ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ನೌಕರರ ಸಂಘದ ಪ್ರತಿಭಟನೆ

Get real time updates directly on you device, subscribe now.

ಕೊಪ್ಪಳ: ಗ್ರಾಮ ಆಡಳಿತ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ  ಹಾಗೂ ಸಮಸ್ಯೆಗಳಿಗೆ ಪರಿಹಾರ  ಕಲ್ಪಿಸಿ ಕೊಡುವಂತೆ ಒತ್ತಾಯಸಿ ನಗರದ ತಹಸಿಲ್ದಾರರ ಕಚೇರಿಯ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕಂದಾಯ ಇಲಾಖೆಯ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು 21 ತಂತ್ರಾಶಗಳನ್ನು ದಾಖಲು ಮಾಡಲು ಯಾವುದೇ ಸೌಲಭ್ಯ ನೀಡದಿರುವುದು,ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಉವ ಬಗ್ಗೆ,ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಿ ಕೊಡುವುದು,ಪ್ರೋಟೋಕಲಾ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈಬಿಡುವುದು,ಮುಟ್ಯೇಷನ ಅವಧಿಯನ್ನು ವಿಸ್ತರಣೆ ಮಾಡುವುದು,ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಮಾಡಿದರು.

ಈ ಸಮಯದಲ್ಲಿ ಗ್ರಾಮ ಆಡಳಿತ ಸಂಘದ ಜಿಲ್ಲಾಧ್ಯಕ್ಷರಾದ ಮಹ್ಮದ ಆಸೀಪ್‌ ಅಲಿ,ಉಪಾಧ್ಯಕ್ಷರಾದ ಬಸವರಾಜ ಲಂಬಾಣಿ,ತಾಲೂಕ ಅಧ್ಯಕ್ಷರಾದ ಗಂಗಾಧರ ಹಳ್ಳಿ,ಕಂದಾಯ ಇಲಾಖೆಯ ನೌಕರರ ಸಂಘ ಜಿಲ್ಲಾಧ್ಯಕ್ಷರಾದ ಮಂಜುನಾಥ ಮ್ಯಾಗಳಮನಿ,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!