ಪ.ಪಂ. ಕನಕಗಿರಿ: ಮಹಿಳಾ ಸ್ವ-ಸಹಾಯ ಸಂಘಗಳಿAದ ಅರ್ಜಿ ಆಹ್ವಾನ

Get real time updates directly on you device, subscribe now.

: ಕನಕಗಿರಿ ಪಟ್ಟಣ ಪಂಚಾಯತ ವ್ಯಾಪ್ತಿಯ ಡೇ-ನಲ್ಮ್ ಅಭಿಯಾನದಡಿ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ ಸಮರ್ಪಕ ವಸುಲಾತಿಗಾಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಮಹಿಳಾ ಸ್ವ-ಸಹಾಯ ಸಂಘಗಳನ್ನು ತೊಡಗಿಸಿಕೊಂಡು ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ವಸುಲಾತಿ ಮಾಡುವುದಕ್ಕಾಗಿ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳಿAದ ಅರ್ಜಿ ಆಹ್ವಾನಿಸಲಾಗಿದೆ.
ಕನಕಗಿರಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನೀರಿನ ಬಳಕೆಯ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ಪ್ರಸಕ್ತ ವಾರ್ಷಿಕ ಸಹಿತ ವಸೂಲಿ ಮಾಡುವುದು ಹಾಗೂ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ವಾರ್ಷಿಕ ಬೇಡಿಕೆಗೆ ಅನುಗುಣವಾಗಿ ಸಮರ್ಪಕವಾಗಿ ವಸೂಲಿ ಮಾಡಲು ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆದು ವಸೂಲಾದ ಮೊತ್ತದಲ್ಲಿ ಶೇ.5ರಷ್ಟನ್ನು ಪ್ರೋತ್ಸಾಹಧನವನ್ನು ಸ್ವ-ಸಹಾಯ ಗುಂಪುಗಳಿಗೆ ನೀಡಲಾಗುವುದು.
ಅರ್ಹತೆಗಳು: ಮಹಿಳಾ ಸ್ಚ-ಸಹಾಯ ಸಂಘವು ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಿರಬೇಕು. ಹಾಗೂ ಪಂಚಸೂತ್ರಗಳನ್ನು ಅನುಸರಿಸುತ್ತಿರಬೇಕು. ಸಂಘಗಳ ಸದಸ್ಯರು ಕನಿಷ್ಠ 7 ನೇ ತರಗತಿ ವರೆಗೆ ಶಿಕ್ಷಣ ಹಾಗೂ ಎಲೆಕ್ಟ್ರಾನಿಕ್ ಪರಿಕರಗಳನ್ನು ಬಳಸುವ ಸಾಮರ್ಥ್ಯ ಹೋಂದಿರಬೇಕು. ಸ್ವ-ಸಹಾಯ ಸಂಘವು ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಬ್ಯಾಂಕಿನ ಮೂಲಕ ಅಥವಾ ಆಂತರಿಕಾ ಸಾಲ ಪಡೆದು ನಿಯಮಿತ ಸಾಲ ಮರುಪಾವತಿ ಮಾಡಿರಬೇಕು. ಸ್ವ-ಸಹಾಯ ಗುಂಪು ಸಂಬAಧಪಟ್ಟ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಡೇ-ನಲ್ಮ್ ಅಭಿಯಾನದಡಿ ನೋಂದಾಹಿಸಿಕೊAಡು ಮಾನ್ಯತೆ ಇರುವ ಎಂಐಎಸ್ ಕೋಡ್ ಹೊಂದಿರಬೇಕು. ಸ್ವ-ಸಹಾಯ ಗುಂಪು ರಚನೆಯಾಗಿ ಕನಿಷ್ಠ 3 ವರ್ಷ ಪೂರೈಸಿರಬೇಕು. ಸ್ವ- ಸಹಾಯ ಗುಂಪು ಮತ್ತು ಗುಂಪಿನ ಸದಸ್ಯರ ಯಾವುದೇ ಅಪರಾಧ ಅಥವಾ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹಿನ್ನೆಲೆಯನ್ನು ಹೊಂದಿರಬಾರದು. ಪಟ್ಟಣ ಪಂಚಾಯತಿಯಿAದ ನಿಗಧಿಪಡಿಸಲಾದ ಆಸ್ತಿ ತೆರಿಗೆ ಮತ್ತು ನೀರಿ ಶುಲ್ಕ ವಸೂಲಾತಿ ಗುರಿಗೆ ಕಾರ್ಯನಿರ್ವಹಿಸಲು ಆಸಕ್ತಿ ಮತ್ತು ಬದ್ದತೆಯನ್ನು ಹೊಂದಿರಬೇಕು.
ಆಸಕ್ತ ಮಹಿಳಾ ಸ್ವ-ಸಹಾಯ ಗುಂಪುಗಳು ನಿಗದಿತ ಅರ್ಜಿ ನಮೂನೆಯನ್ನು ಪಟ್ಟಣ ಪಂಚಾಯತ ಕಾರ್ಯಾಲಯ ಕನಕಗಿರಿ ಇಲ್ಲಿ ಪಡೆದು ಭರ್ತಿ ಮಾಡಿ ಡಿಸೆಂಬರ್ 30 ರೊಳಗಾಗಿ ಈ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ ಕನಕಗಿರಿ, ಡೇ-ನಲ್ಮ್ ವಿಭಾಗ ರವರನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಪ.ಪಂ. ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!