ಕೊಪ್ಪಳ ಸಖಿ ಒನ್ ಸ್ಟಾಪ್ ಸೆಂಟರ್ ಗೆ ನಿರ್ದೇಶನಾಲಯದ ನಿರ್ದೇಶಕ ಸಿದ್ದೇಶ್ವರ ಭೇಟಿ

0

Get real time updates directly on you device, subscribe now.


ಸಖ ಘಟಕದ ಕಾರ್ಯ ಶ್ಲಾಘನೀಯ.
ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಸಿದ್ದೇಶ್ವರ ರವರು ಇಂದು ಸಖ ಒನ್ ಸ್ಟಾಪ್ ಸೆಂಟರ್ ಘಟಕಕ್ಕೆ ಭೇಟಿ ನೀಡಿ ಪ್ರಕರಣಗಳ ಕಡತಗಳನ್ನು ಪರಿಶೀಲಿಸಿ ವೈದ್ಯಕೀಯ ನೆರವು ಕಾನೂನು ನೆರವು ಮನೋಸ್ಥೈರದ ಆಪ್ತ ಸಮಾಲೋಚನೆ ನೆರವು ತಾತ್ಕಾಲಿಕ ವಸತಿ ಸೌಕರ್ಯದ ನೆರವನ್ನು ಉತ್ತಮವಾಗಿ ಒದಗಿಸುವಂತೆ ಸಲಹೆ ನೀಡಿದರು. ಸಖಿ ಘಟಕದಲ್ಲಿ 2019 ರಿಂದ ಸಪ್ಟೆಂಬರ್ 30 2012 ಇಲ್ಲಿಯವರೆಗೆ ಒಟ್ಟು 1,287 ಪ್ರಕರಣಗಳು ದಾಖಲಾಗಿದ್ದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪ್ರಕರಣಗಳು 95 ಕೌಟುಂಬಿಕ ಕಲಹಕ್ಕೆ ದಾಖಲಾದ ಪ್ರಕರಣಗಳು 685 ಮಕ್ಕಳ ಮೇಲಿನ ಲೈಂಗಿಕ ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣಗಳು 28 ನೀರ್ಗತಿಕ ಮಹಿಳೆಯರ ಸಂರಕ್ಷಣೆ ಕಾನೂನು ನೆರವು ವೈದ್ಯಕೀಯ ನೆರವು ತಾತ್ಕಾಲಿಕ ವಸತಿ ನೆರವು ಪ್ರಕರಣಗಳು 287 ದಾಖಲಾಗಿದ್ದು ಭಾದಿತರಿಗೆ ಉತ್ತಮವಾದ ಸಹಕಾರ , ಮತ್ತು ಪುನರ್ವಸತಿಯ ಸೌಲಭ್ಯಗಳ ನೆರವನ್ನು ಒದಗಿಸಲಾಗುತ್ತಿದೆಂದು ಘಟಕ ಆಡಳಿತಾಧಿಕಾರಿಗಳು ಮಾಹಿತಿ ನೀಡಿದರು.

ಅಂತರ್ ಜಿಲ್ಲೆಯ ಪ್ರಕರಣಗಳು ಹಾಗೂ ಹೊರ ರಾಜ್ಯಗಳಾದ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ , ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಸಂಬಂಧಿಸಿದ ನಿರ್ಗತಿಕ ಮಹಿಳೆಯರಿಗೆ ಸೂಕ್ತ ವೈದ್ಯಕೀಯ ನೆರವು ಆಪ್ತ ಸಮಾಲೋಚನೆಯೊಂದಿಗೆ ತಾತ್ಕಾಲಿ ವಸತಿ ಸೌಕರ್ಯವನ್ನು ಕರ್ನಾಟಕ ರಾಜ್ಯ ವಸತಿ ನಿಲಯಗಳಲ್ಲಿ ಕಲ್ಪಿಸುವುದರ ಜೊತೆಗೆ ಪುನಃ ತಮ್ಮ ಕುಟುಂಬಗಳಿಗೆ ಪುನರ್ಸತಿಯನ್ನು ಕಲ್ಪಿಸುವಲ್ಲಿ ಸಖ ಘಟಕವು ಸಹಕಾರಿಯಾಗಿದೆಂದು ಉತ್ತಮವಾದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆಂದು ನಿರ್ದೇಶಕರಾದ ಶ್ರೀ ಸಿದ್ದೇಶ್ವರವರು ಪ್ರಶಂಸಿತ್ತಿರುತ್ತಾರೆ ಸಖ ಒನ್ ಸ್ಟಾಪ್ ಸೆಂಟರ್ ಘಟಕದ ಶ್ರೀಮತಿ ಯಮನ ಮಾಡುವಂತ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹೊಗಳಿದರು.
ಈ ಸಂದರ್ಭದಲ್ಲಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿಗಳಾದ ಗಂಗಪ್ಪ. ಜಿಲ್ಲಾ ಮಹಿಳಾ ಅಧಿಕಾರಿ ಶ್ರೀಮತಿ ಅನ್ನಪೂರ್ಣ. ಇಲಾಖೆಯ ಅಧ್ಯಕ್ಷರಾದ ಕೃಷ್ಣಸರ್. ಮತ್ತು ಕೊಪ್ಪಳ.ಕಾರಟಗಿ. ಕುಷ್ಟಗಿ. ಕುಕನೂರು.ಯಲಬುರ್ಗಾ, ಎಲ್ಲಾ ತಾಲೂಕಿನ ಅಭಿವೃದ್ಧಿ ಯೋಜನೆ ಅಧಿಕಾರಿಗಳು. ಸಖ ಒನ್ ಸ್ಟಾಪ್ ಸೆಂಟರ್ ಆಡಳಿತ ಅಧಿಕಾರಿಯಾದ ಶ್ರೀಮತಿ ಯಮುನಾ. ಸಿಬ್ಬಂದಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: