ಸೌಹಾರ್ದ ಸಹಕಾರಿ ಕಾರ್ಯಾಗಾರ -ಕನ್ನಡದಲ್ಲಿ ಮಾತಾಡಿ ಸೈಬರ್ ಕ್ರೈಮ್ ದಿಂದ ತಪ್ಪಿಸಿಕೊಳ್ಳಿ – ಡಿ ವೈ ಎಸ್ ಪಿ ಯಶವಂತಕುಮಾರ್ 

0

Get real time updates directly on you device, subscribe now.

 ಕೊಪ್ಪಳ ನಗರದ ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ನೆಡೆದ ಸಹಕಾರಿಗಳ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಗಣ್ಯರು.

ಕೊಪ್ಪಳ : ಅಂತರ್ಜಾಲದಲ್ಲಿ ಅತಿ ಹೆಚ್ಚು ಮೋಸ ವಂಚನೆ ಒಳಗಾಗುತ್ತಿರುವವರು ಅಕ್ಷರಸ್ತರೇ ಹೊರತು ಅನಕ್ಷರಸ್ತರಲ್ಲ ಹೀಗಾಗಿ ಸೈಬರ್ ಕ್ರೈಮದಿಂದ ತಪ್ಪಿಸಿಕೊಳ್ಳಬೇಕಾದರೆ ಕನ್ನಡದಲ್ಲಿ ಮಾತಾಡಿ ಎಂದು ಡಿ ವೈ ಎಸ್ ಪಿ ಯಶವಂತ ಕುಮಾರ್ ಹೇಳಿದರು.

ಅವರು  ಸಂಯುಕ್ತ ಸಹಕಾರಿಯ ಕಲಬುರಗಿ ಪ್ರಾಂತೀಯ ಕಛೇರಿಯ ವತಿಯಿಂದ ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳಮುಖ್ಯ ಕಾರ್ಯನಿರ್ವಾಹಕರಿಗೆ   ಕೊಪ್ಪಳ ನಗರದ ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ನೆಡೆದ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ ಕೊಪ್ಪಳದಲ್ಲಿ 1500 ಸೈಬರ್ ಕ್ರೈಮ್ ಗಳು ನೋಂದಣಿಯಾಗಿವೆ.  ಮೊಬೈಲ್ ಬ್ಯಾಂಕಿಂಗ್ , ಲೋನ್ ಆಫರ್, ಟೂರ್ ಪ್ಯಾಕೆಜ್ ಆಪರ್, ಷೇರ್ ಮಾರ್ಕೆಟಿಂಗ್, ನಕಲಿ ಅಪ್ಲಿಕೇಶನ್, ನಕಲಿ ಆಪ್, ಇನ್ನಿತರ ಸೋಶಿಯಲ್ ಮೀಡಿಯಾಗಳನ್ನ ಸರಿಯಾದ ಮಾಹಿತಿ  ಇಲ್ಲದೆ ಬಳಕೆ ಮಾಡಿದರೇ  ವಂಚನೆಗೆ ಒಳಗೆ ಆಗುತ್ತವೆ. ಹೀಗಾಗಿ ಅತ್ಯಂತ ಜಾಗರುಕತೆಯಿಂದ ಇರಬೇಕು ಎಂದು ತಿಳಿಸಿದರು.  ವಂಚನೆಗೆ ಒಳಗದವರು  ಸೈಬರ್ ಕ್ರೈಮ್ ಸಹಾಯವಾಣಿ 1930 ಗೆ ಕರೆ ಮಾಡಿ ನಿಮ್ಮ ದೂರನ್ನು ನೋಂದಣಿ ಮಾಡಿಕೊಂಡರೇ ಸಾಧ್ಯವಾದಷ್ಟು ಪರಿಹಾರ ಸಿಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ರಾಜ್ಯ ನಿರ್ದೇಶಕ ಶ್ರೀಧರ್ ಕೆಸರಟ್ಟಿ ವಹಿಸಿ ಸೌಹಾರ್ದ ಸಹಕಾರಿ ಚಳುವಳಿ ಕುರಿತು ಮಾತನಾಡಿದರು.

ನಂತರ ಡಿಜಿಟಲ್ ಬ್ಯಾಂಕಿಂಗ್ ಕುರಿತು ಉಪನ್ಯಾಸಕ ಡಾ.ಸಾತ್ವಿಕ್ ಅವರು ಮಾಹಿತಿ ನೀಡಿದರೇ  ಸಾಲ ವಸೂಲಾತಿ ಆಮಲ್ಜಾರಿ ಕುರಿತು ದಾವ ಪಂಚಾಯತ ಅಧಿಕಾರಿಗಳಾದ ಚಂದ್ರಶೇಖರಯ್ಯ  ಅವರು ಉಪನ್ಯಾಸ ನೀಡಿದರು, ಪ್ರತಿ ವರ್ಷ ವಾರ್ಷಿಕ ಸಾಮಾನ್ಯ ಸಭೆಯ ನಂತರ ಕೈಗೊಳ್ಳಬಹುದಾದ ಕಾರ್ಯಗಳ ಕುರಿತು ಪ್ರಾಂತಿಯ ಅಧಿಕಾರಿ ಸೂರ್ಯಕಾಂತ್ ರಾಕ್ಲೆ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಕಡ್ಡಿಪುಡಿ, ಉಪಾಧ್ಯಕ್ಷ  ಮಹಾಲಿಂಗಪ್ಪ ದೋಟಿಹಾಳ, ನಿರ್ದೇಶಕರುಗಳಾದ  ಶಂಕರಗೌಡ ಹಿರೇಗೌಡ, ಮುದ್ದಪ್ಪ ಬೇವಿನಹಳ್ಳಿ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ನಾಗರಾಜ್ ನಾಗನೂರ್, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ್ ಸೇರಿದಂತೆ ಕೊಪ್ಪಳ ಜಿಲ್ಲೆಯ  ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರ ಮತ್ತು ತಾಲೂಕಿನ  ಸೌಹಾರ್ದ ಸಹಕಾರಿಗಳ  ನೂರಾರು ಮುಖ್ಯಕಾರ್ಯನಿರ್ವಾಹಕರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

 

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: