ವಿದ್ಯಾರ್ಥಿ ಯುವಕರ ಆದರ್ಶ ಹೋರಾಟದ ಸ್ಪೂರ್ತಿ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರ 117 ನೇ ಜನ್ಮದಿನಾಚರಣೆ

0

Get real time updates directly on you device, subscribe now.

ಎಐಡಿಎಸ್ಓ, ಎಐಡಿವೈಓ ಮತ್ತು ಎಐಎಂಎಸ್ಎಸ್ ಸಂಘಟನೆಗಳಿಂದ ಕೊಪ್ಪಳದ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ವಿವಿದೆಡೆ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಸಂಚಾಲಕರ ಗಂಗರಾಜ ಅಳ್ಳಳ್ಳಿ ಅವರು ಸ್ವಾತಂತ್ರ್ಯ ಸಂಗ್ರಾಮದ ಧೀರ ಹುತಾತ್ಮರಾದಂತಹ ಭಗತ್ ಸಿಂಗ್ ರವರು ದೇಶದ ಸ್ವಾತಂತ್ರ್ಯಕ್ಕಾಗಿ ಕೇವಲ 23ನೇ ವಯಸ್ಸಿನಲ್ಲಿ ಗಲ್ಲುಗಂಬಕ್ಕೇರಿದರು. ಭಗತ್ ಸಿಂಗ್ ರವರು ಭಾರತದ ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟವಾದಂತ ಪರಿಕಲ್ಪನೆಯನ್ನು ಹೊಂದಿದ್ದರು. ಎಚ್ಎಸ್ಆರ್ ಎ ಎನ್ನುವ ಕ್ರಾಂತಿಕಾರಿ ಸಂಘಟನೆಯ ಮೂಲಕ ದೇಶದಲ್ಲಿ ಒಂದು ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಬೇಕೆಂಬುದೇ ಅವರ ಮಹಾನ್ ಧ್ಯೇಯ ಅವರದಾಗಿತ್ತು. ಸಮಾಜವಾದಿ ಭಾರತವೆಂದರೆ ಅದು ಯಾವುದೇ ಅಸಮಾನತೆ ಇಲ್ಲದ ಶೋಷಣೆ ಇಲ್ಲದ, ಯಾವ ಕಂದನೂ ಹಸುವಿನಿಂದ ಬಳಲದಂತಹ, ಯಾವ ಹೆಣ್ಣು ಕೂಡ ಅಭದ್ರತೆಯಿಂದ ರೋಧಿಸಿದಂತಹ ಸಮಾಜವನ್ನು ಕಟ್ಟುವ ಬಯಕೆ ಅವರದಾಗಿತ್ತು. ಆದರೆ ಇಂದು ನಮ್ಮ ದೇಶದಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ, ರೈತ ಕಾರ್ಮಿಕರ ಆತ್ಮಹತ್ಯೆಗಳು ಆಗುತ್ತಿವೆ, ಈಗಲೂ ಕೂಡ ಜನ ಜೋಪಡೆಯಲ್ಲಿ ಬದುಕುವಂತ ವ್ಯವಸ್ಥೆಯನ್ನು ನಾವು ಕಾಣುತ್ತಿದ್ದೇವೆ. ಇದನ್ನು ತೊಲಗಿಸಿ ಭಗತ್ ಸಿಂಗರ ಸಮಾಜವನ್ನು ಕಟ್ಟುವ ಹೊಣೆ ವಿದ್ಯಾರ್ಥಿ ಯುವಜನ ಮತ್ತು ಮಹಿಳೆಯರ ಮೇಲೆ ಇದೆ ಎಂದು ಹೇಳಿದರು.
ನಂತರ ಮಾತನಾಡಿದ ಎಐಎಂಎಸ್ಎಸ್ ಸಂಘಟನೆಯ ಮುಖಂಡರಾದ ಮಂಜುಳಾ ಮಜ್ಜಿಗೆ ಅವರು ಸ್ವತಂತ್ರ ಹೋರಾಟದ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿ ಯುವಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಕೆಚ್ಚೆದೆಯ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿದ್ದರು. ಆದರೆ ಇಂದು ಮೌಲ್ಯಗಳು ಸಾಂಸ್ಕೃತಿಕ ವಿಚಾರಗಳು ಖುಷಿಯುತ್ತಿವೆ ಎಂದು ವಿಷಾದಿಸಿದರು. ಪ್ರಸ್ತುತವಾಗಿ ನಮಗೆ ಭಗತ್ ಸಿಂಗ್ ನೇತಾಜಿ ಅಂತ ಮಹಾನ್ ಕ್ರಾಂತಿಕಾರಿಗಳ ವಿಚಾರಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಹಾಗೆಯೇ ಎ ಐ ಡಿ ವೈ ಓ ನ ಜಿಲ್ಲಾ ಸಂಘಟನಾಕಾರರಾದ
ದೇವರಾಜ್ ಹೊಸಮನಿ ಮಾತನಾಡಿ ಇಂದು ಯುವಕರಿಗೆ ಆದರ್ಶವಾಗಿರುವಾಗ ಬೇಕಾಗಿರುವುದು ಯಾವುದೋ ಸಿನಿಮಾ ನಟರಲ್ಲ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಭಗತ್ ಸಿಂಗ್ ನೇತಾಜಿ ಅಂತ ಹಲವಾರು ಮಹಾನ್ ಕ್ರಾಂತಿಕಾರಿಗಳು ನಮಗೆ ಆದರ್ಶವಾಗಬೇಕೆಂದು ಯುವಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಕಾರ್ಯಕರ್ತರಾದ ವೆಂಕಟೇಶ್ ಎಐಎಂಎಸ್ಎಸ್ ಮಹಿಳಾ ಸಂಘಟನೆಯ ಸದಸ್ಯರಾದ ಹುಸೇನ್ ಬೀ ಸೇರಿದಂತೆ ವಿವಿಧ ವಿದ್ಯಾರ್ಥಿ ಯುವಕರು ಭಾಗವಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: