ಗಾಂಧೀ ಬಳಗದಿಂದ ಕೊಪ್ಪಳದಿಂದ ಕಾಮನೂರಿಗೆ ಪಾದಯಾತ್ರೆ

Get real time updates directly on you device, subscribe now.


ಕೊಪ್ಪಳ
ಆಕ್ಟೊಬರ್ ೦೨ ಗಾಂಧೀ ಜಯಂತಿ : ಇದ ನಿಮಿತ್ಯ ಶಿಕ್ಷಕರ ಕಲಾ ಸಂಘ ಮತ್ತು ಗಾಂಧಿ ಬಳಗ ಕೊಪ್ಪಳ ಹಾಗೂ ಇತರ ಸೇವಾ ಸಂಘಗಳ ಸಹಕಾರ ದೊಂದಿಗೆ ಅಕ್ಟೋಬರ್ ೨-೨೦೨೪ ರಂದು ಕೊಪ್ಪಳದ ಅಶೋಕ ವೃತ್ತದಿಂದ ಕಾಮನೂರ ಗ್ರಾಮಕ್ಕೆ ಪಾದಯಾತ್ರೆ ಹಮ್ಮಿಕೊಂಡಿದೆ.
ಕಳೆದ ವರ್ಷ ಇದೇ ಗಾಂಧೀ ಬಳಗದ ಸದಸ್ಯರು ಭಾನಾಪೂರ ಗ್ರಾಮಕ್ಕೆ ಪಾದಯಾತ್ರೆ ಮಾಡಿದ್ದರು. ಇದೀಗ ದುಶ್ಚಟ ಮುಕ್ತ ಗ್ರಾಮ ಕಾಮನೂರಿಗೆ ಹೋಗುತ್ತಿದ್ದಾರೆ. ಸರಳ ˌಸಾತ್ವಿಕ ನಡೆಯ ಮೂಲಕವೇ ಇಡೀ ಜಗತ್ತಿನ ಜನ ಮನಗೆದ್ದವರು ಮಹಾತ್ಮ ಗಾಂಧೀಜಿ .ಗ್ರಾಮಗಳ ಸ್ವಾವಲಂಬನೆ ಆಗದ ಹೊರತು ದೇಶ ಪ್ರಗತಿಯಾಗದು ಎಂಬುದು ಅವರ ನಿಲುವಾಗಿತ್ತು.ಗ್ರಾಮಗಳಲ್ಲಿ ಸಹಜ ಕೃಷಿ ˌಪರಸ್ಪರ ಸಹಕಾರ ˌ ಜಲ ಮತ್ತು ಪರಿಸರ ಸಂರಕ್ಷಣೆ ˌ ಜಾನುವಾರುಗಳ ಪಾಲನೆ ˌಪೋಷಣೆ ˌಮಿಶ್ರ ಕೃಷಿ ಪದ್ಧತಿ ಇರಬೇಕೆಂದು ಆಶಿಸಿದವರು. ಮಧ್ಯಪಾನ ˌತಂಬಾಕು ˌದುಶ್ಚಟಗಳು ಇರಬಾರದೆಂದು ಅವರು ಬಯಸಿದ್ದರು. ದುಶ್ಚಟ ಮುಕ್ತ ಗ್ರಾಮಗಳ ಸಂಖ್ಯೆ ಅಧಿಕವಾಗಲಿ ಎನ್ನುವಾಶಯದೊಂದಿಗೆ ಈ ನಡಿಗೆ. ಅಕ್ಟೋಬರ್ ೨-೨೦೨೪ ಬೆಳಗಿ ಜಾವ ೦೫;೩೦ ಕ್ಕೆ ಪಾದಯಾತ್ರೆ ಹೊರಡಲಿದೆ.
ಕಾಮನೂರ ಗ್ರಾಮದ ವಿಶೇಷತೆ
ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮವು ಸಹಿತ ಕೆಲವು ಆದರ್ಶ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ.ಈ ಊರಲ್ಲಿ ಹೋಟೆಲ್ ಗಳು ಇಲ್ಲ.ತಂಬಾಕು ಮತ್ತು ಮಧ್ಯಪಾನ ಮಾರಾಟ ನಿಷೇಧವಿದೆ.ಸಾವಿರಾರು ಜಾನುವಾರಗಳು ˌ ನೂರಾರು ಕುರಿ ಹಟ್ಟಿಗಳು ಇವೆ.ಸಾವಯವ ಕೃಷಿ ˌಜೇನು ಕೃಷಿ ˌ ಹೈನುಗಾರಿಕೆ ˌಮೀನುಗಾರಿಕೆಯ ವ್ಯವಸಾಯಗಾರರು ಇದ್ದಾರೆ. ಜಲ ಸಂರಕ್ಷಣೆಗಾಗಿ ಚಂದದೊAದು ಕೆರೆಯಿದೆ.ಅದರಲ್ಲಿ ಜಲ ಸಂಗ್ರಹವೂ ಇದೆ.ಹೀಗಾಗಿ ಇದೆಲ್ಲವನ್ನು ಪರಿಗಣಿಸಿ ಕಾಮನೂರ ಗ್ರಾಮಕ್ಕೆ ‘ಗಾಂಧೀ ಬಳಗ ಕೊಪ್ಪಳ ‘ ಮತ್ತು ಇತರ ಹಲವಾರು ಸೇವಾ ಸಂಘಗಳ ಸಹಯೋಗದೊಂದಿಗೆ ಕೊಪ್ಪಳದ ಅಶೋಕ ವೃತ್ತದಿಂದ ಪಾದಯಾತ್ರೆಯ ಮೂಲಕ ಕಾಮನೂರಿಗೆ ತೆರಳಾಗುತ್ತೆ.
ಸರಳವಾಗಿ ಗ್ರಾಮದ ಜನತೆಯೊಂದಿಗೆ ˌಕೃಷಿಕರೊಂದಿಗೆ ‘ಗಾಂಧೀ ಮತ್ತು ಸುಸ್ಥಿರ ಬದುಕು’ಎಂಬ ವಿಷಯದೊಂದಿಗೆ ಸಂವಾದ ಮಾಡಿ ‘ಗಾಂಧೀ ಜಯಂತಿ’ಯನ್ನು ಆಚರಿಸಲಾಗುತ್ತೆ. ಹಳ್ಳಿಯ ಪರಿಸರ, ಸೌಹಾರ್ದತೆ, ಕೃಷಿ ಸಂಸ್ಕೃತಿ, ಜಲಸಂರಕ್ಷಣೆ ಕಾಯಕ ಮುಂದುವರೆಯುವAತಾಗಲೆAದು ಪ್ರಗತಿಪರ ರೈತರನ್ನು, ದುಶ್ಚಟ ಮುಕ್ತ ಗ್ರಾಮಕ್ಕಾಗಿ ಕಠಿಣ ನಿಲುವುಗಳೊಂದಿಗೆ ಇಂದಿಗೂ ದುಶ್ಚಟ ಮುಕ್ತಗ್ರಾಮವನ್ನಾಗಿಸಿದ ಹಿರಿಯರನ್ನು ಗೌರವಿಸಲಾಗುತ್ತೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಶ್ವೇತವಸ್ತç ಧಾರಿಗಳಾಗಿರಬೇಕು. ಪಾದಯಾತ್ರೆಗೆ ಹೆಸರು ನೋಂದಾಯಿಸಲು ಬಸವರಾಜ ಸವಡಿ ೯೪೮೧೯೩೮೩೦೪, ರಾಮಣ್ಣ ಶ್ಯಾವಿ ೯೫೩೮೮೦೧೭೦೭, ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್ ೯೪೪೮೫೭೦೩೪೦, ಮಹಾಂತೇಶ ಚಳ್ಳಮರದ ೯೫೩೫೪೮೮೧೮೫, ಪ್ರಕಾಶಗೌಡ ೯೯೮೦೯೧೦೫೩೩, ಹನುಮಂತ ಕುರಿ ೯೮೮೦೭೫೯೭೧೨, ಪ್ರಾಣೇಶ ಪೂಜಾರ ೯೯೦೨೮೯೩೬೭೧, ನಾಗರಾಜನಾಯಕ ಡಿ.ಡೊಳ್ಳಿನ ೯೯೦೧೧೩೫೮೭೪, ಸಂಪರ್ಕಿಸಲು ಕೋರಿದೆ.
