ಕರವೇಯಿಂದ ಮೂಲಭೂತ ಸೌಕಾರ್ಯಕ್ಕಾಗಿ ನಗರಸಭೆಯ ಅಧ್ಯಕ್ಷರಿಗೆ ಮನವಿ

0

Get real time updates directly on you device, subscribe now.

ಕೊಪ್ಪಳ,ಸೆ.೨೪: ನಗರದ ವಾರ್ಡ ನಂ:೧ರ ಹುಲಿಕೆರೆ ರಸ್ತೆಯಲ್ಲಿ ಇರುವ ಸ.ಹಿ.ಪ್ರಾ ಶಾಲೆಯ ಹಿಂದುಗಡೆ ಬರುವ ಮನೆಗಳಿಗೆ ಮೂಲಭೂತ ವ್ಯವಸ್ಥೆಗಳಾದ ಗುಣಮಟ್ಟದ ಚರಂಡಿ, ಸಿ.ಸಿ ರಸ್ತೆ ಹಾಗೂ ಕುಡಿಯುವ ನೀರು ಒದಗಿಸಬೇಕು ಎಂದು ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್ ಅವರಿಗೆ ಕರವೇ ಜಿಲ್ಲಾ ಘಟಕದಿಂದ ಮಂಗಳವಾರದಂದು ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ನಗರದ ಹೃದಯ ಭಾಗದಲ್ಲಿರುವ ಶ್ರೀ ಸಿರಸಪ್ಪಯ್ಯನಮಠದ ಹತ್ತಿರ ವಾರ್ಡ ನಂ:೧ರ ಹುಲಿಕೆರೆ ರಸ್ತೆಯಲ್ಲಿ ಇರುವ ಸ.ಹಿ.ಪ್ರಾ ಶಾಲೆಯ ಹಿಂದುಗಡೆ ಬರುವ ಮನೆಗಳ ನಿವಾಸಿಗಳು ಯಾವುದೇ ರೀತಿಯಿಂದ ಮೂಲಭೂತ ಸೌಕರ್ಯಗಳಿಲ್ಲದೇ ಜೀವಿಸುತ್ತಿರುವುದು ಶೋಚನೀಯವಾಗಿದೆ.
ಕೊಪ್ಪಳ ಜಿಲ್ಲಾ ಕೇಂದ್ರವಾಗಿ ೨೫ ವರ್ಷಗಳು ಕಳೆದರೂ ಇಲ್ಲಿಯ ನಿವಾಸಿಗಳು ಸೌಲಭ್ಯಗಳಿಲ್ಲದೆ ಬದುಕು ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಳೆಗಾಲದಲ್ಲಿ ಅಕ್ಕಪಕ್ಕದ ಗುಡ್ಡ ಮತ್ತು ಕೆರೆಯ ನೀರು ಬಂದು ಕೆಸರು ಗದ್ದೆಯಂತಾಗಿ ಮಾರ್ಪಟ್ಟು ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ, ಸ.ಹಿ.ಪ್ರಾ ಶಾಲೆ ಇದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಹರಸಾಹಸಪಡುವಂತಾಗಿದ್ದು, ಈ ಸಮಸ್ಯೆಯ ಬಗ್ಗೆ ಸಾಕಷ್ಟು ಬಾರಿ ಸ್ಥಳೀಯರು ದೂರು ನೀಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದ ಅವರು ೧೫ ದಿನಗೊಳಗಾಗಿ ಮೂಲಭೂತ ವ್ಯವಸ್ಥೆಗಳಾದ ಗುಣಮಟ್ಟದ ಚರಂಡಿ, ಸಿ.ಸಿ ರಸ್ತೆ ಹಾಗೂ ಕುಡಿಯುವ ನೀರು ಒದಗಿಸಿಕೊಡಬೇಕು. ಇಲ್ಲದಿದ್ದರೆ, ಕರವೇ ಜಿಲ್ಲಾ ಘಟಕವು ಸ್ಥಳೀಯ ನಿವಾಸಿಗಳೊಂದಿಗೆ ಜೊತೆಗೂಡಿ ತಮ್ಮ ಕಛೇರಿಗೆ ಮುತ್ತಿಗೆ ಹಾಕಿ ಉಘ್ರವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಹೇಳಿದರು.
ಮನವಿ ಪತ್ರ ಸ್ವೀಕರಿಸಿ ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್ ಮಾತನಾಡಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಅರಿತು ತ್ವರಿತವಾಗಿ ಕಾಮಗಾರಿಯನ್ನು ಪ್ರಾರಂಭಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು, ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ತಾಲೂಕಾ ಪ್ರ.ಕಾರ್ಯದರ್ಶಿ ನಿಂಗಪ್ಪ ಮೂಗಿನ, ನಗರ ಘಟಕದ ಸುಲೇಮಾನ್ ಕರಮುಡಿ, ಹಾಗೂ ಅನೇಕರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: