್ಪಿಸಿರುವ ಕೇಂದ್ರ ಸರ್ಕಾರ ಕೈಗಾರಿಕಾ ನೀತಿಯಿಂದಾಗಿ ದೇಶದಾದ್ಯಂತ ಕೋಟ್ಯಾಂತರ ರೈತರು ಇದ್ದ ಬಿದ್ದ ಭೂಮಿಯನ್ನು ಕಳೆದುಕೊಂಡಿದ್ದಾರೆ ,ರಾಜ್ಯದಲ್ಲಿ ಕೈಗಾರಿಕಾ ಹೆಸರಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಇದಕ್ಕೆ ರೈತರಿಂದಲೂ ಪ್ರತಿರೋಧಗಳು ಬೆಳೆಯುತ್ತಿವೆ ಎಂದರು.
ಬೆಂಗಳೂರಿನಲ್ಲಿ ನಡೆಯುವ ಈ ಸಮಾವೇಶಕ್ಕೆ ಕೊಪ್ಪಳ ಜಿಲ್ಲೆಯಿಂದ 150 ಜನ ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜ್ ನರೇಗಲ್ ,ಶೋಭಾ ,ಮುದುಕಪ್ಪ ಹೊಸಮನಿ ,ಹನುಮಂತಪ್ಪ ದೊಡ್ಡಮನಿ, ಮಂಜುನಾಥ್ ಆಗೋಲಿ ಉಪಸ್ಥಿತರಿದ್ದರು.
Comments are closed.