Sign in
Sign in
Recover your password.
A password will be e-mailed to you.
ಕೊಪ್ಪಳ : ನಗರದ ಗೌರಿ ಅಂಗಳದ ಉರೂಬ್ ಮಸೀದಿ ಪಕ್ಕದಲ್ಲಿರುವ ಪ್ರಸಿದ್ಧ ಹಿರಿಯ ಉರ್ದು ಕವಿ ಮತ್ತು ಶಾಯರ್ ಮೊಹಮ್ಮದ್ ನಯ್ಯರ್ ಪಾಷಾ ಖಲೀಲಿ 83 ವಯಸ್ಸಿನ ಅವರು ಸೆಪ್ಟೆಂಬರ್ 30 ರಂದು ಸೋಮವಾರ ಮಧ್ಯಾಹ್ನ 2:30 ಸುಮಾರಿಗೆ ನಿಧನ ಹೊಂದಿದರು.
ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ನಗರದ ಗೌರಿ ಅಂಗಳದ ಉರೂಬ್ ಮಸೀದಿ ಪಕ್ಕದಲ್ಲಿರುವ ಅವರ ನಿವಾಸದಿಂದ ಹೊರಟು ಮರ್ದಾನ್ ಎ ಗೈಬ್ ದರ್ಗಾದ ಮುಂಭಾಗದಲ್ಲಿರುವ ಮೋಥಿ ಕೆರೆ (ಮೋಥಿ ತಲಾಬ್) ಬಳಿಯ ಕಮಾನ್ ಹತ್ತಿರದ ಖಬ್ರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಘಟಕ, ಹೋರಾಟಗಾರ ಎಸ್.ಎ.ಗಫಾರ್ , ಕುಟುಂಬದ ಹಿರಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತರಿಗೆ ಮೊಹಮ್ಮದ್ ಇಬ್ರಾಹಿಮ್ ಖಲೀಲಿ, ಮೌಲಾನಾ ಮೊಹಮ್ಮದ್ ಮೋಯೀನ್ ಖಲೀಲಿ ಕಾಮಿಲ್ ಜಾಮಿಯಾ ನಿಜಾಮಿಯಾ, ಕಲಬುರಗಿ ಯಿಂದ ಹೊರ ಬರುತ್ತಿರುವ ಜುನುಬಿ ಹಿಂದ್ ಉರ್ದು ವಾರ ಪತ್ರಿಕೆ ಸಂಪಾದಕ ಮೌಲಾನಾ ಮೊಹಮ್ಮದ್ ಮೋಹಸೀನ್ ಖಲೀಲಿ ಖಾದ್ರಿ ಈ ಮೂವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ.
Get real time updates directly on you device, subscribe now.
Comments are closed.