ಭಾರತ ನೆಟ್‌ಬಾಲ್ ಫೆಡರೇಷನ್‌ಗೆ ಸುಮನ್ ಅಧ್ಯಕ್ಷೆ
ಕೊಪ್ಪಳ: ಭಾರತ ನೆಟ್ ಬಾಲ್ ಫೆಡರೇಷನ್‌ಗೆ ನಡೆದ ಉಪಚುನಾವಣೆಯಲ್ಲಿ ದೆಹಲಿಯ ಅಂತರಾಷ್ಟ್ರೀಯ ನೆಟ್‌ಬಾಲ್ ಕ್ರೀಡಾಪಟು ಸುಮನ್ ಕೌಶಿಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನೆಟ್‌ಬಾಲ್ ಫೆಡರೇಷನ್ ಪ್ರಕಟಣೆ ನೀಡಿದೆ.
ಬೆಂಗಳೂನಿನ ಕೋರಮಂಗಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ರಾಷ್ಟ್ರೀಯ ಮಿಕ್ಸೆಡ್ ಸೀನಿಯರ್ ನೆಟ್‌ಬಾಲ್ ಚಾಂಪಿಯನ್‌ಶಿಪ್ ಪೂರ್ವದಲ್ಲಿ ಕರ್ನಾಟಕ ಓಲಂಪಿಕ್ ಭವನದ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸಮಿತಿ ಸದಸ್ಯರ ವಿಶೇಷ ಸಭೆ ಮತ್ತು ಉಪಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಈಶ್ವರಚಂದ ಗೊಯೆಲ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಎಂದು ರಾಷ್ಟ್ರೀಯ ಉಪಾಧ್ಯಕ್ಷ ಗಿರೀಶ ಸಿ. ತಿಳಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರ ಅವಧಿಯಲ್ಲಿ ಫೆಡರೇಷನ್ ದೊಡ್ಡಮಟ್ಟದಲ್ಲಿ ಬೆಳೆಯಲಿ ಎಂದು ಸಂಸ್ಥೆಯ ರಾಜ್ಯ ಖಜಾಂಚಿ ವಿಶ್ವನಾಥ ಎ. ಸಿ., ರಾಜ್ಯ ಸಂಸ್ಥೆಯ ದಿಲೀಪ್ ಆರ್., ಸರವಣ ಆರ್., ಮಂಜುನಾಥ ಹೆಚ್.ಎಂ., ಡಾ. ಶಶಿಕುಮಾರ್, ಮಾನಸ ಎಲ್.ಜಿ., ರಾಮಕೃಷ್ಣ ಎನ್., ಕೊಪ್ಪಳ ಸಂಸ್ಥೆಯ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಟೇಲರ್, ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಉಪಾಧ್ಯಕ್ಷ ಮೌನೇಶ ವಡ್ಡಟ್ಟಿ ಶುಭ ಹಾರೈಸಿದ್ದು, ಶೀಘ್ರ ಕೊಪ್ಪಳ ಜಿಲ್ಲಾ ಮತ್ತು ಕಲಬುರಗಿ ವಿಭಾಗ ಮಟ್ಟದ ನೆಟ್‌ಬಾಲ್ ತರಬೇತಿ ಮತ್ತು ಚಾಂಪಿಯನ್‌ಶಿಪ್ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.