ಗಂಗಾವತಿ: ತಾಲೂಕು ಕಾನೂನು ಸೇವೆಗಳ ಸಮಿತಿ, ಗಂಗಾವತಿ ವಕೀಲರು ಸಂಘ, ಕಾರ್ಮಿಕ ಇಲಾಖೆ ಹಾಗು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಾಗಾರವನ್ನು ಅಕ್ಟೋಬರ್ ೦೫ ಬೆಳಗ್ಗೆ ೧೦:೦೦ಕ್ಕೆ ನಗರದ ಸಾಹಿತ್ಯ ಭನವದಲ್ಲಿ ಆಯೋಜಿಸಲಾಗಿದ್ದು ಎಲ್ಲಾ ವಿಧದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಾಲೂಕು ಕಾರ್ಮಿಕ ನಿರೀಕ್ಷಿಕರಾದ ಎಂ.ಅಶೋಕ ಕೋರಿದ್ದಾರೆ. ಹೊರಗುತ್ತಿಗೆ ಕಾರ್ಮಿಕರು, ಗುತ್ತಿಗೆದಾರರು, ಸಂಘಟಿತ, ಅಸಂಘಟಿತ ಕಾರ್ಮಿಕರು ಪದಾಧಿಕಾರಿಗಳು, ಕಾರ್ಮಿಕರು; ಕಾರ್ಮಿಕ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಸಮಗ್ರ ಮಾಹಿತಿ ತಿಳಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ತಾಲೂಕು ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಕಾರ್ಯಗಾರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾ.ಕಾ.ಸೇ.ಸಮಿತಿ ಅಧ್ಯಕ್ಷರು ರಮೇಶ್ ಗಾಣಿಗೇರಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗು ತಾ.ಕಾ.ಸೇ.ಸಮಿತಿ ಕಾರ್ಯದರ್ಶಿಗಳಾದ ನಾಗೇಶ್ ಪಾಜಟೀಲ್ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಕೊಪ್ಪಳ ವಿಭಾಗ ಕಾರ್ಮಿಕ ಅಧಿಕಾರಿಗಳಾದ ಸುಧಾ ಚಿ. ಗರಗ ಇವರು ವಹಿಲಿಸದ್ದಾರೆ.ಮುಖ್ಯ ಅತಿಥಿಗಳಾಗಿ ತಾಲೂಕಾ ವಕೀಲರು ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಸಾಲಿ, ಹೊಸಪೇಟೆ ೧ನೇ ವೃತ್ತ ಕಾರ್ಮಿಕ ನಿರೀಕ್ಷಕ ಗೋಪಾಲ ಬ.ಧೂಪದ, ಕೊಪ್ಪಳ ವೃತ್ತ ಕಾರ್ಮಿಕ ನಿರೀಕ್ಷಕ ಶಿವ ಶಂಕರ ತಳವಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಬಸವರಾಜ್ ಹಿರೇಗೌಡರು ಉಪಸ್ಥಿತರಿರಲಿದ್ದಾರೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ
Comments are closed.