ಉಪ ಕಾನೂನು ಅಭಿರಕ್ಷಕರ, ಸಹಾಯಕ ಕಾನೂನು ಅಭಿರಕ್ಷಕರ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನ

0

Get real time updates directly on you device, subscribe now.

 ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ಆದೇಶದನ್ವಯ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಅಭಿರಕ್ಷಕರ ಕಚೇರಿಯಲ್ಲಿ ಉಪ ಕಾನೂನು ಅಭಿರಕ್ಷಕರ 2 ಹÅದ್ದೆಗಳು ಹಾಗೂ ಸಹಾಯಕ ಕಾನೂನು ಅಭಿರಕ್ಷಕರು 5 ಹÅದ್ದೆಗಳಿಗೆ 01 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ತುಂಬಲು ಅರ್ಜಿ ಆಹ್ವಾನಿಸಲಾಗಿದೆ.
ಕಚೇರಿ ಉಪ ಕಾನೂನು ಅಭಿರಕ್ಷಕರು ಹÅದ್ದೆಗೆ 07 ವರ್ಷಕ್ಕೆ ಕಡಿಮೆ ಇಲ್ಲದ ಕ್ರಿಮಿನಲ್ ಲಾ ಅನುಭವ ಹೆÇಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸತಕ್ಕದ್ದು ಹಾಗೂ ಸಹಾಯಕ ಕಾನೂನು ಅಭಿರಕ್ಷಕರು ಹÅದ್ದೆಗೆ 03 ವರ್ಷಕ್ಕೂ ಕಡಿಮೆ ಇಲ್ಲದ ಕ್ರಿಮಿನಲ್ ಲಾ ಅನುಭವ ಹೆÇಂದಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಅಕ್ಟೋಬರ್ 07ರೊಳಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಕೊಪ್ಪಳದಲ್ಲಿ ಖುದ್ದಾಗಿ ಬಂದು ಸಲ್ಲಿಸತಕ್ಕದ್ದು ಹಾಗೂ ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಸಂಪರ್ಕಿಸಬೇಕೆAದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಚೇರಿ ಸಹಾಯಕ, ಜವಾನ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
): ಗೌರವಾನ್ವಿತ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ಆದೇಶದನ್ವಯ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಅಭಿರಕ್ಷಕರ ಕಚೇರಿಯಲ್ಲಿ 2 ಕಚೇರಿ ಸಹಾಯಕ ಗುಮಾಸ್ತ ಹÅದ್ದೆಗಳಿಗೆ ಹಾಗೂ 2 ಜವಾನ ಹÅದ್ದೆಗಳಿಗೆ 06 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ತುಂಬಲು ಅರ್ಜಿ ಆಹ್ವಾನಿಸಲಾಗಿದೆ.
ಕಚೇರಿ ಸಹಾಯಕ/ಗುಮಾಸ್ತ ಹÅದ್ದೆಗೆ ಮಾನ್ಯಗೊಂಡAತಹ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ ಹಾಗೂ ಕಂಪ್ಯೂಟರ್ ಜ್ಞಾನ ಹೆÇಂದಿರುವ ಆಸಕ್ತ ಯೋಗ್ಯ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸತಕ್ಕದ್ದು ಹಾಗೂ ಜವಾನ ಹÅದ್ದೆಗೆ ಸರ್ಕಾರದಿಂದ ಮಾನ್ಯಗೊಂಡAತಹ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅಕ್ಟೋಬರ್ 7 ಕೊನೆಯ ದಿನಾಂಕ ಆಗಿರುತ್ತದೆ. ಅರ್ಜಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಕೊಪ್ಪಳದಲ್ಲಿ ಖುದ್ದಾಗಿ ಬಂದು ಸಲ್ಲಿಸತಕ್ಕದ್ದು ಹಾಗೂ ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: