ಗಾಂಧೀ, ವಿಚಾರದ ಕಾಮನೂರು ಪಾದಯಾತ್ರೆ ಯಶಸ್ವಿ
ನಗರದ ಅಶೋಕ ವೃತ್ತದಿಂದ ಕಾಮನೂರ ಗ್ರಾಮಕ್ಕೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ನಸುಕಿನ ಜಾವ 05 : 40 ಕ್ಕೆ ಮಾಜಿ ಸಂಸದರಾದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ ತಹಶೀಲ್ದಾರ ವಿಠ್ಠಲ್ ಚೌಗಲಾ ಅಶೋಕ ವೃತ್ತದಲ್ಲಿ ರಘುಪತಿ ರಾಘವ ಭಜನ್ ನಂತರ,ಪಾದಯಾತ್ರೆಗಳಿಗೆ ಚಾಲನೆ ನೀಡಿದರು.
ಪಾದಯಾತ್ರೆ ಉದ್ದಕ್ಕೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೀ ಜೈ, ಶಾಂತಿ ಶಿಸ್ತು, ಲಾಲ್ ಬಹದ್ದೂರ ಶಾಸ್ತ್ರೀ ಜೀ ಕೀ ಜೈ ಅಂತ ಘೋಷಣೆ ಹಾಕುತ್ತ ಸಾಗಿದರು.
ಪಾದಯಾತ್ರೆಯಲ್ಲಿ ಬರಹಗಾರ ಆನಂದತೀರ್ಥ ಪ್ಯಾಟಿ,ಪ್ರಜಾವಾಣಿ ಜಿಲ್ಲಾ ವರದಿಗಾರರಾದ ಪ್ರಮೋದ,ನಾಗರಿಕ ದಿನಪತ್ರಿಕೆಯ ಸಂತೋಷ ದೇಶಪಾಂಡೆ, ಬಸವರಾಜ ಸವಡಿ,ಭರತ್ ಕಂದಕೂರ, ಶಂಕ್ರಯ್ಯ ಅಬ್ಬಿಗೇರಿಮಠ,ಸೋಮಲಿಂಗಪ್ಪ ಮೆಣಸಿನಕಾಯಿ, ಪ್ರಕಾಶಗೌಡ,ರಾಮಣ್ಣ ಶ್ಯಾವಿ, ಪ್ರಾಣೇಶ ಪೂಜಾರ, ನಾಗರಾಜನಾಯಕ ಡೊಳ್ಳಿನ, ಸುರೇಶ ಕಂಬಳಿ, ಹನುಮಂತಪ್ಪ ಕುರಿ, ಸೋಮಲಿಂಗಪ್ಪ ಬೆಣ್ಣೆ, ಯೋಗಾನರಸಿಂಹ ಪಿ.ಕೆ, ಮಂಜುನಾಥ ಪೂಜಾರ, ಪರಶುರಾಮ ಬಾವಿ,ಫಕೀರಪ್ಪ ಗುಳದಳ್ಳಿ, ಅಮರದೀಪ,ಶರಣಪ್ಪ ರೆಡ್ಡೇರ್, ಬೀರಪ್ಪ ಅಂಡಗಿ, ದೇವರಾಜ ಮೇಟಿ, ಮೌನೇಶ ಬಡಿಗೇರ, ಶಿವರಾಯಪ್ಪ , ಸೇರಿದಂತೆ ಸುಮಾರು 90 ಕ್ಕೂ ಹೆಚ್ಚು ಜನ ಕೊಪ್ಪಳದಿಂದ ಕಾಮನೂರ ಗ್ರಾಮಕ್ಕೆ ಪಾದಯಾತ್ರೆ ಮಾಡಿದರು.
ಪಾದಯಾತ್ರೆ ಮೂಲಕ ತೆರಳಿದ ಪಾದಯಾತ್ರಿಗಳು, ಕಾಮನೂರ ಗ್ರಾಮದ ಶಿಬಾರ ಕಟ್ಟೆ ತಲುಪುತ್ತಿದ್ದಂತೆ ಪ್ರತಿಯೊಬ್ಬ ಪಾದಯಾತ್ರೆಗೂ ನೂಲಿನ ಹಾರಹಾಕಿ, ಪಾದಯಾತ್ರೆಗಳ ಮೇಲೆ ಹೂವಿನ ಪಕಳೆಗಳನ್ನು ಹಾಕಿ ಭವ್ಯ ಸ್ವಾಗತ ಮಾಡಿದರು. ಕಾಮನೂರಿನ ಗ್ರಾಮಸ್ಥರು ಸ್ವಾಗತಿಸಿದರು. ಪಾದಯಾತ್ರೆ ತಂಡವನ್ನು ಇಡೀ ಗ್ರಾಮದ ಸುತ್ತಲೂ ಪಾದಯಾತ್ರೆಗಳಿಗೆ ಹೂವಿನ ಪಕಳೆಗಳನ್ನು ಹಾಕುತ್ತ ಹೆಜ್ಜೆ ಹಾಕಿದರು.
ಅಂತಿಮವಾಗಿ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಗಾಂಧೀ ಚಿಂತನಾ ಸಭೆಯಲ್ಲಿ ಪಾಲ್ಗೊಂಡರು. ಚಿಂತನಾ ಸಭೆಯಲ್ಲಿ ಇಡೀ ಗ್ರಾಮದ ಜನತೆ ಪಾಲ್ಗೊಂಡು ಯಶಸ್ವಿಮಾಡಿದರು.
ಗಾಂಧೀ ಮತ್ತು ಸುಸ್ಥಿರ ಬದುಕು ಕುರಿತು, ಗಾಂಧೀಜಿ ತತ್ವಗಳನ್ನು ತಮಗೆ ಅರಿವಿಲ್ಲದಂತೆ ಈವರೆಗೂ ಆಚರಿಸಿಕೊಂಡು ಬಂದಿದ್ದಾರೆ. ಈ ಕೆಲಸವನ್ನು ಮುಂದಿನ ತೆಲೆಮಾರಿಗೆ ವರ್ಗಾಯಿಸುವ ಹೊಣೆಗಾರಿಕೆ ಕಾಮನೂರ ಗ್ರಾಮದ ಯುವಕರ ಮೇಲಿದೆ ಎಂದು ಡಾ.ಪ್ರಭುರಾಜನಾಯಕ ಮಾತನಾಡಿದರು.
ಗ್ರಾಮದ ಗ್ರಾಮ ಪಂಚಾಯತ ಸದಸ್ಯರಾದ ಮಲ್ಲಪ್ಪ ತುಬಾಕಿ ಅವರು ಗಾಂಧೀ ಬಳಗದ ತಾವೆಲ್ಲಾ ಕೊಪ್ಪಳದಿಂದ ಕಾಮನೂರಿಗೆ ಬಂದು, ನಮಗೆಲ್ಲಾ ಗಾಂಧೀ ಚಿಂತನೆ, ವಿಚಾರಧಾರೆ ಕುರಿತು ಗಟ್ಟಿಗೊಳಿಸುವ ಕೆಲಸ ಮಾಡಿರುವಿರಿ. ಈ ಕೆಲಸವನ್ನು ಮುಂದಿನ ತೆಲೆಮಾರಿನವರೆಗೂ ತಲುಪಿಸುವ ಹೊಣೆ ನಮ್ಮೂರಿನ ನಮ್ಮ ಗ್ರಾಮದ ಪ್ರತಿಯೊಬ್ಬರದು. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಸಾವಯವ, ಸುಸ್ಥಿರ, ನೈಸರ್ಗಿಕ, ಸಮಗ್ರ, ಗೋಪಾಲಕರು, ಕುರಿಸಾಕಾಣಿಕೆ ಹಾಗೂ ಈ ವರೆಗೂ ಕಾಮನೂರ ಗ್ರಾಮವನ್ನು ದುಶ್ಚಟ ಮುಕ್ತ ಗ್ರಾಮವನ್ನಾಗಿಸಲು ಶ್ರಮಿಸಿದ ಗ್ರಾಮದ ಹಿರಿಯರಿಗೆ
ಗಾಂಧೀ ಬಳಗದ ವತಿಯಿಂದ ಗೌರವಿಸಲಾಯಿತು.
ಪ್ರಾಸ್ತಾವಿಕ ನುಡಿಗಳನ್ನು ಬಸವರಾಜ ಸವಡಿ,
ಆನಂದತೀರ್ಥ ಪ್ಯಾಟಿ, ನಾಗರಾಜ ಜುಮ್ಮನವರ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಕಾಮನೂರು ಗ್ರಾಮಕ್ಕೆ ಆಗಮಿಸಿ, ಕೆಲಹೊತ್ತು ಗ್ರಾಮದ ಜನತೆಯೊಂದಿಗೆ ಇದ್ದು, ಪಾದಯಾತ್ರೆಗಳೊಂದಿಗೆ ಗ್ರಾಮದಲ್ಲಿ ಸಂಚರಿಸಿ ಹೋದರು.
ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ
ದೂರವಾಣಿ ಮೂಲಕ ಮಾತನಾಡಿ, ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ದತ್ತು ಗ್ರಾಮವನ್ನಾಗಿ ಕಾಮನೂರನ್ನು ಆಯ್ಕೆಮಾಡಲಾಗಿದೆ. ದುಶ್ಚಟ ಮುಕ್ತ ಕಾಮನೂರಿನಿಂತ ಗ್ರಾಮಗಳ ಸಂಖ್ಯೆ ಹೆಚ್ಚಾಗಲಿ ಎಂದು ಶುಭಹಾರೈಸಿದರು.
ಕಾಮನೂರ ಗ್ರಾಮದ ಯುವಕ, ಯುವತಿ, ಹಿರಿಯರು, ಹಾಗೂ ಮಕ್ಕಳು ಸೇರಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರ ಕಲಾಸಂಘ ಕೊಪ್ಪಳ, ಕರ್ನಾಟಕ ಸರ್ವೋದಯ ಮಂಡಲ ಕೊಪ್ಪಳ, ಕಲರವ ಶಿಕ್ಷಕರ ಸೇವಾ ಬಳಗ, ಗಾಂಧೀ ವಿಚಾರ ವೇದಿಕೆ, ಪತಂಜಲಿ ಯೋಗ ಸಮಿತಿ, ಅಶೋಕ ಸರ್ಕಲ್ ನಾಟಕ ತಂಡ ಕೊಪ್ಪಳ ಹಾಗೂ ವಿವಿಧ ಸಂಘಟನೆಗಳು ಹಾಜರಿದ್ದರು.