ಅದೇ ದಿನ ಸಂಜೆ ಗಾಂಧೀ ಬೆಳಕು ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ಜರುಗಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆ ಸಂಗಣ್ಣ ಕರಡಿ, ಉದ್ಘಾಟಕರಾಗಿ ಸಂಸದರಾದ ರಾಜಶೇಖರ ಹಿಟ್ನಾಳ, ಜ್ಯೋತಿ ಬೆಳಗಿಸುವವರು ಶಾಸಕರಾದ ರಾಘವೇಂದ್ರ ಹಿಟ್ನಾಳ, ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ವಿಧಾನ ಪರಿಸತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದಪಟೇಲ್, ಉಪನ್ಯಾಸ ಡಾ.ಪ್ರಭುರಾಜ ನಾಯಕ, ಸಾಧಕರಿಗೆ ಸನ್ಮಾನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ತಹಶೀಲ್ದಾರ ವಿಠ್ಠಲ್ ಚೌಗಲಾ, ಸಿ,ವಿ,ಚಂದ್ರಶೇಖರ, ವಾರ್ತಾಧಿಕಾರಿ ಗವಿಸಿದ್ಧಪ್ಪ ಹೊಸಮನಿ, ಉಮೇಶ ಪೂಜಾರ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕ್ರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಪ್ರಮೋದ ಕುಲಕರ್ಣಿ, ಗಾಂಧೀ ವಿಚಾರ ವೇದಿಕೆಯ ಬಸವರಾಜ ಸವಡಿ, ಶಿಕ್ಷಕರ ಸಂಘದ ಅದ್ಯಕ್ಷ ಹೊಳಿಬಸಯ್ಯ, ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಸಂಗೀತಗಾರರಾದ ಪಂಡಿತ ಶಂಕರ ಬಿನ್ನಾಳ, ಕರ್ನಾಟಕ ಸರ್ವೋದಯ ಮಂಡಳದ ಬಸವರಾಜ ಐಗೋಳ,
ಸಂಗೀತ ಕಾರ್ಯಕ್ರಮದಲ್ಲಿ ತಬಲಾ ಕುಮಾರೇಶ ಬಿನ್ನಾಳ, ಶಹನಾಯಿ ಪಂಡಿತ ಮಾರುತಿ ನಾವಲಗಿ, ಬಾನ್ಸುರಿ ಅಮರೇಶ ತಾವರಗೇರಾ, ಪ್ಯಾಡ ಪುಟ್ಟರಾಜ ಬಿನ್ನಾಳ ನಿರ್ವಹಿಸಲಿದ್ದಾರೆ.
ಸರಳವಾಗಿ ಬದುಕುತ್ತಿರುವ ನಾಲ್ಕು ಜನರಿಗೆ ಗೌರವ ಪ್ರತಿನಿತ್ಯವೂ ಅಳಿಲುಗಳಿಗೆ ಊಟ ಹಾಕುವ ಅಳಿಲು ಸೇವಕ ರಂಗಪ್ಪ, ಕೃಪಿ ಪಂಡಿತ ಬರಹಗಾರ ಆನಂದತೀರ್ಥ ಪ್ಯಾಟಿ, ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಇಲ್ಲದ್ದನ್ನು ಮನಗಂಡು, ಸ್ವಂತ ಹಣದಿಂದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಯಿ ಖರ್ಚುಮಾಡಿ ಕುಡಿಯುವ ನೀರು ಪೂರೈಸಿದ ಅಳವಂಡಿಯ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಯಲ್ಲಪ್ಪ ಬಂಡಿ, ಸಾವಯವ ದೇವರಾಜ ಮೇಟಿ. ಇವರನ್ನು ಗೌರವಿಸಲಾಗುವುದು.
ಆದ್ದರಿಂದ ತಾವುಗಳೆಲ್ಲಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಗೊಳಿಸಲು ಶಿಕ್ಷಕರ ಕಲಾ ಸಂಘದ ಅಧ್ಯಕ್ಷರಾದ ರಾಮಣ್ಣ ಶ್ಯಾವಿ ಮತ್ತು ಗಾಂಧಿ ಬಳಗದ ಮುಖ್ಯಸ್ಥರಾದ ಬಸವರಾಜ ಸವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!